ಸುದ್ದಿಮೂಲ ವಾರ್ತೆ ಬೀದರ್, ಅ.05:
ಚುನಾವಣೆಗಳಲ್ಲಿ ಪೌರಾಡಳಿತ ಸಚಿವ ರಹೀಮ್ ಖಾನ್ ವೀರಾವೇಷದ ಭಾಷಣ ಕೇಳಿದವರಿಗೆ ಗೊತ್ತಿಿರುತ್ತೆೆ, ಮಾತೆತ್ತಿಿದ್ದರೆ ಸಾವಿರ ಕೋಟಿ ತಂದು ನಗರ ಅಭಿವೃದ್ಧಿಿ ಮಾಡಲಾಗಿದೆ ಎಂದು ಹೇಳುವುದು ಮಾಮೂಲು.
ಬೀದರ್ ನಗರ ಜಿಲ್ಲಾ ಕೇಂದ್ರವೂ ಆಗಿರುವುದರಿಂದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಿಗೆ ದೊಡ್ಡ ಮೊತ್ತದ ಹಣದ ಅಗತ್ಯ ಇದೆ. ಆದರೆ, ಸರ್ಕಾರದ ಅನುದಾನ ಹೇಗೆ ಬಳಕೆಯಾಗಿದೆ ಎಂಬುದೂ ಮುಖ್ಯವಾಗಬೇಕಲ್ಲವೇ ? ಹೌದು, ನಾಲ್ಕು ಬಾರಿ ಶಾಸಕನಾಗಿ ಆಯ್ಕೆೆಯಾದ ರಹೀಮ್ ಖಾನ್ಗೆ ಎರಡು ಬಾರಿ ಸಚಿವ ಸ್ಥಾಾನದ ಭಾಗ್ಯವೂ ಸಿಕ್ಕಿಿದೆ. ಈಗ ಸಿದ್ದರಾಮಯ್ಯ ಸಂಪುಟದಲ್ಲಿ ಪೌರಾಡಳಿತ ಖಾತೆ ದೊರಕಿದ ಬಳಿಕ ಅಂಧಾ ದಂಧಾ ಹೆಚ್ಚಾಾಗಿದೆ ಎಂಬ ಆರೋಪಗಳು ಸ್ವಸಮುದಾಯದಲ್ಲೇ ಜೋರು ಪಡೆದಿವೆ.
ಅನೇಕ ದೊಡ್ಡ ದೊಡ್ಡ ಕಾಮಗಾರಿಗಳು ಸಚಿವ ರಹೀಮ್ ಖಾನ್ ಸಂಬಂಧಿಗಳಿಂದಲೇ ನಡೆಯುತ್ತಿಿವೆ ಎಂಬ ಆರೋಪಗಳು ಇದ್ದೇ ಇವೆ. ದೊಡ್ಡ ದೊಡ್ಡ ಗುತ್ತಿಿಗೆದಾರರ ಹೆಸರಲ್ಲಿ ಸಂಬಂಧಿಗಳು ಕಾಮಗಾರಿಗಳು ನಡೆಸಿದ್ದಾರೆ ಎನ್ನಲಾಗಿದೆ.
ನೌಬಾದ್ – ಬೀದರ್ ರಸ್ತೆೆಗೆ ಎಷ್ಟು ಗುಂಡಿಗಳು ?
ನಗರದ ಪ್ರಮುಖ ಮಾರ್ಗವಾಗಿರುವ ಬಸ್ ನಿಲ್ದಾಾಣದಿಂದ ಭಾಲ್ಕಿಿ, ಹುಮ್ನಾಾಬಾದ್ ಗೆ ಸಂಪರ್ಕ ಕಲ್ಪಿಿಸುವ ಬೀದರ್- ನೌಬಾದ್ ಮಾರ್ಗದ ರಸ್ತೆೆ ಸದ್ಯ ಗುಂಡಿಗಳಿಂದಾಗಿ ಸವಾರರು ಪರದಾಡುವ ಪರಿಸ್ಥಿಿತಿ ಬಂದಿದೆ. ಇತ್ತೀಚಿಗೆ ಸುರಿದ ಮಳೆಗೆ ಇದ್ದ ಬಿದ್ದ ರಸ್ತೆೆ ಕಿತ್ತು ಹೋಗಿದ್ದು, ಸವಾರರು ಬೀಳದೇ ಮನೆ ತಲುಪಿದರೆ ಅದೇ ಪುಣ್ಯ ಎಂಬಂತಾಗಿದೆ.
ಐದಾರು ಕಿಮೀ ರಸ್ತೆೆ ಪ್ರಯಾಣ ಹರಸಾಹಸ ಪಡುವಂತಾಗಿದೆ. ನಗರದ ಸಂಚಾಯ ದಟ್ಟಣೆಯ ಮಾರ್ಗಗಳಲ್ಲಿ ಈ ರಸ್ತೆೆ ಕೂಡ ಒಂದು. ್
ಕಳಪೆ ಕಾಮಗಾರಿಗೆ ಇಲ್ಲಿದೆ ಸಾಕ್ಷಿ !
ಕಳಪೆ ಕಾಮಗಾರಿಗಳು ಈಗೀಗ ಮಾಮೂಲು ಎಂಬಂತಾಗಿವೆ. ಹೆಚ್ಚು ಮಳೆ ಬಂದು ರಸ್ತೆೆ ಹಾಳಾಗಿದೆ, ಭಾರದ ವಾಹನಗಳು ಓಡಾಡಿ ರಸ್ತೆೆ ಹಾಳಾಗಿವೆ ಎಂದು ಅಧಿಕಾರಿಗಳು ಕಂಠಪಾಠ ಒಪ್ಪಿಿಸಿದರೆ ಮುಗೀತು. ಕ್ರಮ ಎಲ್ಲಿದೆ ?
ಬೀದರ್ದಿಂದ ನೌಬಾದ್ ವರೆಗೆನ ರಸ್ತೆೆ ನಿರ್ಮಾಣಗೊಂಡು ಕೇವಲ ಒಂದು ವರ್ಷ ಪೂರ್ಣಗೊಂಡಿದೆ. ಕಳೆದ 26-10.2024ರಂದು ನೌಬಾದ್ – ಬೀದರ್ ಮಾರ್ಗದ ಶಿವನಗರದಲ್ಲಿ ರಸ್ತೆೆ ನಿರ್ಮಾಣ ಮಾಡುವಾಗ ಖುದ್ದು ಹೋಗಿ ರಹೀಮ್ ಖಾನ್ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದ್ದಾರೆ. ತಮ್ಮದೇ ೇಸ್ಬುಕ್ ಖಾತೆಯಲ್ಲಿ ಸದರಿ ಕಾಮಗಾರಿ ಕುರಿತ ಜಿ ಪಿ ಎಸ್ ೆಟೋ ಕೂಡ ಹಾಕಲಾಗಿದೆ. ಅಂದರೆ, ಕೇವಲ ಒಂದು ವರ್ಷಕ್ಕೆೆ ಸದರಿ ರಸ್ತೆೆ ಹಾಳಾಗಿದ್ದು, ಗುತ್ತಿಿಗೆದಾರ ಯಾರು? ಅನುದಾನ ಎಷ್ಟು? ಹೇಳಬಲ್ಲರೇ ಸಚಿವ ರಹೀಮ್ ಖಾನ್. ಇದು ಕಳಪೆ ಕಾಮಗಾರಿಯಲ್ಲದೇ ಮತ್ತೇನು ?
ಕಳಪೆಗೆ ಏನಿದೆ ಉತ್ತರ ಹೇಳಪ್ಪಾಾ ರಹೀಮ್ ಖಾನ್ ?
ಜನಪ್ರತಿನಿಧಿಗಳು ಕಳಪೆ ಕಾಮಗಾರಿ ಬೆಳಕಿಗೆ ಬಂದ ಬಳಿಕವೂ ಮೌನ ವಹಿಸಿದ್ದಾರೆ ಎಂದರೆ ಏನರ್ಥ? ಒಂದೋ ಗುತ್ತಿಿಗೆದಾರಿಕೆಯಲ್ಲಿ ಪಾಲು ಪಡೆದಿರಬೇಕು ಅಥವಾ ಖುದ್ದು ಕಾಮಗಾರಿ ನಡೆಸಿರಬೇಕು. ಸದರಿ ರಸ್ತೆೆ ಕಾಮಗಾರಿ ಕಳಪೆಯಾದರೂ ಸಚಿವ ರಹೀಮ್ ಖಾನ್ ತುಟಿ ಬಿಚ್ಚುತ್ತಿಿಲ್ಲ. ಕಾಮಗಾರಿ ಉದ್ಘಾಾಟನೆ ಮಾಡಿ ಅನುದಾನ ಮಂಜೂರು ಮಾಡಿದರೆ ಅಭಿವೃದ್ಧಿಿಯಾಗುವುದಿಲ್ಲ. ಬದಲಿಗೆ ಗುಣಮಟ್ಟದ ಕಾಮಗಾರಿಯೂ ಅಗತ್ಯ ತಾನೇ? ನೌಬಾದ್ – ಬೀದರ್ ರಸ್ತೆೆ ಕಳಪೆಗೆ ಒಂದು ನಿದರ್ಶನ ಅಷ್ಟೇ, ಇಂಥ ಹಲವು ಕಾಮಗಾರಿಗಳು ಕಳಪೆಯಾಗಿ
ನಡೆದಿರುವ ಬಗ್ಗೆೆ ಸಾರ್ವಜನಿಕ ಆರೋಪಗಳು ಕೇಳಿ ಬರುತ್ತಿಿವೆ. ಉತ್ತರಿಸಬಲ್ಲರೇ ರಹೀಮ್ ಖಾನ್ ?
ರಸ್ತೆೆ ಗುಂಡಿಗಳು ಕಾಣುತ್ತಿಿಲ್ಲವೇ? : ಕೆ. ಆರ್. ಎಸ್ ಪಕ್ಷ
ನೌಬಾದ್ ದಿಂದ ಬೀರ್ದ ವರೆಗಿನ ರಸ್ತೆೆಯಲ್ಲಿ ಗುಂಡಿಗಳು ಬಿದ್ದು, ಸವಾರರು ಜೀತಿ ಪಡುತ್ತಿಿದ್ದಾರೆ. ಸತತ ಮಳೆಯಲ್ಲಿ ಜನರು ದೊಡ್ಡ ದೊಡ್ಡ ಗುಂಡಿಗಳಲ್ಲೇ ಸಂಚರಿಸಿದ್ದಾರೆ. ಜನರ ತೆರಿಗೆ ದುಡ್ಡಲ್ಲಿ ಸಂಬಳ ಪಡೆಯುವ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಜನರ ಸಮಸ್ಯೆೆ ಕಣ್ಣಿಿಗೆ ಕಾಣಿಸುತ್ತಿಿಲ್ಲವೇ ? ನಿತ್ಯ ಜನರು ಪರದಾಡುತ್ತಿಿದ್ದರೂ ಸಂಬಂಧಪಟ್ಟವರು ಏಕೆ ಗಮನಸರಿಸುತ್ತಿಿಲ್ಲ ಎಂದು ಕೆ ಆರ್ ಪಕ್ಷದ ಜಿಲ್ಲಾಧ್ಯಕ್ಷ ಹಣಮಂತ್ ಮಟ್ಟೆೆ ನೇತೃತ್ವದಲ್ಲಿ ಭಾನುವಾರ ಸದರಿ ರಸ್ತೆೆಯಲ್ಲಿ ಬಿದ್ದ ತಗ್ಗು- ಗುಂಡಿಗಳಲ್ಲಿ ಹೂ ಸುರಿದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋೋಶ ವ್ಯಕ್ತಪಡಿಸಲಾಯಿತು.
ನೌಬಾದ್ – ಬೀದರ್ ರಸ್ತೆೆ ಕಳಪೆ ’ ವರ್ಷದಲ್ಲೇ ಡಮಾರ್
