ಸುದ್ದಿಮೂಲ ವಾರ್ತೆ ಬೆಂಗಳೂರು, ಅ.02:
ಅಧಿಕಾರ ಹಂಚಿಕೆ ವಿಚಾರದಲ್ಲಿ ಸಿಎಂ, ನಾನು ಸೇರಿದಂತೆ ಯಾರೇ ಮಾತನಾಡಿದರೂ ಅದು ಪಕ್ಷ ವಿರೋಧಿ ಕೆಲಸ. ಸಿಎಂ ಸಿದ್ದರಾಮಯ್ಯ ಹಾಗೂ ನಾನು ನಮ್ಮ ಹೈಕಮಾಂಡ್ ಏನು ಹೇಳುತ್ತದೆಯೋ ಅದನ್ನು ಕೇಳುತ್ತೇವೆ ಎಂದು ಉಪ ಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಮಹಾತ್ಮಾಾ ಗಾಂಧಿ ಹಾಗೂ ಲಾಲ್ ಬಹರ್ದ್ದೂ ಶಾಸಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಎಲ್ಲರೂ ನಮ್ಮ ಪಕ್ಷದ ಶಿಸ್ತಿಿನ ಚೌಕಟ್ಟಿಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಸಾಕಷ್ಟು ವಿಚಾರ ಮಾತಾಡಬೇಕು. ದಸರಾ ಮುಗಿದ ಮೇಲೆ ಮಾತನಾಡುತ್ತೇನೆ. ಎಲ್ಲಿ ಶ್ರಮ ಇದೆಯೋ ಅಲ್ಲಿ ಲ ಇದೆ’’ ಎಂದರು.
ಅಂದಾಜು 600-700 ನಿಗಮ, ಮಂಡಳಿಗಳ ನಿರ್ದೇಶಕರ ಪಟ್ಟಿಿ ಸಿದ್ದವಿದೆ. ಆ ಬಗ್ಗೆೆ ನಾನು, ಸಿಎಂ ಚರ್ಚೆ ನಡೆಸಿ ಎರಡು ಮೂರು ದಿನಗಳಲ್ಲಿ ತೀರ್ಮಾನಿಸಿ ಘೋಷಣೆ ಮಾಡುತ್ತೇವೆ. ನಿಗಮ, ಮಂಡಳಿ ಅಧ್ಯಕ್ಷರು ಎರಡು ವರ್ಷ ಆದ ಬಳಿಕ ರಾಜೀನಾಮೆ ನೀಡಬೇಕು. ನಾವು ಎಲ್ಲರೂ ಅಧಿಕಾರವನ್ನು ಹಂಚಬೇಕಾಗುತ್ತದೆ. ನಾನು ಮಾತನಾಡಿದ್ದು ಬೋರ್ಡ್ ಅಧ್ಯಕ್ಷರು, ಡೈರೆಕ್ಟರ್ಗಳ ಅಧಿಕಾರ ಹಂಚಿಕೆ ಬಗ್ಗೆೆ ಮಾತ್. ಸಿಂದ ಹುದ್ದೆ ಬಗ್ಗೆೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆೆಸ್ ಇಲ್ಲದೇ ಆಶ್ರಯ ಇಲ್ಲ : ’’ನಮಗೆ ಸ್ವಾಾತಂತ್ರ್ಯ ತಂದುಕೊಟ್ಟವರು ಮಹಾತ್ಮ ಗಾಂಧಿ. ಇಂದು ವನ್ಯಜೀವಿಗಳ ಪ್ರೋೋತ್ಸಾಾಹದ ದಿನ. ಅದನ್ನು ಉದ್ಘಾಾಟನೆ ಮಾಡಿದ್ದೇನೆ. ಗಾಂಧಿ ಅಂದರೆ ಅದೊಂದು ಶಕ್ತಿಿ. ಗಾಂಧಿಯವರ ಜನ್ಮದಿನಾಚರಣೆ ನಡೆಯುತ್ತಿಿದೆ. ಈ ವರ್ಷ ಗಾಂಧಿ ಭಾರತಕ್ಕೂ ನೂರು ವರ್ಷ ಆಗಿದೆ. ಇಡೀ ವರ್ಷ ಸಂಘಟನೆಯ ವರ್ಷ ಮಾಡುತ್ತಿಿದ್ದೇವೆ. ಬಿಜೆಪಿಗೆ, ಗಾಂಧಿಯವರಿಗೆ ಸಂಬಂಧ ಇಲ್ಲ. ಕಾಂಗ್ರೆೆಸ್ ಇಲ್ಲದೇ ಆಶ್ರಯ ಇಲ್ಲ. ಕಾಂಗ್ರೆೆಸ್ ಕೊಟ್ಟ ಕಾರ್ಯಕ್ರಮ ಬದಲಾವಣೆ ಮಾಡಿಲ್ಲ’ ಎಂದರು.
ನಮ್ಮ ಗ್ಯಾಾರಂಟಿ ನಕಲು ಮಾಡಿದ್ದಾರೆ : ’’ನೆಲ್ಸನ್ ಮಂಡೇಲಾ, ಬರಾಕ್ ಒಬಾಮ ಅವರು ಗಾಂಧಿಯವರನ್ನು ಹಾಡಿ ಹೊಗಳಿದ್ದಾರೆ. ಇಂದು ಗಾಂಧೀಜಿಯವರನ್ನು ಸ್ಮರಿಸೋಣ. ನಾವು ಶಾಂತಿ, ಸಹಬಾಳ್ವೆೆಯಿಂದ ಬದುಕಬೇಕು. ಗಾಂಧಿ ಬಗ್ಗೆೆ ಪುಸ್ತಕದಲ್ಲಿ ಮಾತ್ರ ಓದಬಾರದು. ವ್ಯಕ್ತಿಿ ಮರಣ ಆಗಿರಬಹುದು. ಆದರೆ, ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಿಮ್ಮನ್ನು ನೀವು ನಿಯಂತ್ರಿಿಸಬೇಕು. ಅದು ಆಗಬೇಕಾದರೆ ಮೆದುಳು ಉಪಯೋಗಿಸಬೇಕು ಎಂದು ಗಾಂಧೀಜಿ ಅವರು ಹೇಳಿದ್ದರು. ಈ ದೇಶಕ್ಕೆೆ ನಾವೇ ಮೂಲ. ಗ್ಯಾಾರಂಟಿ ಯೋಜನೆಗಳನ್ನು ಸಹ ನಾವು ಜಾರಿ ಮಾಡಿದ್ದೇವೆ. ಬಿಸಿಯೂಟ, ಆರ್ಧಾ ಸೇರಿ ಅನೇಕ ಯೋಜನೆಗಳನ್ನು ತಂದಿದ್ದೇವೆ. ಆದರೆ, ಇವತ್ತು ಬಿಜೆಪಿಯವರು ನಮ್ಮ ಗ್ಯಾಾರಂಟಿಗಳನ್ನು ನಕಲು ಮಾಡುತ್ತಿಿದ್ದಾರೆ ಎಂದು ಟೀಕಿಸಿದರು.