ಸುದ್ದಿಮೂಲ ವಾರ್ತೆ ಯಾದಗಿರಿ, ಅ.04:
ಗ್ರಾಾಮೀಣ ಪ್ರದೇಶದಲ್ಲಿ ನಡೆಯುತ್ತಿಿರುವ ಸರಣಿ ಕುರಿ ಕಳ್ಳತನ ಪ್ರಕರಣದ ಹಿನ್ನೆೆಲೆಯಲ್ಲಿ ಸಂತ್ರಸ್ತ ಕುರಿಗಾಹಿಗಳಿಗೆ ಜಿಲ್ಲಾಡಳಿತವು ಸೂಕ್ತ ಪರಿಹಾರ ನೀಡಿ ನ್ಯಾಾಯ ಒದಗಿಸಬೇಕು ಎಂದು ಯುವ ಪರಿವರ್ತನೆ ಯಾತ್ರೆೆಯ ಸಂಚಾಲಕ ಯಲ್ಲಪ್ಪ ಹೆಗಡೆ ಅವರು ಜಿಲ್ಲಾಧಿಕಾರಿ ಹರ್ಷಲ್ ಭೋರ್ಯ ಅವರಿಗೆ ಜಿಲ್ಲಾ ಕುರಿಗಾಹಿಗಳ ಹಿತರಕ್ಷಣಾ ಸಮಿತಿಯೊಡನೆ ಮನವಿ ಸಲ್ಲಿಸಿದರು.
ಜ್ವಲಂತ ಸಮಸ್ಯೆೆ ಸರ್ಕಾರದ ಗಮನಕ್ಕೆೆ ತರುವುದಕ್ಕೆೆ ಬೀದರ ಜಿಲ್ಲೆಯಿಂದ ಬೆಂಗಳೂರಿನವರೆಗೆ ಹೊರಟ ಯುವ ಪರಿವರ್ತನೆ ಯಾತ್ರೆೆಯೂ ಶುಕ್ರವಾರ ಯಾದಗಿರಿ ನಗರಕ್ಕೆೆ ಆಗಮಿಸಿ ಸುಭಾಷ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಜಾಥಾ ನಡೆಸಿ ಅವರು ಮನವಿ ಮಾಡಿದರು.
ಕುರಿ ಕಳವು ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಿ ಕಳ್ಳರನ್ನು ಹಿಡಿದು ಕಠಿಣ ಕ್ರಮ ತೆಗೆದುಕೊಳ್ಳಬೇಕು ಹಾಗೂ ಆದ್ಯತೆ ಮೇರೆಗೆ ಕುರಿಗಾಹಿಗರಿಗೆ ಮತ್ತು ಅವರ ಕುರಿಗಳ ರಕ್ಷಣೆಗಾಗಿ ಬಂದೂಕು ಲೈಸೆನ್ಸ್ ಒದಗಿಸಬೇಕು ಎಂದರು.
ಯಾದಗಿರಿ ತಾಲೂಕಿನ ಸೈದಾಪೂರ ಹೋಬಳಿಯಾದ್ಯಂತ ಕುರಿ ಕಳ್ಳರ ಉಪಟಳ ಪ್ರತಿದಿನ ಹೆಚ್ಚಾಾಗುತ್ತಿಿದ್ದು, ಕುರಿ ಕಳ್ಳತನ ಮಾಮೂಲಿಯಾಗಿದೆ. ಪೊಲೀಸರಿಂದ ಕಳ್ಳತನ ನಿಯಂತ್ರಿಿಸಲು ಸಾಧ್ಯವಾಗದೇ ಇರುವುದರಿಂದ ಕುರಿಗಾಯಿ ಕುಟುಂಬಗಳು ತುಂಬಾ ಸಂಕಷ್ಟದಲ್ಲಿ ನಲುಗುತ್ತಿಿವೆ. ಹಲವು ಗ್ರಾಾಮಗಳಲ್ಲಿ ಕುರಿ ರಾತ್ರೋೋರಾತ್ರಿಿ ಕಳ್ಳರು ದೋಚಿಕೊಂಡು ಹೋಗುವ ಕಳವು ಪ್ರಕರಣಗಳು ವರದಿಯಾಗುತ್ತಿಿದ್ದರೂ ಇದುವರೆವಿಗೂ ಒಂದೂ ಪ್ರಕರಣ ಪತ್ತೆೆಯಾಗದೇ ಇರುವುದು ಖಂಡನೀಯವಾಗಿದೆ.
ಕುರಿ ಸಾಕಾಣಿಕೆ ಮುಖ್ಯ ಕಸುಬಾಗಿಸಿಕೊಂಡಿದ್ದ ರೈತರ ಬದುಕು ಬೀದಿಗೆ ಬಿದ್ದಿದೆ. ಲಕ್ಷಾಂತರ ರೂಪಾಯಿ ಕಳೆದುಕೊಂಡು ಕಣ್ಣೀರಿಡುತ್ತಿಿದ್ದಾರೆ. ಮುಂದಿನ ಜೀವನ ನಿರ್ವಹಣೆ ಬಹಳ ಕಷ್ಟಕರವಾಗಿದೆ. ಕುರಿ ಕಳ್ಳತನ ನಡೆದ ಪ್ರಕರಣ ಬೇಧಿಸುವ ನಿಟ್ಟಿಿನಲ್ಲಿ ಪೊಲೀಸ್ ಇಲಾಖೆ ತಕ್ಷಣ ನ್ಯಾಾಯ ಒದಗಿಸಿ ಕೊಡಬೇಕಾಗಿದೆ. ವಿವಿಧ ಕಡೆಗಳಲ್ಲಿ ಕುರಿ ಕಳ್ಳತನ ನಡೆದಾಗ ಈ ಕುರಿತು ಪೋಲಿಸರಿಗೆ ಲಿಖಿತ, ಮೌಖಿಕವಾಗಿ ಮನವಿ ಮಾಡಿದರೂ ಪ್ರಯೋಜನವಾಗದೇ ಇರುವುದು ಬೇಸರ ತರುತ್ತಿಿದೆ ಎಂದರು.
ಯುವ ಪರಿವರ್ತನೆ ಯಾತ್ರೆೆಯ ಸಂಘಟಕರಾದ ಶಿವಲಿಂಗೆಶ್ವರ ನಿಂಗನೂರ, ಅಭಿಗೌಡ ಒಕ್ಕಲಿಗ, ಕೃಷ್ಣ ಮುಧೋಳ, ಮುತ್ತು ಬಿಲ್ಲಾರ ಹಾಗೂ ಮುಖಂಡರುಗಳಾದ ರವೀಂದ್ರಕುಮಾರ ಕಡೆಚೂರ, ಶಿವಕುಮಾರ ಮುನಗಲ್, ಶೇಖಪ್ಪ ಬಾಲಚೇಡಿ, ಯಲ್ಲಪ್ಪ ಮುನಗಲ್, ರಾಚೋಟಿ ಕಣೇಕಲ್, ಬಸಲಿಂಗ ಗೌಡಗೇರ, ಮಲ್ಲಿಕಾರ್ಜುನ ಕಡೆಚೂರು, ಮಾಳಪ್ಪ ಸಂಗವಾರ ಸೇರಿದಂತೆ ವಿವಿಧ ಗ್ರಾಾಮಗಳಿಂದ ಬಂದ ಕುರಿಗಾಹಿಗಳು ಉಪಸ್ಥಿಿತರಿದ್ದರು.
—