ಸುದ್ದಿಮೂಲ ವಾರ್ತೆ ಲಿಂಗಸುಗೂರು, ಅ.05:
ಗ್ರಾಾಮೀಣ ಭಾಗಗಳಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆೆ, ಕುಡಿಯುವ ನೀರು, ಶಿಕ್ಷಣಕ್ಕೆೆ ಹೆಚ್ಚಿಿನ ಆದ್ಯತೆ ನೀಡುವ ಮೂಲಕ ಲಿಂಗಸುಗೂರು ವಿಧಾನಸಭಾ ಕ್ಷೇತ್ರಕ್ಕೆೆ ಕಲ್ಯಾಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಿ ಮಂಡಳಿಯಿಂದ ಹೆಚ್ಚಿಿದ ಅನುದಾನವನ್ನು ತಂದು ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಿಗಾಗಿ ಪ್ರಾಾಮಾಣಿಕವಾಗಿ ಪ್ರಯತ್ನಿಿಸುತ್ತೇನೆ ಎಂದು ರಾಯಚೂರು ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ ಕುಮಾರ ನಾಯಕ ಮಾತನಾಡಿದರು.
ಅವರಿಂದು ಲಿಂಗಸೂಗುರು ತಾಲೂಕಿನ ಮುದುಗಲ್ ಪುರಸಭೆ ವ್ಯಾಾಪ್ತಿಿಯ ಪೈಗಂಬರ್ ನಗರದಿಂದ ಜಕ್ಕೇರುಮಡು ಗ್ರಾಾಮದವರೆಗೆ ಕೆ.ಕೆ.ಆರ್.ಡಿ.ಬಿ ಯ ಮ್ಯಾಾಕ್ರೋೋ ಯೋಜನೆ ಅಡಿಯಲ್ಲಿ ಪಿಡಬ್ಲ್ಯೂಡಿ ಅನುಷ್ಠಾಾನ ಇಲಾಖೆಗೆ ಸುಮಾರು 74.32 ಲಕ್ಷ ರೂಪಾಯಿ ಮೊತ್ತದ ಬಿ ಟಿ ರಸ್ತೆೆ ಕಾಮಗಾರಿಗೆ ಮಾಜಿ ಶಾಸಕ ಶ್ರೀ ಡಿ ಎಸ್ ಹೂಲಿಗೇರಿ ಅವರೊಂದಿಗೆ ಜಂಟಿಯಾಗಿ ಭೂಮಿ ಪೂಜೆಯನ್ನು ನೆರವೇರಿಸಿದರು.
ಗ್ರಾಾಮೀಣ ಭಾಗಗಳಲ್ಲಿ ರಸ್ತೆೆ ಅಭಿವೃದ್ಧಿಿಯಿಂದ ರೈತರ ಓಡಾಟಕ್ಕೆೆ ಹಾಗೂ ಅವರ ಬೆಳೆದ ಬೆಳೆಗಳು ಸರಕು ಸಾಮಾಗ್ರಿಿಗಳ ವಿಲೇವಾರಿಗಳಿಗೆ ಅನುಕೂಲವಾಗುತ್ತದೆ ಹಾಗೂ ಕೆಕೆಆರ್ಡಿಬಿಯ ಮೂಲ ಉದ್ದೇಶ ಕಲ್ಯಾಾಣ ಪಥ ಎಂಬ ಯೋಜನೆ ಮೂಲಕ ಈ ಭಾಗಗಳಲ್ಲಿ ರಸ್ತೆೆ ಸುಧಾರಣೆ ತರಬೇಕೆಂಬುವ ಯೋಜನೆಯನ್ನು ರೂಪಿಸಿದೆ ಎಂದು ಮಾತನಾಡಿದರು
ಈ ಸಂದರ್ಭದಲ್ಲಿ ಲಿಂಗಸೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಿ.ಎಸ್. ಹೂಲಗೇರಿ ಮಸ್ಕಿಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವನಗೌಡ ತುರುವಿಹಾಳ ಕಾಂಗ್ರೆೆಸ್ ಪಕ್ಷದ ಮುಖಂಡರಾದ ಶಿವಶಂಕರ್ ಗೌಡ ಎಸ್ ಆರ್ ರಸೂಲ್ ಸಾಬ್, ತಮ್ಮಣ್ಣ ಗುತ್ತೇದಾರ್, ಅಜೀಮ್ ಸಾಬ್, ಸೇರಿದಂತೆ ಕಾಂಗ್ರೆೆಸ್ ಪಕ್ಷ ಕಾರ್ಯಕರ್ತರು ಸಾರ್ವಜನಿಕರು ಹಾಜರಿದ್ದರು.