ಸುದ್ದಿಮೂಲ ವಾರ್ತೆ ರಾಯಚೂರು, ಸೆ.30:
ದಸರಾ ಹಬ್ಬದ ಹಿನ್ನೆೆಲೆಯಲ್ಲಿ ರಾಯಚೂರಿನ ಮಾರುಕಟ್ಟೆೆಯಲ್ಲಿ ಜನರ ಭಕ್ತಿಿಯ ಮುಂದೆ ಲಕ್ಷ್ಮೀ(ಹಣ)ಯ ಬಗ್ಗೆೆ ಯೋಚಿಸದೆ ಸಾಮಾಗ್ರಿಿ ಖರೀದಿಸುವ ಹುಮ್ಮಸ್ಸು ಕಂಡು ಬಂದಿತು.
ನಗರದ ಬಟ್ಟೆೆ ಬಜಾರ್, ತರಕಾರಿ ಮಾರುಕಟ್ಟೆೆಘಿ, ಬಂಗಿಕುಂಟಾ, ನೇತಾಜಿ ರಸ್ತೆೆಘಿ, ತೀನ್ಕಂದಿಲ್ ಬಳಿ ಬೆಳಿಗ್ಗೆೆಯಿಂದ ರಾತ್ರಿಿ 9ರ ವರೆಗೆ ಜನ ದಟ್ಟಣೆ ಜಾತ್ರೆೆಯಂತಾಗಿತ್ತುಘಿ.
ತರಕಾರಿ ಮಾರುಕಟ್ಟೆೆ ಮುಂಭಾಗ ಮತ್ತು ಬಂಗಿಕುಂಟಾ ರಸ್ತೆೆಯಲ್ಲಂತೂ ಸಂಚಾರಕ್ಕೆೆ ಸಂಕಟ ಎದುರಾಗಿತ್ತುಘಿ. ಹೀಗಾಗಿ, ಪೊಲೀಸರು ವಾಹನಗಳ ಆ ರಸ್ತೆೆಗಳಿಗೆ ಬಿಡದೆ ಕಣ್ಗಾಾವಲು ಹಾಕಿದ್ದು ಕಂಡು ಬಂದಿತು.
ಸರ್ಾ ಬಜಾರ, ಪಟೇಲ್ ರಸ್ತೆೆಘಿ, ಮಾರುಕಟ್ಟೆೆ ರಸ್ತೆೆಯಲ್ಲಿ ಜನ ಸಂಚಾರ ದಟ್ಟಣೆ ಹೆಚ್ಚಿಿದ್ದರಿಂದ ಆಟೋ, ಕಾರು ಮತ್ತಿಿತರ ವಾಹನಗಳು ಬಂದರೆ ಸಂಚಾರ ದಟ್ಟಣೆಯಾಗಿ ಸಂಕಟ ಅನುಭವಿಸುವಂತಾಗಿದ್ದರಿಂದ ಎಚ್ಚೆೆತ್ತ ಪೊಲೀಸರು ಆಟೋ, ಕಾರುಗಳನ್ನು ಆ ರಸ್ತೆೆಯಲ್ಲಿ ಸಂಚಾರ ನಿಷೇಧಿಸಿ ದ್ವಿಿಚಕ್ರ ವಾಹನಕ್ಕೆೆ ಮಾತ್ರ ಅವಕಾಶ ನೀಡಿದ್ದರು. ಜನದಟ್ಟಣೆಯಿಂದಾಗಿ ರಸ್ತೆೆಯಲ್ಲಿ ಜನವೋ ಜನ ಕಂಡು ಬಂದಿತು.
ಖಂಡೆ ಪೂಜೆ ಹಿನ್ನೆೆಲೆಯಲ್ಲಿ ವಾಹನಗಳ ಪೂಜೆಗಾಗಿ ಬಾಳೆ ದಿಂಡು, ಹೂವು, ಹಣ್ಣು ಹಂಪಲು, ಕುಂಬಳಕಾಯಿ, ತರಕಾರಿ ಬೆಲೆ ಕಳೆದ ಬಾರಿಗಿಂತ ಈ ಬಾರಿ ತುಸು ಏರಿಕೆ ಕಂಡಿದ್ದು ಜೇಬಿಗೆ ಕತ್ತರಿ ಬೀಳುವಂತಾಗಿದ್ದರೂ, ಖರೀದಿಗೆ ಹಿಂದೇಟು ಹಾಕದೆ ಹುಮ್ಮಸ್ಸು ತೋರಿಸಿದರು.
ಒಂದು ಕುಂಬಳಕಾಯಿಗೆ ಗಾತ್ರಕ್ಕೆೆ ತಕ್ಕಂತೆ 300ರೂ ಗಳವರೆಗೆ ದರ ನಿಗದಿಯಾಗಿದ್ದರೆ ಕೆಜಿ ಚೆಂಡು ಹೂ 60-70 ರೂ, ಮೊಳ ಮಲ್ಲಿಗೆಗೆ 40 ರೂ., ಜೋಡಿ ಬಾಳೆ ದಿಂಡಿಗೆ 60 ರೂ., ತರಕಾರಿ ಬೆಲೆಯೂ ಹೆಚ್ಚಳವಾಗಿತ್ತುಘಿ.
ವಿವಿಧ ಸಾಮಾಗ್ರಿಿಗಳು ಅದರ ಗಾತ್ರ, ತಾಜಾತನದ ಮೇಲೆ ಬೆಲೆ ಏರಿಳಿತವಿತ್ತುಘಿ. ಹೊಸ ಬಟ್ಟೆೆಯ ಖರೀದಿಗೆ ಮುಂದಾದವರ ಜೇಬಿಗೆ ಮಾತ್ರ ಕತ್ತರಿ ಪ್ರಯೋಗದ ಅನುಭವ ಆಯಿತು.
ಒಟ್ಟಾಾರೆ ನಾಡ ಹಬ್ಬ ದಸರಾಗೆ ಹಬ್ಬದ ಸಾಮಾಗ್ರಿಿ ಖರೀದಿಗೆ ಜನ ಮಾತ್ರ ಖರೀದಿಗೆ ಹಿಂದೇಟು ಹಾಕದೆ ದೇವಿ ಆರಾಧನೆಗೆ ಹಿಂಜರಿಯಲಿಲ್ಲ ಎನ್ನುವುದು ಗಮನಾರ್ಹವಾಗಿತ್ತುಘಿ.
ದಸರಾ ಹಬ್ಬಕ್ಕೆೆ ಖರೀದಿ ಜೋರು, ಲೆಕ್ಕಕ್ಕಿಿಲ್ಲದಂತಾದ ಧನಲಕ್ಷ್ಮಿಿ

