ಸುದ್ದಿಮೂಲ ವಾರ್ತೆ ಬೆಂಗಳೂರು, ಅ.02:
ಉಪಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ್ ಅವರ ಶಕ್ತಿಿ ಮತ್ತು ಶ್ರಮ ಕಾಂಗ್ರೆೆಸ್ ಹೈಕಮಾಂಡ್ ಪರಿಗಣಿಸಿ ಅವರಿಗೆ ಮುಖ್ಯಮಂತ್ರಿಿ ಹುದ್ದೆ ನೀಡಬೇಕು ಎಂದು ಹೇಳಿಕೆ ನೀಡಿದ ಶಾಸಕ ಎಚ್.ಡಿ. ರಂಗನಾಥ್ ಹಾಗೂ ಕಾಂಗ್ರೆೆಸ್ ನಾಯಕ ಎಲ್.ಆರ್.ಶಿವರಾಮೇಗೌಡ ಅವರಿಗೆ ನೋಟಿಸ್ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಗಾಂಧಿ ಜಯಂತಿ ಆಚರಣೆ ವೇಳೆ ಅವರು ಮಾಧ್ಯಮದವರ ಪ್ರಶ್ನೆೆಗಳಿಗೆ ಉತ್ತರಿಸಿದರು.
ಅಧಿಕಾರ ಹಸ್ತಾಾಂತರ ಬಗ್ಗೆೆ ಯಾರು ಬಹಿರಂಗವಾಗಿ ಮಾತನಾಡಬಾರದು ಎಂದು ಹೈಕಮಾಂಡ್ ಎಚ್ಚರಿಕೆ ನೀಡಿದೆ. ಇದನ್ನು ಉಲ್ಲಂಘಿಸಿ ಶಾಸಕ ಡಾ. ರಂಗನಾಥ್ ಹಾಗೂ ಎಲ್.ಆರ್.ಶಿವರಾಮೇಗೌಡ ಹೇಳಿಕೆ ನೀಡಿದ್ದ ಕಾರಣ ಕೆಪಿಸಿಸಿ ಶಿಸ್ತು ಸಮಿತಿಯ ಅಧ್ಯಕ್ಷ ರಹೆಮಾನ್ ಖಾನ್ ಇಬ್ಬರಿಗೆ ನೋಟಿಸ್ ಜಾರಿ ಮಾಡಿ ವಾರದಲ್ಲಿ ಉತ್ತರ ನೀಡುವಂತೆ ಸೂಚಿಸಿದ್ದಾಾರೆ.
ಅಧಿಕಾಕರ ಹಸ್ತಾಾಂತವ ಹೈಕಮಾಂಡ್ ಮಾಡುತ್ತದೆ. ಈ ಬಗ್ಗೆೆ ಶಾಸಕರಿಗೆ ಯಾವುದೇ ಅಧಿಕಾರ ಇಲ್ಲ. ಬಹಿರಂಗವಾಗಿ ಈ ಬಗ್ಗೆೆ ಹೇಳಿಕೆ ನೀಡುವುದು ಪಕ್ಷ ವಿರೋಧಿ ಎಂದು ಪರಿಗಣಿಸಿ ಇಬ್ಬರಿಗೂ ನೋಟಿಸ್ ನೀಡಲಾಗುವುದು ಎಂದು ತಿಳಿಸಿದ್ದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಕುಣಿಗಲ್ ಶಾಸಕ ಡಾ. ರಂಗನಾಥ್ ರಾಜಕೀಯ ಎಂಬುದು ಕೃಷಿಯಿದ್ದಂತೆ. ಹೆಚ್ಚು ಶ್ರಮ ಹಾಕಿದಷ್ಟು ಉತ್ತಮ ರೀತಿಯಲ್ಲಿ ಬೆಳೆ ಬರುತ್ತದೆ. ಕಠಿಣ ಪರಿಶ್ರಮದ ಮೇಲೆ ನಮಗೆ ಹೆಚ್ಚು ನಂಬಿಕೆಯಿದೆ. ಇವರ ಮೇಲೆ ಭಗವಂತನ ಹಾರೈಕೆ, ಜನರ ಪ್ರೀೀತಿ, ವಿಶ್ವಾಾಸ, ಹೈಕಮಾಂಡ್ ಆಶೀರ್ವಾದವಿದೆ. ರಾಜ್ಯದಲ್ಲಿ ಕಾಂಗ್ರೆೆಸ್ 140 ಸ್ಥಾಾನ ಗೆದ್ದಿರುವುದ ಹಿಂದೆ ಡಿ.ಕೆ.ಶಿವಕುಮಾರ್ ಅವರ ಶಕ್ತಿಿ ಹಾಗೂ ಶ್ರಮವಿದೆ ಎಂದು ಅನೇಕ ನಾಯಕರು ಹೇಳುತ್ತಾಾರೆ. ಇದನ್ನು ಪಕ್ಷದ ಹೈಕಮಾಂಡ್ ಪರಿಗಣಿಸಿ ಸೂಕ್ತ ಸ್ಥಾಾನಮಾನ ನೀಡಬೇಕು ಎಂದು ಹೇಳಿದರು.
ಡಿಸಿಎಂ ಕೆ.ಶಿವಕುಮಾರ್ ಅವರು ನಮಗೆಲ್ಲಾ ರಾಜಕೀಯ ಗುರುಗಳು. ಅವರ ಸಮಾಜಸೇವೆ, ಆಡಳಿತ ವೈಖರಿ, ಅಭಿವೃದ್ಧಿಿ ಮಾದರಿ ನಡೆ, ನುಡಿಗಳಲ್ಲಿ ನೋಡುತ್ತಾಾ ಬಂದಿದ್ದೇವೆ. ಅದೇ ರೀತಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾಾರಂಟಿ ಯೋಜನೆಗಳು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿವೆ ಎಂದು ಹೇಳಿದ್ದರು.
ಎಚ್ಡಿಿಕೆ ರೀತಿ ಲೂಟಿ ಮಾಡಿಲ್ಲ
ಕುಮಾರಸ್ವಾಾಮಿ ಅವರೇ, ನಾನು ಕುಣಿಗಲ್ ಜನತೆಯ ಪ್ರೀೀತಿ ಮತ್ತು ವಿಶ್ವಾಾಸವನ್ನು ಲೂಟಿ ಮಾಡಿದ್ದೇನೆ. ನೀವು ಹೇಳುವ ಅರ್ಥದ ’ಲೂಟಿ’ಯನ್ನು ನಾನು ಎಂದಿಗೂ ಮಾಡಿಲ್ಲ. ಹಿರಿಯರಾದ ನಿಮ್ಮ ಮಾತು ಮತ್ತು ನಡವಳಿಕೆಗಳನ್ನು ನೋಡಿ ನಾವು ಅನುಸರಿಸಬೇಕು. ಆದರೆ, ನೀವು ಇದಕ್ಕೆೆ ವಿರುದ್ಧವಾಗಿ ನಡೆದುಕೊಳ್ಳುದ್ದೀರಿ. ಈ ರೀತಿ ಪದ ಬಳಕೆ ಮಾಡುವುದನ್ನು ನಿಲ್ಲಿಸಿ. ನಮ್ಮಂತ ಯುವ ಶಾಸಕರ ತೇಜೋವಧೆ ಕೆಲಸ ಮಾಡಬೇಡಿ. ನಾನು ಲೂಟಿ ಮಾಡಿದ್ದರೆ ಪೂರಕವಾದ ದಾಖಲೆಗಳನ್ನು ಸಲ್ಲಿಸಿ ಎಂದು ಸವಾಲು ಹಾಕಿದರು.
ಕುಮಾರಸ್ವಾಾಮಿ ಅವರು ದೆಹಲಿಯಲ್ಲಿ ಮಾಧ್ಯಮಗೋಷ್ಠಿಿ ನಡೆಸಿ, ಕುಣಿಗಲ್ ಕ್ಷೇತ್ರ ಬೆಂಗಳೂರು ದಕ್ಷಿಣಕ್ಕೆೆ ಸೇರಿಸುವ ಹುನ್ನಾಾರ ಮಾಡಿರುವ ಶಾಸಕ ರಂಗನಾಥ್ ಅವರು ಲೂಟಿ ಎಸಗುತ್ತಿಿದ್ದಾರೆ ಎಂದು ಆರೋಪ ಮಾಡಿದ್ದಾರೆ. ನಾನು ಮಧ್ಯಮ ಕುಟುಂಬದಿಂದ ಬಂದಂತಹ ವ್ಯಕ್ತಿಿ. ಕುಣಿಗಲ್ ಜನತೆಯ ಆಶೀರ್ವಾದದಿಂದ ಕೆಲಸ ಮಾಡುತ್ತಿಿದ್ದೇನೆ. ಆದರೆ ಕುಮಾರಸ್ವಾಾಮಿ ಅವರ ಆರೋಪ ಕೇಳಿ ನನಗೆ ಬಹಳ ಬೇಸರವಾಯಿತು ಎಂದರು.
ಕುಮಾರಸ್ವಾಾಮಿ ಕುಟುಂಬದವರು ಏನೇ ಮಾಡಿದರೂ ಅದು ಉತ್ಕೃಷ್ಟ, ಬೇರೆಯವರು ಮಾಡಿದರೆ ನಿಕೃಷ್ಟ. ಪ್ರತಿಯೊಂದರಲ್ಲೂ ತಪ್ಪುು ಹುಡುಕುತ್ತಾಾರೆ. ಕುಮಾರಸ್ವಾಾಮಿಯವರು ಎರಡು ಬಾರಿ ಈ ರಾಜ್ಯದ ಮುಖ್ಯಮಂತ್ರಿಿಗಳಾಗಿದ್ದವರು. ನಾನೂ ಸಹ ಅವರ ಕಾಲದಲ್ಲಿ ಶಾಸಕನಾಗಿದ್ದೆ. ರಾಜಕೀಯ ಅನುಭವವಿರುವ ವ್ಯಕ್ತಿಿ ಲೂಟಿ ಎನ್ನುವ ಆರೋಪ ಮಾಡಿರುವುದು ನನಗೆ ವೈಯಕ್ತಿಿಕವಾಗಿ ಬೇಸರವನ್ನು ಉಂಟು ಮಾಡಿದೆ ಎಂದು ತಿಳಿಸಿದರು.