ಸುದ್ದಿಮೂಲ ವಾರ್ತೆ ಬೆಂಗಳೂರು, ಅ.04:
ಕೇಂದ್ರ ಸರ್ಕಾರ ನೀಡುವ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್ಡಿಆರ್ಎ್) ಹಣ ಗ್ಯಾಾರಂಟಿ ಯೋಜನೆಗಳಿಗೆ ಬಳಸುತ್ತಿಿಲ್ಲ ಎಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಬೆಳಗಾವಿಯ ವಿಮಾನ ನಿಲ್ದಾಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಬಿಜೆಪಿಯವರು ಕಾಮಾಲೆಕಣ್ಣಿಿನಿಂದ ಎಲ್ಲವನ್ನೂ ನೋಡುತ್ತಿಿದ್ದು, ಗ್ಯಾಾರಂಟಿ ಯೋಜನೆಗಳ ಯಶಸ್ಸು ಅವರಲ್ಲಿ ಆತಂಕವನ್ನುಂಟು ಮಾಡಿದೆ. ಹೀಗಾಗಿ ವಿಪಕ್ಷ ನಾಯಕ ಆರ್. ಅಶೋಕ್ ಸೇರಿ ಎಲ್ಲರೂ ತಪ್ಪುು ಮಾಹಿತಿ ನೀಡುತ್ತಿಿದ್ದಾರೆ ಎಂದು ಹೇಳಿದರು.
ಕಾಂಗ್ರೆೆಸ್ ಸರ್ಕಾರವು ನುಡಿದಂತೆ ನಡೆದು ಗ್ಯಾಾರಂಟಿಗಳನ್ನು ತಪ್ಪದೇ ನೀಡುತ್ತಿಿದ್ದೇವೆ. ಆದರೆ, ಗ್ಯಾಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರಿಗೆ ಇರುಸು ಮುರುಸು ಮಾಡುತ್ತಿಿದೆ. ಆದರೆ, ನಮ್ಮ ಗ್ಯಾಾರಂಟಿಗಳನ್ನು ಬಿಹಾರ , ದೆಹಲಿ, ಮಹಾರಾಷ್ಟ್ರ, ಮದ್ಯಪ್ರದೇಶ, ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಅನುಕರಿಸಿದ್ದಾರೆ. ಪ್ರಧಾನಿ ಮೋದಿಯವರು ಗ್ಯಾಾರಂಟಿಗಳ ಅನುಷ್ಠಾಾನ ಸಾಧ್ಯವೇ ಇಲ್ಲ ಎಂದಿದ್ದರು. ಆದರೆ ಕಾಂಗ್ರೆೆಸ್ ಸರ್ಕಾರ ನುಡಿದಂತೆ ನಡೆದು ಗ್ಯಾಾರಂಟಿಗಳನ್ನು ತಪ್ಪದೇ ನೀಡುತ್ತಿಿದ್ದೇವೆ ಎಂದರು.
ಬಿಮ್ಸ್ ಆಸ್ಪತ್ರೆೆ-ಖಾಸಗಿ ನಿರ್ವಹಣೆ ಇಲ್ಲ :
ಇಂದು ಬೆಳಗಾವಿಯ ಬಿಮ್ಸ್ನ ಸೂಪರ್ ಸ್ಪೆೆಷಾಲಿಟಿ ಆಸ್ಪತ್ರೆೆ 2017 ರಲ್ಲಿ ಶಂಕುಸ್ಥಾಾಪನೆ ಹಾಗೂ ಇಂದು ಉದ್ಘಾಾಟನೆ ನೆರವೇರಿಸಿರುವುದು ಸಂತಸ ತಂದಿದೆ. ಬಿಜೆಪಿಯ ಅವಧಿಯಲ್ಲಿ ಈ ಯೋಜನೆ ಕಾರ್ಯಗತವಾಗಿರಲಿಲ್ಲ. ಆಸ್ಪತ್ರೆೆಯ ನಿರ್ವಹಣೆ ಯಾವುದೇ ಖಾಸಗಿ ಸಂಸ್ಥೆೆಗೆ ನೀಡಲಾಗಿಲ್ಲ ಎಂದರು.
ಶಾಸಕ ಸಿ.ಟಿ.ರವಿಯವರು ಮುಖ್ಯಮಂತ್ರಿಿಯವರ ವಿಚಾರದಲ್ಲಿ ಮಾಡಿರುವ ಹೇಳಿಕೆಗೆ ಪ್ರತಿಕ್ರಿಿಯೆ ನೀಡಿ, ಮುಖ್ಯಮಂತ್ರಿಿ ಹುದ್ದೆ ವಿಷಯ ಕಾಂಗ್ರೆೆಸ್ ಪಕ್ಷದ ಆಂತರಿಕ ವಿಚಾರವಾಗಿದ್ದು, ಇದಕ್ಕೆೆ ಬಿಜೆಪಿ ತಲೆಕೆಡಿಸಿಕೊಳ್ಳುವುದು ಬೇಕಿಲ್ಲ ಎಂದು ತಿರುಗೇಟು ನೀಡಿದರು.

