ಸುದ್ದಿಮೂಲ ವಾರ್ತೆ ಬೆಂಗಳೂರು, ಅ.03:
ರಾಜ್ಯದಲ್ಲಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರ ಸರ್ಕಾರ ಎರಡೂವರೆ ವರ್ಷ ಸಮೀಪಿಸುತ್ತಿಿರುವ ಬೆನ್ನಲ್ಲಿಯೇ ಅಧಿಕಾರ ಬದಲಾವಣೆ, ಸಂಪುಟ ಪುನಾರಚನೆಯ ಕೂಗು ಮತ್ತೆೆ ಜೋರಾಗಿ ಕೇಳಿಬರುತ್ತಿಿದೆ. ಇದರ ಬೆನ್ನಲ್ಲಿಯೇ ಮುಂದಿನ ಎರಡೂವರೆ ವರ್ಷವೂ ನಾನೇ ಸಿಎಂ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಮತ್ತೊೊಮ್ಮೆೆ ಗಟ್ಟಿಿಯಾಗಿ ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಿಯಾಗಿ ನವೆಂಬರ್ ತಿಂಗಳಲ್ಲಿ ಎರಡೂವರೆ ವರ್ಷ ಪೂರ್ಣಗೊಳ್ಳುತ್ತದೆ. ಹೀಗಾಗಿ ಅಧಿಕಾರ ಹಂಚಿಕೆಯ ಮಾತುಗಳಿಗೆ ಮತ್ತೆೆ ರೆಕ್ಕೆೆಪುಕ್ಕ ಬಂದಿದ್ದು, ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಆಪ್ತ ಶಾಸಕರು ಶೀಘ್ರವೇ ಡಿಕೆಶಿ ಸಿಎಂ ಅಗುತ್ತಾಾರೆ ಎಂಬ ಹೇಳಿಕೆಗಳನ್ನು ಬಹಿರಂಗವಾಗಿ ನೀಡುತ್ತಿಿದ್ದಾರೆ. ಅಂತಹ ಶಾಸಕರಿಗೆ ಪಕ್ಷದ ಶಿಸ್ತು ಸಮಿತಿಯಿಂದ ನೋಟಸ್ ಸಹ ಜಾರಿ ಮಾಡಲಾಗಿದೆ.
ಈ ಮಧ್ಯೆೆ ಕಾಂಗ್ರೆೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಸ್ಪತ್ರೆೆಯಿಂದ ಬಿಡುಗಡೆಯಾಗಿ ಮನೆಯಲ್ಲಿ ವಿಶ್ರಾಾಂತಿ ಪಡೆಯುತ್ತಿಿದ್ದಾರೆ. ಅವರನ್ನು ಭೇಟಿ ಮಾಡಲು ಇಂದು ರಾಜ್ಯ ಕಾಂಗ್ರೆೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ತೆರಳಿದ್ದರು. ಬಳಿಕ ಹೊರಬಂದು ಮಾತನಾಡಿದ ಅವರು, ಖರ್ಗೆ ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ. ಅವರು ಸಂಪೂರ್ಣ ಚೇತರಿಸಿಕೊಳ್ಳುತ್ತಿಿದ್ದು, ಶೀಘ್ರವೇ ಸಾಮಾನ್ಯ ಚಟುವಟಿಕೆಗಳಲ್ಲಿ ಭಾಗಿ ಆಗಲಿದ್ದಾರೆ. ಆದರೆ, ಈ ವೇಳೆ ಅಧಿಕಾರ ಬದಲಾವಣೆ ಸೇರಿದಂತೆ ಯಾವುದೇ ರಾಜಕೀಯ ಚರ್ಚೆಗಳು ನಡೆದಿಲ್ಲ ಎಂದು ಸರ್ಜೇವಾಲಾ ಸ್ಪಷ್ಟಪಡಿಸಿದರು.
ಈ ನಡುವೆ ಸಿದ್ದರಾಮಯ್ಯ ಬೆಂಬಲಕ್ಕೆೆ ಸಚಿವರ ದಂಡೇ ನಿಂತಿದೆ. ಸಿದ್ದರಾಮಯ್ಯ ಆಪ್ತರಾದ ಜಮೀರ್ ಅಹ್ಮದ್ ಖಾನ್, ಡಾ. ಜಿ ಪರಮೇಶ್ವರ್, ಎಚ್ ಸಿ ಮಹದೇವಪ್ಪ ಸತೀಶ್ ಜಾರಕಿಹೊಳಿ ಮಾತ್ರವಲ್ಲ, ಯಾವುದೇ ಬಣಗಳಲ್ಲಿ ಗುರುತಿಸಿಕೊಳ್ಳದ ರಾಮಲಿಂಗಾ ರೆಡ್ಡಿಿ ಕೂಡಾ ಸಿದ್ದರಾಮಯ್ಯ ಸಿಎಂ ಆಗಿ ಇರ್ತಾರೆ ಹೇಳಿಕೆ ನೀಡಿ ಅಚ್ಚರಿ ಹುಟ್ಟಿಿಸಿದ್ದಾರೆ.
ಸಿಎಂ, ಡಿಸಿಎಂ ಹೇಳಿದ್ದೇನು:
ಮುಂದಿನ ದಸರಾವನ್ನು ಬಹುಶಃ ನಾನೇ ಉದ್ಘಾಾಟನೆ ಮಾಡುತ್ತೇನೆ ಎಂದು ಹೇಳಿದ ಮುಖ್ಯಮಂತ್ರಿಿ ಸಿದ್ದರಾಮಯ್ಯ, ಜೊತೆಯಲ್ಲೆೆ ಹೈಕಮಾಂಡ್ ತೀರ್ಮಾನಕ್ಕೆೆ ನಾವು ಬದ್ಧ ಎಂಬ ಮಾತನ್ನು ಸಹ ಸೇರಿಸಿದ್ದಾರೆ.
ಡಿ.ಕೆ.ಶಿವಕುಮಾರ್, ಇಲ್ಲಿ ವ್ಯಕ್ತಿಿ ಮುಖ್ಯವಲ್ಲ, ಪಕ್ಷ ಮುಖ್ಯ. ಅಧಿಕಾರ ಹಂಚಿಕೆಯ ಬಗ್ಗೆೆ ಎಲ್ಲಿಯೂ ಚರ್ಚೆಯಾಗಿಲ್ಲ. ಯಾರಿಗೂ ಈ ಬಗ್ಗೆೆ ಮಾತನಾಡುವ ಹಕ್ಕಿಿಲ್ಲ ಎಂದಿದ್ದಾರೆ. ಅಷ್ಟಕ್ಕೆೆ ಸುಮ್ಮನಾಗದ ಅವರು ತಮ್ಮ ಪರವಾಗಿ ಮಾತನಾಡಿರುವವರಿಗೆ ನೋಟಿಸ್ ನೀಡುವಂತೆ ನಾನೇ ಹೇಳಿದ್ದೇನೆ ಎಂದಿದ್ದಾರೆ. ಹೈಕಮಾಂಡ್ ತೀರ್ಮಾನಕ್ಕೆೆ ನಾವು ಬದ್ಧ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಅಷ್ಟೆೈ. ಅದಕ್ಕೆೆ ನಾವೆಲ್ಲಾ ಬದ್ಧ ಎಂದಿದ್ದಾರೆ.
2023ರ ವಿಧಾನಸಭೆ ಚುನಾವಣೆ ಬಳಿಕ ನಡೆದ ಅಧಿಕಾರ ಹಂಚಿಕೆ ಮಾತುಕತೆಯಲ್ಲಿ ಹಿನ್ನೆೆಡೆ ಅನುಭವಿಸಿದ್ದ ಡಿ.ಕೆ.ಶಿವಕುಮಾರ್ ಮೊದಲ ಅವಧಿಗೆ ಮುಖ್ಯಮಂತ್ರಿಿ ಹುದ್ದೆ ಸಿಗದೇ ನಿರಾಶರಾಗಿದ್ದಾರೆ. ಹಾಲುಮತದವರಿಂದ ಅಧಿಕಾರ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಕೋಡಿಹಳ್ಳಿಿ ಶ್ರೀಗಳ ಭವಿಷ್ಯ ಗಂಭೀರವಾಗಿ ಪರಿಗಣಿಸಿದಂತಿದೆ. ಸದ್ಯದ ವಾತಾವರಣದಲ್ಲಿ ಸಿದ್ದರಾಮಯ್ಯ ತಾವಾಗಿಯೇ ಅಧಿಕಾರ ಬಿಟ್ಟುಕೊಡುವ ಲಕ್ಷಣಗಳು ಕಂಡು ಬರುತ್ತಿಿಲ್ಲ. ಹೈಕಮಾಂಡ್ ಸ್ಥಾಾನ ಪಲ್ಲಟ ಮಾಡುವ ಸೂಚನೆಗಳಂತೂ ಇಲ್ಲ.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಿಯಾಗಬೇಕು ಎಂದು ಕಾಂಗ್ರೆೆಸ್ನಲ್ಲಿ ಒಂದು ಬಣ ಒಳಗೊಳಗೆ ಕೈ ಹಿಸುಕಿಕೊಳ್ಳುತ್ತಿಿದೆ. ಮತ್ತೊೊಂದು ಬಣ ಸಿದ್ದರಾಮಯ್ಯ ಮುಂದುವರೆಯಬೇಕು ಎಂಬ ಭಾವನೆಗೆ ಸೀಮಿತವಾಗಿದೆ. ನಿಷ್ಟಾಾವಂತ ಹಾಗೂ ಮೂಲ ಕಾಂಗ್ರೆೆಸ್ಸಿಿಗರಲ್ಲಿ ಬಹುತೇಕರು ಸಿದ್ದರಾಮಯ್ಯ ಬಣಕ್ಕೆೆ ಜಂಪ್ ಆಗಿದ್ದಾರೆ. ಡಿ.ಕೆ.ಶಿವಕುಮಾರ್ ಜಂಬದ ನಾಯಕ ಎಂಬ ತೆಗಳಿಕೆಗೆ ಗುರಿಯಾಗಿರುವುದು ಇದಕ್ಕೆೆ ಮೂಲ ಕಾರಣವಾಗಿದೆ.
ನಾನು ಮುಖ್ಯಮಂತ್ರಿಿಯಾಗುವುದು ಹೈಕಮಾಂಡ್ಗೆ ಬಿಟ್ಟ ವಿಚಾರ. ಯಾವ ಶಾಸಕರ ಬೆಂಬಲವೂ ನನಗೆ ಅಗತ್ಯ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಈಗಾಗಲೇ ಹೇಳಿಯೂ ಆಗಿದೆ. ಹಳೆಯ ಮೈಸೂರು ಭಾಗದಲ್ಲಿ ಒಂದಿಷ್ಟು ಶಾಸಕರು ಡಿ.ಕೆ.ಶಿವಕುಮಾರ್ ಪರವಾಗಿ ಮಾತನಾಡುತ್ತಿಿದ್ದಾರೆ. ಸಿದ್ದರಾಮಯ್ಯ ಅವರ ಪರವಾಗಿ ಮಾತನಾಡುತ್ತಿಿದ್ದ ಕೆ.ಎನ್.ರಾಜಣ್ಣರನ್ನು ಸಂಪುಟದಿಂದ ಉಚ್ಛಾಾಟನೆ ಮಾಡಿದ ಬಳಿಕ ಒಂದಿಷ್ಟು ಮಂದಿಗೆ ರಾಜಕೀಯವಾಗಿ ಮಾತನಾಡಲು ಧೈರ್ಯ ಸಾಲದೇ ಒಳಗೊಳಗೆ ಅಳುಕಿದೆ.
ಅಧಿಕಾರ ಇರುವ ಕಾರಣಕ್ಕೆೆ ಸಿದ್ದರಾಮಯ್ಯ ಜನಪ್ರಿಿಯ ವ್ಯಕ್ತಿಿಯಾಗಿದ್ದಾರೆ. ಯಾರೇ ಮುಖ್ಯಮಂತ್ರಿಿಯಾದರೂ ಜನ ಬೆಂಬಲ ಅಧಿಕಾರಸ್ಥರ ಜೊತೆಗಿರುವುದು ಸಾಮಾನ್ಯ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಿಯಾದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆೆಸ್ ಪಕ್ಷ ಮರಳಿ ಅಧಿಕಾರಕ್ಕೆೆ ಬರಲಿದೆ. ಇಲ್ಲವಾದರೆ 2018ರ ಲಿತಾಂಶವೇ ಮರುಕಳಿಸಲಿದೆ ಎಂದು ಹಲವು ಮಂದಿ ವ್ಯಾಾಖ್ಯಾಾನಿಸುತ್ತಿಿದ್ದಾರೆ.
ವಾದ ವಿವಾದಗಳು ಏನೇ ಇದ್ದರೂ ಸದ್ಯಕ್ಕೆೆ ಸೆಪ್ಟಂಬರ್ ಮುಗಿದಿದೆ. ಮುಂದೆ ನವೆಂಬರ್ನಲ್ಲಿ ಕ್ರಾಾಂತಿಯಾಗಲಿದೆ. ಡಿ.ಕೆ.ಶಿವಕುಮಾರ್ಮುಖ್ಯಮಂತ್ರಿಿಯಾಗುತ್ತಾಾರೆ ಎಂದು ಕೆಲವರು ಹೇಳಿಕೊಂಡು ತಿರುಗುತ್ತಿಿದ್ದಾರೆ. ಬಾಯಿ ಬಿಟ್ಟವರಿಗೆ ನೋಟಿಸ್ ನೀಡಿ, ಬಾಯಿ ಮುಚ್ಚಿಿಸುತ್ತಿಿರುವ ಡಿ.ಕೆ.ಶಿವಕುಮಾರ್ ಅವರ ನಡೆ ಅರ್ಥವಾಗದೆ ವಿರೋಧಿ ಬಣ ಗೊಂದಲಕ್ಕೀಡಾಗಿದೆ. ಕಾಂಗ್ರೆೆಸ್ನಲ್ಲಿ ಬೂದಿ ಮುಚ್ಚಿಿದ ಕೆಂಡಕ್ಕೆೆ ಯಾರು ಗಾಳ ಹಾಕುತ್ತಾಾರೋ ಅದು ಯಾವಾಗ ಜ್ವಾಾಲಾಗ್ನಿಿಯಾಗಲಿದೆಯೋ ಕಾದು ನೋಡಬೇಕಿದೆ.
ಸಿಎಂ ಆಗಿ ಇನ್ನೂ ಎರಡೂವರೆ ವರ್ಷ ಇರುತ್ತೇನೆ: ಸಿದ್ದರಾಮಯ್ಯ
ಸುದ್ದಿಮೂಲ ವಾರ್ತೆ
ಮೈಸೂರು, ಅ.3: ಮುಖ್ಯಮಂತ್ರಿಿಯಾಗಿ ಇನ್ನೂ ಎರಡೂವರೆ ವರ್ಷ ಇರುತ್ತೇನೆ. ಮುಂದಿನ ವರ್ಷವೂ ನಾನೇ ಯಾಕೆ ಪುಷ್ಪಾಾರ್ಚನೆ ಮಾಡಬಾರದು. ಇಷ್ಟು ವರ್ಷ ಮಾಡಿಕೊಂಡು ಬಂದಿದ್ದೇನೆ. ಐ ಹೋಪ್..
ಇದು ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಅತ್ಯಂತ ದೃಢ ವಿಶ್ವಾಾಸದಿಂದ ಹೇಳಿದ ಮಾತುಗಳು.
ಎರಡನೇ ಬಾರಿ ಸಿಎಂ ಆಗೋದಿಲ್ಲ ಅಂದಿದ್ದರು. ಸಿಎಂ ಕೂಡ ಆಗಿದ್ದೇನೆ. ಬಹಳ ಜನ ಬಹಳಷ್ಟು ಹೇಳುತ್ತಾಾರೆ, ಹೇಳಲಿ. ನವೆಂಬರ್ನಲ್ಲಿ ಸರ್ಕಾರಕ್ಕೆೆ ಎರಡೂವರೆ ವರ್ಷ ತುಂಬುವ ಕಾರಣ ಆ ರೀತಿ ಮಾತನಾಡುತ್ತಾಾರೆ ಎಂದರು.
ಇದೇ ವೇಳೆ ಸಿಎಂ ಹೈಕಮಾಂಡ್ ತೀರ್ಮಾನಕ್ಕೆೆ ಎಲ್ಲರೂ ಬದ್ಧರಾಗಿರಬೇಕು. ಹೈಕಮಾಂಡ್ ಹೇಳಿದಂತೆ ಕೇಳಬೇಕು. ಬಿಜೆಪಿಗೆ ವಸ್ತುಸ್ಥಿಿತಿ ಗೊತ್ತಿಿಲ್ಲ. ಅವರು ಹೇಳಿದ ಹಾಗೆ ಏನು ನಡೆಯುವುದಿಲ್ಲ. ಬಿಜೆಪಿಯವರು ಭವಿಷ್ಯಕಾರರಲ್ಲ. ಬಿಜೆಪಿ ಹೇಳಿದ್ದೆಲ್ಲಾ ಸುಳ್ಳಾಾಗಿದೆ ಎಂದು ಟೀಕಿಸಿದರು
ಇದೇ ವೇಳೆ ಮಾತನಾಡಿದ ಸಚಿವ ಡಾ. ಎಸ್.ಸಿ.ಮಹದೇವಪ್ಪ, ಸಿಎಂ ಸಿದ್ದರಾಮಯ್ಯನವರು 5 ವರ್ಷ ಮುಖ್ಯಮಂತ್ರಿಿ ಆಗಿರುತ್ತಾಾರೆ. ಯಾರ್ಯಾಾರದ್ದೋ ಹೇಳಿಕೆಗಳಿಗೆ ಹೆಚ್ಚು ಮಹತ್ವ ಕೊಡಬೇಡಿ. ಮುಖ್ಯಮಂತ್ರಿಿಗಳೇ ನಾನೇ ಮುಂದಿನ ವರ್ಷವೂ ಪುಷ್ಪಾಾರ್ಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಮತ್ತೆೆ ಯಾಕೆ ಆ ಚರ್ಚೆ ಎಂದು ಪ್ರತಿಪಾದನೆ ಮಾಡಿದರು.