ಸುದ್ದಿಮೂಲ ವಾರ್ತೆ ಕೊಪ್ಪಳ, ಅ.04:
ಮುಖ್ಯಮಂತ್ರಿಿ ಸಿದ್ದರಾಮಯ್ಯ ಬರುತ್ತಾಾರೆ ಎಂದು ಕೇಸರಿ ಬಟಿಂಗ್ ತೆರವುಗೊಳಿಸಲು ಮುಂದಾದ ಭಾಗ್ಯನಗರ ಪಟ್ಟಣ ಪಂಚಾಯಿತಿ ಆಡಳಿತ ನಡೆ ಖಂಡಿಸಿ, ಬಿಜೆಪಿ, ಹಿಂದುಪರ ಸಂಘಟನೆಗಳು, ಎಸ್ ಎಸ್ ಕೆ ಸಮಾಜದ ಮುಖಂಡರು ಶನಿವಾರ ರಾತ್ರಿಿ ದಿಢೀರ್ ಪ್ರತಿಭಟನೆ ನಡೆಸಿದರು.
ಭಾಗ್ಯನಗರ ಪಟ್ಟಣದ ಅಂಬಾಭವಾನಿ ದೇವಸ್ಥಾಾನದ ಮುಂಭಾಗದ ರಸ್ತೆೆಯ ಮೇಲುಗಡೆ ದಸರಾ ಹಿನ್ನಲೆ ಕೇಸರಿ ಬಟಿಂಗ್ ಕಟ್ಟಲಾಗಿದೆ.
ಇದೇ ಅಂಬಾಭವಾನಿ ದೇವಸ್ಥಾಾನದ ಸಮೀಪದಲ್ಲಿ ನೂತನ ಇಂದಿರಾ ಕ್ಯಾಾಂಟೀನ ಉದ್ಘಾಾಟಿಸಲು ಅ.6 ರಂದು ಸಿಎಂ ಸಿದ್ದರಾಮಯ್ಯ ಅವರು ಭಾಗ್ಯನಗರಕ್ಕೆೆ ಬರಲಿದ್ದಾರೆ.
ಹೀಗಾಗಿ ದೇವಸ್ಥಾಾನದ ಮುಂಭಾಗದಲ್ಲಿರುವ ಕೇಸರಿ ಬಂಟಿಂಗ್ ತೆರವುಗೊಳಿಸಲು ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಮುಂದಾಗಿದೆ.
ಇದರಿಂದ ಕೆರಳಿದ ಅನೇಕ ಯುವಕರು, ಸಿದ್ದರಾಮಯ್ಯ ಬರುತ್ತಾಾರೆ ಎಂದು ಕೇಸರಿ ಬಂಟಿಂಗ್ ತೆರವುಗೊಳಿಸುವುದು ಎಷ್ಟರ ಮಟ್ಟಿಿಗೆ ಸರಿ…?
ಕೇಸರಿ ಬಂಟಿಂಗ್ ರಸ್ತೆೆಗೆ ಅಡ್ಡಲಾಗಿ ಹಾಕಲಾಗಿಲ್ಲ. ಯಾರಿಗೂ ತೊಂದರೆಯಾಗಬಾರದೆಂದು ರಸ್ತೆೆಯ ಮೇಲೆ ಕಟ್ಟಲಾಗಿದೆ.
ಆದರೂ ಉದ್ದೇಶ ಪೂರ್ವಕವಾಗಿ ಸಿಎಂ ಬರುತ್ತಾಾರೆ ಎನ್ನುವ ಕಾರಣಕ್ಕಾಾಗಿ ತೆರವುಗೊಳಿಸುತ್ತಿಿರುವುದು ಸರಿಯಲ್ಲ ಎಂದು ಯುವಕರು ಏಕಾಏಕಿ ಭಾಗ್ಯನಗರ ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಜಮಾವಣೆ ಸೇರಿ ಆಕ್ರೋೋಶ ವ್ಯಕ್ತಪಡಿಸಿದರು.
ಈ ವೇಳೆ ಸ್ಥಳಕ್ಕೆೆ ವಿಧಾನ ಪರಿಷತ್ ಸದಸ್ಯೆೆ ಹೇಮಲತಾ ನಾಯಕ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಬಸವರಾಜ ಕ್ಯಾಾವಟರ್ ಆಗಮಿಸಿ, ಯುವಕರೊಂದಿಗೆ ಕೂಡಿ ಮಾತುಕತೆ ನಡೆಸಿ, ಪಟ್ಟಣ ಪಂಚಾಯಿತಿ ನಡೆ ಖಂಡಿಸಿದರು.
ನೂರಕ್ಕೂ ಹೆಚ್ಚು ಯುವಕರು ಏಕಾಏಕಿ ರಸ್ತೆೆ ಬಂದ್ ಮಾಡಿದ್ದರಿಂದ ಕೆಲ ಕಾಲ ಟ್ರಾಾಫಿಕ್ ಜಾಮ್ ಉಂಟಾಯಿತು.
ಕೊನೆಗೆ ಸ್ಥಳಕ್ಕೆೆ ಆಗಮಿಸಿದ ನಗರ ಠಾಣೆಯ ಪಿಐ ಜಯಪ್ರಕಾಶ ಅವರು, ಬಿಜೆಪಿ ಮುಖಂಡರೊಂದಿಗೆ ಮಾತನಾಡಿದರು. ಯುವಕರ ಆಕ್ರೋೋಶ ಹೆಚ್ಚಾಾದ ಹಿನ್ನಲೆ ಕೇಸರಿ ಬಂಟಿಂಗ್ ತೆಗೆಯುವುದಿಲ್ಲ ಎಂದು ಘೋಷಿಸಿದರು.
ಬಳಿಕ ಸಂತಸಗೊಂಡ ಯುವಕರು, ಅಂಬಾಭವಾನಿ ದೇವಸ್ಥಾಾನದವರೆಗೆ ಮುಖಂಡರೊಂದಿಗೆ ಪಾದಯಾತ್ರೆೆ ತೆರಳಿ ಸಂಭ್ರಮಿಸಿದರು.

