ಸುದ್ದಿಮೂಲ ವಾರ್ತೆ ರಾಯಚೂರು, ಅ.03:
ನಿರಂತರ ಭಾರಿ ಮಳೆಯಿಂದಾಗಿ ಹಾನಿಯಾದ ಬೆಳೆಗಳ ಕುರಿತು ಈಗಾಗಲೆ ಸಮೀಕ್ಷೆ ಪ್ರಕ್ರಿಿಯೆ ಪ್ರಾಾರಂಭಿಸಲಾಗಿದೆ. ಅಧಿಕಾರಿಗಳು ಬೆಳೆ ನಷ್ಟದ ಕುರಿತು ವರದಿ ಸಿದ್ದಪಡಿಸಲಿದ್ದಾರೆ. ಆ ವರದಿಯನುಸಾರ ಸರ್ಕಾರ ಪರಿಹಾರ ನೀಡಲಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವ ಎನ್ಎಸ್ ಬೋಸರಾಜು ತಿಳಿಸಿದರು.
ಸಿರವಾರ ತಾಲೂಕಿನ ನವಲಕಲ್, ಕುರಕುಂದಾ ವಡವಾಟಿ ಸೀಮಾಂತರದಲ್ಲಿ ಬೆಳೆದ ಹತ್ತಿಿ ಬೆಳೆ ಹಾನಿ ಪರಿಶೀಲಿಸಿ ಜಮೀನಿನಲ್ಲಿದ್ದ ರೈತರೊಂದಿಗೆ ಮಾತನಾಡಿ ಮಾಹಿತಿ ಪಡೆದರು.
ಹಾನಿಗೊಳಗಾದ ರೈತರಿಗೆ ತಕ್ಷಣ ಸ್ಪಂದಿಸುವ ನಿಟ್ಟಿಿನಲ್ಲಿ ಬೆಳೆಹಾನಿ ಸಮೀಕ್ಷೆ ಪ್ರಕ್ರಿಿಯೆ ಪ್ರಾಾರಂಭಿಸಲಾಗಿದೆ. ಅಧಿಕಾರಿಗಳು ನಿಮ್ಮ ನಿಮ್ಮ ಗ್ರಾಾಮಗಳಿಗೆ ಹಾಗೂ ಬೆಳೆಗಳು ಬೆಳೆದ ಜಮೀನುಗಳಿಗೆ ಬಂದು ಬೆಳೆ ಹಾನಿ ಕುರಿತು ಮಾಹಿತಿ ಪಡೆಯಲಿದ್ದಾರೆ. ಅಧಿಕಾರಿಗಳಿಗೆ ಬೆಳೆ ಹಾನಿಯ ಬಗ್ಗೆೆ ನಿರ್ಧಿಷ್ಟ ಮಾಹಿತಿ ನೀಡಬೇಕೆಂದು ರೈತರಿಗೆ ತಿಳಿಸಿದರು.
ನಂತರ ಜಮೀನಿನಲ್ಲಿ ಕೆಲಸ ಮಾಡುತ್ತಿಿರುವ ರೈತ ಮಹಿಳೆಯರು ಸಚಿವರೊಂದಿಗೆ ಮಾತನಾಡಿ, ಏನ್ಮಾಾಡಮ್ರಿಿ ಯಪ್ಪಾಾ ಎಣ್ಣಿಿ, ಗೊಬ್ರ ಹಾಕಿ ಹತ್ತಿಿ ಬೆಳೆಸಿದ್ವಿಿ ಇನ್ನೇನು ಹತ್ತಿಿ ಬೆಳೆ ಕೈಗೆ ಬಂದಿತ್ತು, ಬಿಡಿಸುವಷ್ಠರಲ್ಲಿ ವಾರಾನುಗಟ್ಟಲೆ ಮಳೆ ಬಂದು ಹತ್ತಿಿ ಎಲ್ಲ ನೀರ ಪಾಲಾಗ್ಯಾಾದ, ಏನರ ಪರಿಹಾರ ಕೊಡಸ್ರಿಿ ಎಪ್ಪಾಾ ಎಂದು ಮನವಿ ಮಾಡಿಕೊಂಡರು.
ರೈತರಿಗೆ ಪ್ರತಿಕ್ರಿಿಯೆ ನೀಡಿದ ಸಚಿವರು, ಸರ್ಕಾರ ನಿಮ್ಮ ಜೊತೆಗಿದೆ ಈಗ ಮಳೆಹಾನಿಯ ಕುರಿತು ಅಧಿಕಾರಿಗಳೊಂದಿಗೆ ಸಭೆಯಿದೆ. ಶೀಘ್ರ ಸಮೀಕ್ಷೆ ಮಾಡುವ ಕುರಿತು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಬೆಳೆ ನಷ್ಟ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ರೈತರಿಗೆ ಯಾವುದೇ ರೀತಿಯಲ್ಲಿ ಅನ್ಯಾಾಯವಾಗದಂತೆ, ಹಾನಿಯಾದ ಬೆಳೆಗೆ ನ್ಯಾಾಯಯುತವಾಗಿ ಪರಿಹಾರ ಸಿಗುವ ಹಾಗೆ ಅಧಿಕಾರಿಗಳು ಸಮೀಕ್ಷೆ ನಡೆಸಬೇಕು. ಹತ್ತಿಿ, ಭತ್ತ, ತೊಗರಿ, ಜೋಳ ಸೇರಿದಂತೆ ಈಗ ಬಿತ್ತನೆಯಾದ ಎಲ್ಲ ಬೆಳೆಗಳ ಹಾನಿಯ ಸಮೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆೆಸ್ ಮುಖಂಡರಾದ ಚುಕ್ಕಿಿ ಸೂಗಪ್ಪ, ಶರಣಯ್ಯ ನಾಯಕ್, ಕೆ ಶಾಂತಪ್ಪ, ಮೌನೇಶ್ ಹೀರಾ, ಜಿ ಶಿವಮೂರ್ತಿ, ಅಮರೇಗೌಡ ಹಂಚಿನಾಳ, ರುದ್ರಪ್ಪ ಅಂಗಡಿ, ಬಸವರಾಜ ಪಾಟೀಲ್, ಚುಕ್ಕಿಿ ಶಿವಕುಮಾರ, ನಾಗಪ್ಪ ನವಲಕಲ್, ದೇವೆಂದ್ರಪ್ಪ, ಮಲ್ಲಿಕಾರ್ಜುನ್ ಮಲ್ಲಟ, ಶಿವಪ್ಪ ಗೊಲ್ಲದಿನ್ನಿಿ, ಮಲ್ಲಪ್ಪ ನವಲಕಲ್ ಸೇರಿದಂತೆ ಅನೇಕರು ಉಪಸ್ಥಿಿತರಿದ್ದರು.