ಸುದ್ದಿಮೂಲ ವಾರ್ತೆ ರಾಯಚೂರು, ಅ.05:
ನೂರು ವರ್ಷದ ಇತಿಹಾಸ ಹೊಂದಿರುವ ಆರ್ಯವೈಶ್ಯ ಮಹಾಸಭಾ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ದಿಗೆ ತನ್ನದೇ ಯೋಜನೆ ರೂಪಿಸುತ್ತಿಿದೆ ಶೀಘ್ರವೆ ರಾಯಚೂರು, ಹುಬ್ಬಳ್ಳಿಿಯಲ್ಲಿ ವಸತಿ ನಿಲಯ ಆರಂಭಿಸುವ ಉದ್ದೇಶ ಹೊಂದಿದೆ ಎಂದು ಮಹಾಸಭಾ ರಾಜ್ಯಾಧ್ಯಕ್ಷ ಆರ್.ಪಿ.ರವಿಶಂಕರ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಟಿಿಯಲ್ಲಿ ಮಾತನಾಡಿ, ವೃತ್ತಿಿಪರ 200 ವಿದ್ಯಾಾರ್ಥಿಗಳಿಗೆ ಉಚಿತ ಲ್ಯಾಾಪಟಾಪ್, ಶೇ.25ರಷ್ಟು ಇತರ ಸಮುದಾಯದ ವಿದ್ಯಾಾರ್ಥಿಗಳಿಗೂ ನೀಡಲಾಗಿದೆ. ಕಳೆದ ಎಂಟು ವರ್ಷಗಳಲ್ಲಿ 1800 ಜನ ವಿದ್ಯಾಾರ್ಥಿಗಳಿಗೆ ವಿತರಿಸಿದ್ದರೆ, ರಾಜ್ಯದಲ್ಲಿ 102 ಶಾಲೆಗಳಲ್ಲಿ 200 ಶುಲ್ಕ ಪಡೆದು ಪ್ರಾಾಥಮಿಕ ಪ್ರೌೌಢ, 300 ರೂ ಶುಲ್ಕ ಪಡೆದು ಕಾಲೇಜು ಶಿಕ್ಷಣ, ಸಮವಸಘಿ, ವಸತಿ ಸಹಿತ ಸೇವೆ ಸುಮಾರು ಲಕ್ಷ ಮಕ್ಕಳಿಗೆ ಒದಗಿಸಲಾಗುತ್ತಿಿದೆ ಎಂದು ಮಾಹಿತಿ ನೀಡಿದರು.
ವಿದ್ಯಾಾರ್ಥಿ ಮಿತ್ರ ಯೋಜನೆಯಡಿ ಸುಮಾರು 13 ಕೋಟಿ ನೆರವು ನೀಡಿದ್ದು ಸಾವಿರ ವಿದ್ಯಾಾರ್ಥಿಗಳು ಸಾಲದ ಅಸಲು ಪಾವತಿಸಿದರೆ ಮಹಾಸಭೆ ಬಡ್ಡಿಿ ಪಾವತಿಸುತ್ತದೆ. ಸಂಧ್ಯಶ್ರೀ ಯೋಜನೆ ಅಡಿ 536 ವಿಧವೆಯರಿಗೆ , ವಿಕಲಚೇತನರಿಗೆ ಪ್ರತಿ ತಿಂಗಳ 1500 ರೂ ಪಾವತಿಸಲಾಗುತ್ತಿಿದೆ. ಅದರಂತೆ ಪ್ರತಿ ತಿಂಗಳ ಸುಮಾರು 48 ಲಕ್ಷ ರೂಗಳನ್ನು ಮಹಾಸಭಾ ತನ್ನ ಆಸ್ತಿಿಗಳ ಮೂಲಕ ಬಂದ ಬಾಡಿಗೆ, ಆದಾಯದ ಮೂಲಕ ಸಮುದಾಯದವರಿಗೆ ನೆರವು ನೀಡುತ್ತಿಿದ್ದೇವೆ ಎಂದರು.
ರಾಯಚೂರಿನಲ್ಲಿ ಮತ್ತೊೊಂದು ಸಂಘದಿಂದ ನಡೆಸುತ್ತಿಿರುವ ವಸತಿ ನಿಲಯದ ಜೀರ್ಣೋದ್ಧಾಾರದ ಬಗ್ಗೆೆ ಚರ್ಚೆ ಪ್ರಗತಿಯಲ್ಲಿದೆ. ಮೈಸೂರಲ್ಲಿ, ದಾವಣಗೆರೆ, ಹಾಸನದಲ್ಲಿ ವಸತಿ ನಿಲಯ ಆರಂಭಿಸುವ ಉತ್ಸಾಾಹದೊಂದಿಗೆ ಯೋಜನೆ ರೂಪಿಸಲಾಗಿದೆ ಎಂದ ಅವರು, ತಮ್ಮ ಸಮಿತಿಯ ಕ್ರಿಿಯಾಶೀಲತೆ ಚುರುಕುಗೊಳಿಸಲು ಎಲ್ಲ ಜಿಲ್ಲೆೆಯ ಪ್ರತಿನಿಧಿಗಳ ಜೊತೆ ಸೇರಿ ಕೆಲಸ ಮಾಡುತ್ತೇವೆ ಎಂದರು.
ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿಿರುವ ಗಣತಿಯಲ್ಲಿ ಜಾತಿ ಆರ್ಯವೈಶ್ಯಘಿ, ಧರ್ಮ ಹಿಂದೂ ಎಂದು ಮಾತ್ರ ಬರೆಯಿಸಿ ಉಳಿದ ಮಾಹಿತಿ ಅವರಿಚ್ಚೆೆಯಂತೆ ಮಾಡಲು ಸಮುದಾಯಕ್ಕೆೆ ಹೇಳಿದ್ದೇವೆ. ಸರ್ಕಾರ ಜಾತಿ, ಧರ್ಮಗಳ ಒಡೆಯುವ ಕೆಲಸದ ಭಾಗ ಇದಾಗಿದೆ. ಇನ್ನೇನು ಕೆಲವೆ ದಿನಗಳಲ್ಲಿ ಕೇಂದ್ರವೂ ಜಾತಿಗಣತಿ ಮಾಡುತ್ತಿಿರುವಾಗ ರಾಜ್ಯದಲ್ಲಿ ಪ್ರತ್ಯೇಕ ಗಣತಿ ಮಾಡಿ 400 ಕೋಟಿ ಪೋಲು ಮಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಿಸಿದರು.ಸಮೀಕ್ಷೆೆಯಲ್ಲಿನ ಪ್ರಶ್ನೆೆಗಳ ಬಗ್ಗೆೆ ಖುದ್ದು ಡಿಸಿಎಂ ಶಿವಕುಮಾರ ಅವರೇ ಆಕ್ಷೇಪಿಸಿದ್ದಿದೆ. ನಗರ ಪ್ರದೇಶದಲ್ಲಿ ಮನೆಯಲ್ಲಿ ಯಾರೂ ಇರುವುದಿಲ್ಲ ದುಡಿಯಲು ಹೋಗುತ್ತಾಾರೆ ಮಾಹಿತಿ ಯಾರು ನೀಡಬೇಕು. ಇದು ಸಮಗ್ರ ಸಮೀಕ್ಷೆೆಯಾಗಲು ಸಾಧ್ಯವಿಲ್ಲ ಎಂದರು.
ಕೇಂದ್ರ ಘೋಷಿಸಿದ ಆರ್ಥಿಕ ಹಿಂದುಳಿದವರ ಪ್ರಮಾಣ ಪತ್ರವನ್ನು ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಗೆ ತಾರದೆ ಅನ್ಯಾಾಯ ಮಾಡಲಾಗುತ್ತಿಿದೆ ಎಂದರು.
ಸುದ್ದಿಗೋಷ್ಠಿಿಯಲ್ಲಿ ರ್ಯವೈಶ್ಯ ಅಭಿವೃದ್ದಿ ನಿಗಮ ಅಧ್ಯಕ್ಷ ಕೆ.ವಿ.ರಾಮಪ್ರಸಾದ, ಹಿರಿಯ ಉಪಾಧ್ಯಕ್ಷ ಕುಂಟ್ನಾಾಳ ವೆಂಕಟೇಶ, ಜಗದೀಶ ಗುಪ್ತಾಾಘಿ, ದೇವನಪಲ್ಲಿ ವಾಸುದೇವ, ಕೆ.ಸಿ.ವೀರೇಶ, ರಾಘವೇಂದ್ರಘಿ, ವೀರೇಶ, ಹನುಮಂತಯ್ಯ ಇತರರಿದ್ದರು.
ಇತ್ತೀಚೆಗೆ ತಾವು ಕರ್ನಾಟಕ ರಾಜ್ಯ ಆರ್ಯವೈಶ್ಯ ಅಭಿವೃದ್ದಿ ನಿಗಮದ ಜವಾಬ್ದಾಾರಿ ಪಡೆದಿದ್ದುಘಿ. ಸಮಾಜದವರಿಗೆ ನಿಗಮದಿಂದ ಸಿಗುವ ಸೌಲಭ್ಯ ಕೊಡಿಸುವ ಪ್ರಾಾಮಾಣಿಕ ಪ್ರಯತ್ನ ಮಾಡುವೆ. ಇದುವರೆಗೂ ನಿಗಮದಿಂದ 30 ಕೋಟಿ ಅನುದಾನ ಸಾಲ, ಸಬ್ಸಿಿಡಿ ಯೋಜನೆಗಳಡಿ ವಿತರಿಸಲಾಗಿದೆ.
——ಕೆ.ವಿ ರಾಮಪ್ರಸಾದ್, ಅಧ್ಯಕ್ಷರು ಆರ್ಯವೈಶ್ಯ ಅಭಿವೃದ್ದಿ ನಿಗಮ.
ಸಮುದಾಯದವರಿಗಾಗಿ ಪ್ರತಿ ತಿಂಗಳ 48 ಲಕ್ಷ ವೆಚ್ಚ ರಾಯಚೂರು ಸೇರಿ ನಾಲ್ಕು ಕಡೆ ವಸತಿ ನಿಲಯಕ್ಕೆೆ ನಿರ್ಧಾರ-ರವಿಶಂಕ

