ಸುದ್ದಿಮೂಲ ವಾರ್ತೆ ಬೆಂಗಳೂರು, ಅ.07:
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಅನಾರೋಗ್ಯದಿಂದ ನಗರದ ಮಣಿಪಾಲ್ ಆಸ್ಪತ್ರೆೆಗೆ ದಾಖಲಾಗಿದ್ದು, ಐಸಿಯುನಲ್ಲಿ ಅವರಿಗೆ ಚಿಕಿತ್ಸೆೆ ಮುಂದುವರಿಸಲಾಗಿದೆ.
ಚಳಿಜ್ವರ ಮತ್ತು ಮೂತ್ರ ಸೋಂಕಿನಿಂದ ಬಳಲುತ್ತಿಿರುವ ಅವರನ್ನು ಸೋಮವಾರ ರಾತ್ರಿಿಯೇ ಮಣಿಪಾಲ ಆಸ್ಪತ್ರೆೆಗೆ ದಾಖಲಿಸಲಾಗಿದ್ದು, ಡಾ.ಸುದರ್ಶನ್ ಬಲ್ಲಾಳ್ ಅವರ ನೇತೃತ್ವದ ತಂಡವು ಐಸಿಯುನಲ್ಲಿ ಚಿಕಿತ್ಸೆೆ ನೀಡುತ್ತಿಿದೆ ಎಂದು ಆಸ್ಪತ್ರೆೆಯ ವೈದ್ಯರು ಮಾಹಿತಿ ನೀಡಿದ್ದಾರೆ. ಚಿಕಿತ್ಸೆೆಗೆ ದೇವೇಗೌಡರು ಸ್ಪಂದಿಸುತ್ತಿಿದ್ದು ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತಿಿದೆ.
ರಾಜ್ಯಸಭಾ ಸದಸ್ಯರೂ ಆಗಿರುವ 92 ವರ್ಷದ ದೇವೇಗೌಡ ಅವರಿಗೆ ವಯೋಸಹಜ ಅನಾರೋಗ್ಯ ಎದುರಾಗಿದೆ. ಕಳೆದ ವಾರವಷ್ಟೇ ಪಕ್ಷದ ಕಚೇರಿಯಲ್ಲಿ ಪತ್ರಿಿಕಾಗೋಷ್ಠಿಿ ನಡೆಸಿದ್ದ ಅವರು ಅತಿವೃಷ್ಟಿಿಗೆ ತುತ್ತಾಾಗಿರುವ ಕಲಬುರ್ಗಿ, ವಿಜಯಪುರ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಪ್ರವಾಸ ಮಾಡುವುದಾಗಿ ಹೇಳಿದ್ದರು.

