ಸುದ್ದಿಮೂಲ ವಾರ್ತೆ ಬೆಂಗಳೂರು, ಅ.07:
ಭೂಹೀನ ಪರಿಶಿಷ್ಟ ಪಂಗಡದವರಿಗೆ ಭೂಮಿ ನೀಡಲು ನಿಗಮದ ವತಿಯಿಂದ ಜಾರಿಯಲ್ಲಿರುವ ಭೂ ಒಡೆತನ ಯೋಜನೆಗೆ ಹೆಚ್ಚಿಿನ ಅನುದಾನ ನೀಡುವಂತೆ ರಾಯಚೂರು ಗ್ರಾಾಮೀಣ ಶಾಸಕ ಹಾಗೂ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಿ ನಿಗಮ ಅಧ್ಯಕ್ಷ ಬಸನಗೌಡ ದದ್ದಲ್ ಮನವಿ ಮಾಡಿದರು.
ಪರಿಶಿಷ್ಟ ಪಂಗಡಗಳ ಕಲ್ಯಾಾಣ ಇಲಾಖೆ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಿ ನಿಗಮ ನಿಯಮಿತ ಸಹಯೋಗದಲ್ಲಿ ವಿಧಾನಸೌಧದ ಬ್ಯಾಾಂಕ್ವೆೆಟ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಭೂ ಒಡೆತನ ಯೋಜನೆಯಲ್ಲಿ 3 ಲಕ್ಷದ 60 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಕಾರಣ ಈ ಎಲ್ಲಾ ಅರ್ಜಿಗಳನ್ನು ವಿಶೇಷ ಪ್ರಕರಣಗಳೆಂದು ಪರಿಗಣಿಸಿ ಭೂ ಮಂಜೂರಾತಿಗೆ ಅವಕಾಶ ನೀಡಿ ಅದಕ್ಕೆೆ ಬೇಕಾಗುವ 450 ಕೋಟಿ ರೂ. ಅನುದಾನ ನೀಡುವಂತೆ ಕೋರಿದರು.
ವಾಲ್ಮೀಕಿ ಅಭಿವೃದ್ಧಿಿ ನಿಗಮದಲ್ಲಿ ಅತಿಹೆಚ್ಚು ಪ್ರಯೋಜನಕಾರಿಯಾದ ಮತ್ತು ಪರಿಶಿಷ್ಟ ಪಂಗಡದವರಿಗೆ ಭೂಮಿ ಹಕ್ಕು ನೀಡುವ ಉತ್ತಮ ಯೋಜನೆ ಇದಾಗಿದ್ದು, ಈ ಹಿಂದೆ ಈ ನಿಗಮದಲ್ಲಿ ಏನೇ ಆಗಿದ್ದರೂ ಅದನ್ನು ಬದಿಗೊತ್ತಿಿ ನನೆಗುದಿಗೆ ಬಿದ್ದಿರುವ ಎಲ್ಲಾ ಅರ್ಜಿಗಳನ್ನು ಪರಿಗಣಿಸಲು ಮುಖ್ಯಮಂತ್ರಿಿಗಳು ಮನಸ್ಸು ಮಾಡಬೇಕು ಎಂದು ಮನವಿ ಮಾಡಿದರು.
ಬೆಂಗಳೂರಿನಲ್ಲಿ ವಾಲ್ಮೀಕಿ ಸೌಧ ನಿರ್ಮಾಣ ಮಾಡಲು ಈಗಾಗಲೇ 2 ಎಕರೆ ಭೂಮಿ ನೀಡಲಾಗಿದೆ. ಅದರ ನಿರ್ಮಾಣಕ್ಕೆೆ 50 ಕೋಟಿ ರೂ. ಅನುದಾನ ನೀಡುವಂತೆ ಮನವಿ ಮಾಡುವುದರ ಜೊತೆಗೆ, ಈಗಾಗಲೇ ರಾಯಚೂರು ವಿಶ್ವವಿದ್ಯಾಾಲಯಕ್ಕೆೆ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾಲಯ ಎಂದು ನಾಮಕರಣ ಮಾಡಿದ್ದನ್ನು ಸ್ವಾಾಗತಿಸಿದ ಅವರು ರಾಜ್ಯದಲ್ಲಿ ಪ್ರತ್ಯೇಕವಾಗಿ ಬುಡಕಟ್ಟು ವಿಶ್ವವಿದ್ಯಾಾಲಯ ಸ್ಥಾಾಪನೆ ಮಾಡಬೇಕು ಎಂದರು.
15 ಎಸ್ಟಿಿ ಮೀಸಲು ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಂದ ಕಾಂಗ್ರೆೆಸ್ ಪಕ್ಷದವರು ಜಯಗಳಿಸಿದ್ದಾರೆ. ಈ ಸಮುದಾಯ ಕಾಂಗ್ರೆೆಸ್ ಪಕ್ಷದ ಮೇಲೆ ವಿಶ್ವಾಾಸ ಇಟ್ಟಿಿದ್ದು ಅದಕ್ಕಾಾಗಿ ಈ ಸಮುದಾಯಕ್ಕೆೆ ಬೇಕಾಗುವ ಎಲ್ಲಾ ಸವಲತ್ತುಗಳನ್ನು ಒದಗಿಸುವಂತೆ ಕೋರಿದರು.
ಪರಿಶಿಷ್ಟರ ತಟ್ಟಿಿಗೆ ಕೈ ಹಾಕಬೇಡಿ: ಉಗ್ರಪ್ಪ
ಪರಿಶಿಷ್ಟ ಪಂಗಡಕ್ಕೆೆ ಕುರುಬರನ್ನು ಸೇರಿಸುವುದಾದರೆ ಕುಲಶಾಸೀಯ ಅಧ್ಯಯನ ಮಾಡಿ ಆರ್ಥಿಕ, ಶೈಕ್ಷಣಿಕ ಹಿನ್ನೆೆಲೆಯನ್ನು ಪರಿಗಣಿಸಿ ಸೇರ್ಪಡೆಗೆ ಕೇಂದ್ರಕ್ಕೆೆ ಶಿಾರಸು ಮಾಡಬಹುದು. ಆದರೆ, ಈಗಿರುವ ಪರಿಶಿಷ್ಟರ ಶೇ.7ರ ಮೀಸಲಾತಿಯಲ್ಲಿಯೇ ಕುರುಬರನ್ನು ಸೇರಿಸಿದರೆ ಅನ್ಯಾಾಯವಾಗುತ್ತದೆ. ಕುರುಬರಿಗೆ ಹಿಂದುಳಿದ ವರ್ಗದಲ್ಲಿರುವ ಶೇ.7ರ ಮೀಸಲಾತಿಯನ್ನು ಪರಿಶಿಷ್ಟಕ್ಕೆೆ ವರ್ಗಾವಣೆ ಮಾಡಿ ಸೇರಿಸಿದರೆ ತಮ್ಮದು ಯಾವುದೇ ರೀತಿಯ ಅಭ್ಯಂತರ ಇಲ್ಲ. ಆದರೆ, ಅದಾವುದೂ ಮಾಡದೆ ನಮ್ಮ ಮೀಸಲಾತಿಗೆ ಕೈ ಹಾಕಿದರೆ ಅದನ್ನು ಸಹಿಸುವುದಿಲ್ಲ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಎಚ್ಚರಿಕೆಯ ಮಾತುಗಳನ್ನಾಾಡಿದರು.
ಈ ಹಿಂದೆ ನಾಯಕ ಸಮುದಾಯದ ಜೊತೆಗೆ ಕುರುಬ ಸಮುದಾಯವನ್ನು ಎಸ್ಟಿಿಗೆ ಸೇರಿಸಲು ಶಿಾರಸು ಮಾಡಲಾಗಿತ್ತು. ಕೇಂದ್ರ ಅದನ್ನು ತಿರಸ್ಕರಿಸಿತ್ತು. ಆದರೆ, ನಾನು ಮತ್ತು ನನ್ನ ಮಾವ ವೀರಣ್ಣ ಅವರು ದೇವೇಗೌಡರ ನೆರವಿನೊಂದಿಗೆ ಚಂದ್ರಶೇಖರ್ ಅವರು ಪ್ರಧಾನಿಯಾಗಿದ್ದಾಗ ಪರಿಶಿಷ್ಟ ಪಂಗಡಕ್ಕೆೆ ಸೇರ್ಪಡೆ ಮಾಡಲಾಯಿತು. ಆದರೆ, ಕುರುಬರು ಆಗಲೇ ಪ್ರಯತ್ನಪಟ್ಟಿಿದ್ದರೆ ಆಗಲೇ ಎಸ್ಟಿಿಗೆ ಸೇರುತ್ತಿಿದ್ದರು. ಆದರವರು ಪ್ರಯತ್ನ ಮಾಡಲಿಲ್ಲ ಎಂದರು.
ಪರಿಶಿಷ್ಟ ಪಂಗಡದವರಿಗೆ ಕೈಗಾರಿಕೆ ಸ್ಥಾಾಪಿಸಲು ಕೆಐಎಡಿಬಿ ಮೂಲಕ ಗರಿಷ್ಠ 10 ಎಕರೆ ಭೂಮಿ ನೀಡಬೇಕು ಮತ್ತು ಶೇ.4ರ ಬಡ್ಡಿಿದರದಲ್ಲಿ ವಿಧಿಸುವ ಸಾಲಸೌಲಭ್ಯವನ್ನು 10 ವರ್ಷ ಪಾವತಿಸದಿದ್ದರೆ ಅದು ಶೇ.14ಕ್ಕೆೆ ಏರಿಕೆಯಾಗುವ ನಿಯಮ ತೆಗೆದುಹಾಕಬೇಕು, ಪರಿಶಿಷ್ಟ ಪಂಗಡದವರು ಎಷ್ಟೇ ಕೈಗಾರಿಕೆ ಸ್ಥಾಾಪಿಸಿದರೂ ಅಗತ್ಯಕ್ಕೆೆ ತಕ್ಕಂತೆ ಭೂಮಿ ನೀಡಬೇಕು, ಕರ್ನಾಟಕದಲ್ಲಿ ಪ್ರತ್ಯೇಕವಾಗಿ ಬುಡಕಟ್ಟು ವಿಶ್ವವಿದ್ಯಾಾಲಯ ಸ್ಥಾಾಪನೆ ಮಾಡಬೇಕು, ವಾಲ್ಮೀಕಿ ಗುರುಪೀಠ ಇರುವ ರಾಜನಹಳ್ಳಿಿಯಲ್ಲಿ ಸರ್ಕಾರದಿಂದಲೇ ವಸತಿ ಶಾಲೆ ಸ್ಥಾಾಪನೆ ಮಾಡಬೇಕು, ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ವಾಲ್ಮೀಕಿ ಬರೆದ ರಾಮಾಯಣ ಪುಸ್ತಕ ಉಚಿತವಾಗಿ ವಿತರಣೆ ಮಾಡಬೇಕು, ಮೆಟ್ರೋೋ ನಿಲ್ದಾಾಣವೊಂದಕ್ಕೆೆ ವಾಲ್ಮೀಕಿ ಅವರ ಹೆಸರು ನಾಮಕರಣ ಮಾಡಬೇಕು, ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ವಾಲ್ಮೀಕಿ ಪ್ರತಿಮೆ ಅನಾವರಣಗೊಳಿಸಬೇಕು, ದೆಹಲಿ-ಬೆಂಗಳೂರು ಮಾಧ್ಯೆೆ ಸಂಚರಿಸುವ ರೈಲೊಂದಕ್ಕೆೆ ವಾಲ್ಮೀಕಿ ಹೆಸರಿಡಲು ಹಾಗೂ ಅದೇ ರೀತಿ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಗೆ ವಾಲ್ಮೀಕಿ ಹೆಸರಿಸಲು ಕೇಂದ್ರಕ್ಕೆೆ ಶಿಾರಸು ಮಾಡಬೇಕು ಎಂದು ಮುಖ್ಯಮಂತ್ರಿಿಗಳಲ್ಲಿ ಮನವಿ ಮಾಡಿದರು.
ಮುಂಬರುವ ದಿನಗಳಲ್ಲಿ ನಾಯಕ ಸಮುದಾಯದ ಸಮರ್ಥರೊಬ್ಬರು ಮುಖ್ಯಮಂತ್ರಿಿ ಆಗುವ ಅವಕಾಶ ಕಲ್ಪಿಿಸುವ ನಿಟ್ಟಿಿನಲ್ಲಿ ಬೆಂಬಲಿಸುವುದರ ಮೂಲಕ ತಾವು ಮುನ್ನಡೆಸುತ್ತಿಿರುವ ಸಾಮಾಜಿಕ ನ್ಯಾಾಯದ ರಥವನ್ನ ಎಳೆಯಲು ಸಹಕಾರ ನೀಡಬೇಕು, ಜನಸಂಖ್ಯೆೆಗೆ ಅನುಗುಣವಾಗಿ ಪರಿಶಿಷ್ಟರ ಶಾಸಕ ಮತ್ತು ಸಂಸದರ ಕ್ಷೇತ್ರಗಳು ಹೆಚ್ಚಿಿಸಬೇಕು ಎಂದು ಕೋರಿದ ಉಗ್ರಪ್ಪ, ರಾಮಾಯಣದಲ್ಲಿ ವಾಲ್ಮೀಕಿಯವರು ರಾಜನೀತಿ, ಅರ್ಥಶಾಸ, ಹಣಕಾಸು ವ್ಯವಹಾರ ಹಾಗೂ ಭ್ರಷ್ಟಾಾಚಾರ ರಹಿತ ಆಡಳಿತ ಹೇಗೆ ನೀಡಬೇಕು ಎಂಬುದನ್ನು ಪ್ರಸ್ತಾಾಪಿಸಿದ್ದು ಆ ದಿಸೆಯಲ್ಲಿ ವಾಲ್ಮೀಕಿ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಸಂವಿಧಾನದ 340 ಮತ್ತು 342 ರ ಪ್ರಕಾರ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದರೆ ಅಂತಹ ಸಮುದಾಯಗಳನ್ನು ಅರ್ಹತೆ ಆಧಾರದ ಮೇಲೆ ಪರಿಶಿಷ್ಟ ಜಾತಿಗೆ ಸೇರಿಸಲು ಅವಕಾಶ ಇದ್ದು, ಕ್ಷೌರಿಕ, ಮಡಿವಾಳ ಸಮುದಾಯದವರಿಗೆ ಅಂತಹ ಅವಕಾಶಗಳು ಕಲ್ಪಿಿಸಿಕೊಡಬೇಕು ಎಂದು ಇದೇ ವೇಳೆ ಮುಖ್ಯಮಂತ್ರಿಿಗೆ ಮನವಿ ಮಾಡಿದರು.

