ಸುದ್ದಿಮೂಲ ವಾರ್ತೆ ಲಿಂಗಸೂಗೂರು, ಅ.04:
ನಾರಾಯಣಪುರ ಬಲದಂಡೆ ಕಾಲುವೆ ದುರಸ್ತಿಿ ಕಾಮಗಾರಿಗಳನ್ನು ಎನ್.ಡಿ.ವಡ್ಡರ್ ಮತ್ತು ಕಂಪನಿ ಎರಡು ಪ್ಯಾಾಕೇಜ್ಗಳಲ್ಲಿ ಒಟ್ಟು 1466 ಕೋಟಿ ಗುತ್ತಿಿಗೆ ಪಡೆದು ಎರಡನೇ ಪ್ಯಾಾಕೇಜ್ನಲ್ಲಿ ಉಪ ಗುತ್ತಿಿಗೆ ನೀಡಿ ಇದೀಗ ಬಿಲ್ ಪಾವತಿ ಮಾಡದೇ ಪಂಗನಾಮ ಹಾಕಲು ಹೊರಟಿದೆ ಎಂದು ಉಪಗುತ್ತಿಿಗೆ ಪಡೆದ ದೇವದುರ್ಗ ತಾಲೂಕು ಸಣ್ಣ ಗುತ್ತಿಿಗೆದಾರರ ಸಂಘದ ಸದಸ್ಯ ಶರಣೆಗೌಡ ಸಂಕೇಶ್ವರಹಾಳ ಆರೋಪಿಸಿದರು.
ಪಟ್ಟಣದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ 2024ರಲ್ಲಿ 8ಜನ ಸೇರಿ ಉಪಗುತ್ತಿಿಗೆ ಒಪ್ಪಂದ ಮಾಡಿಕೊಂಡು ಡಿಸ್ಟ್ರಿಿಬ್ಯೂಟರ್ಗಳ ಒಟ್ಟು 13.5ಕಿ.ಮೀ. 4.87ಕೋಟಿರೂ.ಗಳು. ಗುತ್ತಿಿಗೆ ಪಡೆದು ಕಾಮಗಾರಿಯನ್ನು ಮುಗಿಸಿ ಇಲಾಖೆಯಿಂದ ವರ್ಕ್ಡನ್ ಪ್ರಮಾಣ ಪತ್ರ ಸಹ ಪಡೆದಿರುತ್ತೇವೆ. ಆದರೆೆ ಎನ್.ಡಿ.ವಡ್ಡರ್ ಕಂಪನಿ 1 ವರ್ಷ 6ತಿಂಗಳು ಗತಿಸಿದೆ. ಉಪಗುತ್ತಿಿಗೆ ಒಪ್ಪಂದದ ಪ್ರಕಾರ ನಮಗೆ ಬಿಲ್ ಪಾವತಿ ಮಾಡದೇ ತಮ್ಮ ಕಚೇರಿಗೆ ಅಲೆಸುತ್ತಿಿದ್ದಾಾರೆ. ಸರ್ಕಾರ 60%ರಷ್ಟು ಬಿಲ್ಪಾವತಿ ಮಾಡಿದ್ದರೂ ಪಾವತಿಯಾಗಿಲ್ಲವೆಂದು ಮುಂದೂಡುತ್ತಿಿದ್ದು ನಮಗೆ ತೊಂದರೆಯಾಗಿದ್ದು 10ದಿನದೊಳಗಾಗಿ 4.87ಕೋಟಿ ಬಿಲ್ಪಾವತಿ ಮಾಡದಿದ್ದರೆ ಶಾಸಕ ಮಾನಪ್ಪ ವಜ್ಜಲ್ ಮನೆಯ ಮುಂದೆ ಅಕ್ಟೋೋಬರ್ 15ರಂದು ಉಪವಾಸ ಸತ್ಯಾಾಗ್ರಹ ನಡೆಸುವುದಾಗಿ ಹೇಳಿದರು. ಗುತ್ತಿಿಗೆದಾರರಾದ ತುಕರಾಂ, ಆಂಜನಯಬಡಿಗೇರ, ಪರಮಾನಂದ ಸಂಕೇಶ್ವರಹಾಳ, ವಿರೇಶ ಹುನಗುಂದ, ಶಿವುಕುಮಾರ ಸಾಹುಕಾರ, ಅಮರೇಶ ಇಟಗಿ, ರಂಗಪ್ಪ ಮುನ್ಸೂರು ಇದ್ದರು.

