ಸುದ್ದಿಮೂಲ ವಾರ್ತೆ ಕಾರಟಗಿ, ಸೆ.29:
ಉಳೇನೂರು ಏತ ನೀರಾವರಿ ಯೋಜನೆಯ ಮೂಲಕ ನಾಲ್ಕು ದಶಕಗಳ ನೀರಿನ ಸಮಸ್ಯೆೆ ಶಾಶ್ವತವಾಗಿ ಪರಿಹರಿಸಿದ್ದೇನೆ ಎಂದು ಕೊಪ್ಪಳ ಜಿಲ್ಲಾಾ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಈ ಯೋಜನೆಯಲ್ಲಿ ನಿರ್ಮಾಣಗೊಳಿಸಿದ ಪಂಪ್ಹೌಸ್, ಜಾಕ್ವೆಲ್, ವಿದ್ಯುತ್ ಘಟಕ ಸೇರಿದಂತೆ ಇತರ ಕಾಮಗಾರಿಗಳನ್ನು ಉದ್ಘಾಾಟಿಸುವ ಮೂಲ ಲೋಕಾರ್ಪಣೆಗೊಳಿಸಿ ಬಳಿಕ ಕಾರಟಗಿ ತಾಲೂಕಿನ ಯರಡೋಣ ಗ್ರಾಾಮದ ಶ್ರೀಮುರುಡಬಸವೇಶ್ವರ ದೇವಸ್ಥಾಾನದ ಆವರಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ವೇದಿಕೆ ಕಾರ್ಯಕ್ರಮ ಉದ್ಘಾಾಟಿಸಿ ಸಚಿವರು ಮಾತನಾಡಿದರು.
ತುಂಗಭದ್ರಾಾ ಎಡದಂಡೆ ಮುಖ್ಯ ನಾಲಾ ವ್ಯಾಾಪ್ತಿಿಯ 31ನೇ ಉಪ ಮತ್ತು ಇದರ ಕೆಳ ಮತ್ತು ಕೊನೆ ಭಾಗದ ವಿವಿಧ ವಿತರಣಾ ಕಾಲುವೆಗಳ ಕಾರಟಗಿ ಮತ್ತು ಸಿಂಧನೂರು ತಾಲೂಕಿನ ನಾನಾ ಗ್ರಾಾಮಗಳ 15,605 ಎಕರೆಯಷ್ಟು ನೀರು ಬಾಧಿತ ಪ್ರದೇಶಕ್ಕೆೆ ನಿರುಣಿಸುವ ಯೋಜನೆ ಇದಾಗಿದೆ ಎಂದು ಸಚಿವರು ಹೇಳಿದರು.
ಹಿಂಗಾರು ಮತ್ತು ಮುಂಗಾರು ಹಂಗಾಮಿನಲ್ಲಿ ಕಳೆದ 40 ವರ್ಷಗಳಿಂದ ಕೆಳ ಮತ್ತು ಕೊನೆ ಭಾಗದ ಕಾರಟಗಿ ತಾಲೂಕಿನ ಬೂದಗುಂಪಾ, ತಿಮ್ಮಾಾಪುರ, ಹಾಲಸಮುದ್ರ, ಯರಡೋಣ, ಈಳಿಗನೂರು, ಈಳಿಗನೂರು ಕ್ಯಾಾಂಪ್, ಉಳೇನೂರು, ಊಳೇನೂರು ಕ್ಯಾಾಂಪ್, ಬೆನ್ನೂರು, ಶಾಲಿಗನೂರು, ಕಕ್ಕರಗೋಳ, ನಂದಿಹಳ್ಳಿಿ ಹಾಗೂ ಸಿಂಧನೂರು ತಾಲೂಕಿನ ಸಿಂಗಾಪುರ, ಮುಕ್ಕುಂದಾ, ಹುಡಾ ಹಾಗೂ ಸಿದ್ರಾಾಂಪುರ ಗ್ರಾಾಮಗಳ ರೈತರು ಪ್ರತಿ ವರ್ಷ ಕಾಲುವೆಗೆ ನೀರು ಹರಿಸಿದಾಗ ತಮ್ಮ ಭೂಮಿಗೆ ಸಮರ್ಪಕ ನೀರು ಪಡೆಯಲು ಎಡದಂಡೆ ಮುಖ್ಯ ಕಾಲುವೆ ಮೇಲಿನ 31ನೇ ಉಪ ಕಾಲುವೆ ಹತ್ತಿಿರ ಮತ್ತು ನೀರಾವರಿ ಇಲಾಖೆ ಮುಂದೆ ನಿರಂತರ ಬೃಹತ್ ಪ್ರತಿಭಟನೆ ಮಾಡುತ್ತಾಾ ಬಂದಿದ್ದರು.
ಸುಮಾರು 15 ಸಾವಿರಕ್ಕೂ ಅಧಿಕ ಎಕರೆ ಭೂಮಿಗೆ ತಲುಪುದೇ ರೈತರು ಪ್ರತಿವರ್ಷ ನೀರಿಗಾಗಿ ಸಾಕಷ್ಟು ಹೋರಾಟ ಮಾಡುತ್ತಾಾ ಬಂದಿದ್ದರು. ನೀರಿನ ಕೊರತೆಯಾಗಿ ಭತ್ತದ ಬೆಳೆ ನಾಶದಿಂದ ಆರ್ಥಿಕ ಸಂಕಷ್ಟಕ್ಕೀಡಾಗಿದ್ದರು. ಹಿಂದೆ ನಾನು ಸಣ್ಣ ನೀರಾವರಿ ಸಚಿವನಾಗಿದ್ದ ಸಮಯದಲ್ಲಿ ಈ ಭಾಗದ ರೈತರ ಜಮೀನುಗಳಿಗೆ ಸಕಾಲಕ್ಕೆೆ ಸಮರ್ಪಕ ನೀರು ದೊರಕಿಸಿಕೊಡಲು ರಾಜ್ಯ ಜಲ ಸಂಪನ್ಮೂಲ ಇಲಾಖೆ, ನೀರಾವರಿ ನಿಗಮ ನಿಯಮಿತದ 4701ರ ಯೋಜನೆಯಲ್ಲಿ 62.61ಕೋಟಿರೂ. ಊಳೇನೂರು ಏತ ನೀರಾವರಿ ಯೋಜನೆಯನ್ನು ತಯಾರಿಸಿ ಅನುದಾನ ಮಂಜೂರು ಮಾಡಿಸಿ ಟೆಂಡರ್ ಪ್ರಕ್ರಿಿಯೆ ನಡೆಸಿದ್ದೆೆ. ಅಷ್ಟರೊಳಗೆ ಆಗಿನ ಸರ್ಕಾರದ ಅವಧಿ ಪೂರ್ಣಗೊಂಡಿತು. ನಂತರ ನಡೆದ ಚುನಾವಣೆಯಲ್ಲಿ ತಾವು ಪರಾಭವಗೊಂಡಿದ್ದು, ನಂತರ ಬಂದ ಶಾಸಕರು ಈ ಯೋಜನೆಗೆ ಚಾಲನೆ ನೀಡಿದ್ದರು.
18 ತಿಂಗಳಲ್ಲಿ ಈ ಯೋಜನೆ ಕಾರ್ಯರೂಪಕ್ಕೆೆ ಬರಬೇಕಿತ್ತು. ಆದರೆ ಹಿಂದಿನ ಶಾಸಕರ ದಿವ್ಯ ನಿರ್ಲಕ್ಷದಿಂದ ನೆನಗುದಿಗೆ ಬಿದ್ದಿತ್ತು. ನಾನು ಪುನಃ ಶಾಸಕನಾಗಿ ಸಚಿವನಾದ ಬಳಿಕ ಮೊಟ್ಟ ಮೊದಲ ಬಾರಿಗೆ ಸದರಿ ಯೋಜನೆ ಕಾರ್ಯರೂಪಕ್ಕೆೆ ತರಲೇಬೇಕೆಂದು ಪಣತೊಟ್ಟು ಬಾಕಿ ಉಳಿದೆಲ್ಲಾಾ ಕಾಮಗಾರಿಗಳನ್ನು ಕಾರ್ಯರೂಪಕ್ಕೆೆ ತರುವ ಮೂಲಕ ಇಂದು ಲೋಕಾರ್ಪಣೆ ಮಾಡಿದ್ದೇನೆ ಎಂದರು.
ತುಂಗಭದ್ರಾಾ ನದಿಯಲ್ಲಿ ನೀರು ಹರಿಯುವ ಸಮಯದಲ್ಲಿ ಮಾತ್ರ ಎಡದಂಡೆ ನಾಲಾ 31ನೇ ಉಪ ಕಾಲುವೆಯ 31/4ರ ಬಳಿ ಮತ್ತು 31/8ರ ಕೆಳ ಭಾಗದ ವಿತರಣಾ ಕಾಲುವೆಗಳಿಗೆ 106 ಕ್ಯೂಸೆಕ್ ಪ್ರಮಾಣದಷ್ಟು ಪೈಪ್ಲೈನ್ ಮೂಲಕ ಉಳೇನೂರು ಬಳಿಯ ಪಂಪ್ಹೌಸ್ನಿಂದ ನೀರು ನದಿಯ ನೀರೆತ್ತಿಿ ಪೂರೈಕೆ ಮಾಡಲಾಗುವುದು. ಮುಂದೆ ಐದು ವರ್ಷಗಳವರೆಗೆ ಸಂಬಂಧಿಸಿದ ಇಲಾಖೆ ನಿರ್ವಹಣೆ ಮಾಡಲಿದೆ ಬಳಿಕ ರೈತರು ಒಗ್ಗಟ್ಟಾಾಗಿ ಈ ಯೋಜನೆ ಉಳಿಸಿಕೊಂಡು ಶಾಶ್ವತವಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಸಾನಿಧ್ಯವಹಿಸಿದ್ದ ಬೂದಗುಂಪಾ-ತಿಮ್ಮಾಾಪು-ಹಾಲಸಮುದ್ರ ಮಠದ ಶ್ರೀಸಿದ್ಧೇಶ್ವರ ಸ್ವಾಾಮಿಗಳು ಮಾತನಾಡಿ, ಈ ಮಹತ್ವಾಾಕಾಂಕ್ಷಿ ಯೋಜನೆಯನ್ನು ಕಾರ್ಯಗತಗೊಳಿಸಿ ಸಚಿವ ಶಿವರಾಜ ತಂಗಡಗಿ ಅವರು ರೈತರ ಪಾಲಿಗೆ ಆಧುನಿಕ ಭಗೀರಥರಾಗಿದ್ದಾಾರೆ ಎಂದು ಬಣ್ಣಿಿಸಿದರು.
ನೀರು ಬಳಕೆದಾರರ ಸಂಘದ ಸಂಗಮೇಶಗೌಡ ಮಾತನಾಡಿ, ತುಂಗಭದ್ರಾಾ ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆೆ ಒಳಪಟ್ಟಿಿದ್ದರೂ ಕಳೆದ ನಾಲ್ಕು ದಶಕಗಳಿಂದ ಕೆಳ ಮತ್ತು ಕೊನೆ ಭಾಗದ 15 ಸಾವಿರಕ್ಕೂ ಅಧಿಕ ಜಮೀನಿಗೆ ನೀರು ತಲುಪದ ಕಾರಣ ಆಗ ಎಕರೆಗೆ ಕೇವಲ ನಾಲ್ಕು ಲಕ್ಷ ರೂ. ಇದ್ದ ಬೆಲೆ ಈಗ ಉಳೇನೂರು ಏತ ನೀರಾವರಿ ಯೋಜನೆಯಿಂದ ಇಂದು ಎಕರೆಗೆ 25 ಲಕ್ಷರೂ. ಬೆಲೆ ಬಂದಿದೆ. ನೀರಲ್ಲದ ಕಾರಣ ಈ ಪ್ರದೇಶದ ರೈತರು ಕೃಷಿ ಚಟುವಟಿಕೆಯನ್ನೇ ಬಿಟ್ಟು ಉಪಜೀವನಕ್ಕಾಾಗಿ ದೂರದ ನಗರಗಳಿಗೆ ತೆರಳಿದ್ದರು. ಈಗ ಈ ಯೋಜನೆ ಅನ್ನದಾತರಿಗೆ ಶಾಶ್ವತ ನೀರುಣಿಸಲು ಸಚಿವ ಶಿವರಾಜ್ ತಂಗಡಿಯವರಿಗೆ ನಾವೆಲ್ಲರೂ ಋಣಿಯಾಗಿರಬೇಕು. ಈ ಯೋಜನೆಗೆ ಶಿವರಾಜ್ ತಂಗಡಗಿ ಯೋಜನೆ ಎಂದು ಹೆಸರಿಡಬೇಕೆಂದರು.
ಈ ಯೋಜನೆಗೊಳಪಟ್ಟ ನಾನಾ ಗ್ರಾಾಮಗಳ ರೈತರು ಸಚಿವ ಶಿವರಾಜ ತಂಗಡಗಿಯವರಿಗೆ ಬೆಳ್ಳಿಿ ಗದೆ, ಬೆಳ್ಳಿಿ ಕಿರೀಟ ತೊಡಿಸಿ ಸನ್ಮಾಾನಿಸಿ ಗೌರವಿಸಿ ಬಳಿಕ ಮಾತನಾಡಿ ಸಚಿವರನ್ನು ಕಾರ್ಯವನ್ನು ಹೃದಯತುಂಬ ಕೊಂಡಾಡಿದರು.
ಜಿ.ಪಂ.ಮಾಜಿ ಉಪಾಧ್ಯಕ್ಷ ಬಿ.ಬಸವರಾಜಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಶಿವರೆಡ್ಡಿಿ ವಕೀಲರು, ಶಶಿಧರಗೌಡ ಪಾಟೀಲ್, ಊಳೇನೂರು, ಬೆನ್ನೂರು, ಬೂದಗುಂಪಾ, ಯರಡೋಣಾ ಗ್ರಾಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರು, ನೀರಾವರಿ ಇಲಾಖೆ ಇಇ ಎಂ.ಎಸ್.ಗೋಡೇಕರ್, ಪ್ರಭಾರಿ ಎಇಇ ನಾಗಪ್ಪ, ಮುಖಂಡರಾದ ಜಿ.ಸಿದ್ಧನಗೌಡ, ಶರಣೇಗೌಡ ಮಾಲಿ ಪಾಟೀಲ್, ಚನ್ನಬಸಪ್ಪ ಸುಂಕದ್, ಅಮರೇಶ ಪಾಟೀಲ್, ವಿಜಯ್ ಕೋಲ್ಕಾಾರ್, ರುದ್ರಗೌಡ ಪಾಟೀಲ್, ಅಮರೇಶಪ್ಪ ಬರಗೂರು, ಜನಗಂಡೆಪ್ಪ ಸಿದ್ಧಾಾಪುರ, ಶರಣಪ್ಪ ಸಾಹುಕಾರ ಕಕ್ಕರಗೋಳ ಸೇರಿದಂತೆ ಅನೇಕ ಮುಖಂಡರಿದ್ದರು.
*ತುಂಗಭದ್ರಾಾ 31ನೇ ಉಪ ಕಾಲುವೆ ಕೊನೆ ಭಾಗದ 15 ಸಾವಿರ ಎಕರೆ ಜಮೀನಿಗೆ ನೀರುಣಿಸುವ ಉಳೇನೂರು ಏತ ನೀರಾವರಿ ಯೋಜನೆ * ಲೋಕಾರ್ಪಣೆ ಮಾಡಿದ ಸಚಿವ ಶಿವರಾಜ ತಂಗಡಗಿ ನಾಲ್ಕು ದಶಕದ ರೈತರ ನೀರಿನ ಸಮಸ್ಯೆೆಗೆ ಶಾಶ್ವತ ಪರಿಹಾರ
