ಸುದ್ದಿಮೂಲ ವಾರ್ತೆ ರಾಯಚೂರು, ಅ.07:
ಮಹರ್ಷಿ ವಾಲ್ಮೀಕಿ ಅವರು ಶ್ರೀರಾಮಾಯಣದಲ್ಲಿ ಉಲ್ಲೇಖಿಸಿದ ಜೀವನ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಬದುಕು ಹಸನವಾಗಿರಲಿದೆ ಎಂದ ಸಂಸದ ಜಿ.ಕುಮಾರ ನಾಯಕ, ವಾಲ್ಮೀಕಿ ಭವನದ ಅಭಿವೃದ್ದಿಗೆ 50 ಲಕ್ಷ ರೂ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ನಗರದ ಆಶಾಪೂರು ರಸ್ತೆೆಯ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಠ ವರ್ಗಗಳ ಕಲ್ಯಾಾಣ ಇಲಾಖೆ ಹಾಗೂ ಮತ್ತಿಿತರ ಇಲಾಖೆಗಳ ಸಂಯುಕ್ತಾಾಶ್ರಯದಲ್ಲಿ ಹಮ್ಮಿಿಕೊಳ್ಳಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. ವಾಲ್ಮೀಕಿ ರಾಮಾಯಣ ಗ್ರಂಥ ರಚಿಸಿ ಮಹರ್ಷಿ ವಾಲ್ಮೀಕಿಯವರು ದೇಶ ಮಾತ್ರವಲ್ಲದೆ ಇಡೀ ಜಗತ್ತಿಿನ ಆದಿ ಕವಿ ಎಂದೇ ಹೆಸರಾಗಿದ್ದಾರೆ. ರಾಮಾಯಣದ ಮೂಲಕ ಮನುಕುಲಕ್ಕೆೆ ಮಾರ್ಗದರ್ಶನ ನೀಡಿದ್ದು. ಮಹರ್ಷಿ ವಾಲ್ಮೀಕಿ ಕೇವಲ ಒಂದು ಸಮುದಾಯಕ್ಕೆೆ ಸೀಮಿತರಾಗಿಲ್ಲ. ಇಡೀ ದೇಶದ, ಜಗತ್ತಿಿನ ಎಲ್ಲ ಸಮುದಾಯ ಜನತೆ ಮೆಚ್ಚುವ ಮಹಾನ್ ವ್ಯಕ್ತಿಿಯಾಗಿದ್ದಾರೆ ಎಂದರು.
ನಾವು ಇತಿಹಾಸ ಅರಿಯವೇಕು. ಅಂದಾಗ ಮಾತ್ರ ಹೊಸ ಇತಿಹಾಸ ನಿರ್ಮಿಸಲು ಸಾಧ್ಯವಾಗಲಿದೆ ಎಂದ ಸಂಸದರು, ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾಲಯ ರಾಯಚೂರು ನಗರಕ್ಕೆೆ ಹೆಮ್ಮೆೆ ಅನಿಸಿದ್ದು, ವಿಶ್ವವಿದ್ಯಾಾಲಯಕ್ಕೆೆ ವಾಲ್ಮೀಕಿಯವರ ಹೆಸರನ್ನು ನಾಮಕರಣ ಮಾಡಿದ ರಾಜ್ಯ ಸರ್ಕಾರಕ್ಕೆೆ ತಾವು ಅಭಿನಂದಿಸುವುದಾಗಿ ಹೇಳಿದರು. ರಾಯಚೂರಿನ ವಾಲ್ಮೀಕಿ ಭವನದ ಅಭಿವೃದ್ಧಿಿಗೆ 50 ಲಕ್ಷ ರೂ.ಅನುದಾನ ಸಂಸದರ ನಿಧಿಯಿಂದ ನೀಡುವುದಾಗಿ ಭರವಸೆ ನೀಡಿದರು.
ಶಾಸಕ ಡಾ.ಎಸ್ ಶಿವರಾಜ ಪಾಟೀಲ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಜಗತ್ತಿಿನ ಮೊದಲ ಕವಿಯಾಗಿದ್ದು ರಾಯಚೂರು ಭಾಗದಲ್ಲೂ ಪರಿಶಿಷ್ಟ ವರ್ಗದ ಜನರ ಕೊಡುಗೆ ಅಪಾರವಾಗಿದೆ. ವಾಲ್ಮೀಕಿ ಅವರ ತತ್ವಾಾದರ್ಶಗಳಿಂದ ಸಮಾಜದಲ್ಲಿ ಸಮಾನತೆ ನೆಲೆಸಬೇಕು ಎಂದು ತಿಳಿಸಿದರು. ವಾಲ್ಮೀಕಿ ಭವನದ ದುರಸ್ತಿಿಗೆ ಗಮನ ಹರಿಸಬೇಕು ಎಂದು ಇದೇ ವೇಳೆ ಶಾಸಕರು ಜಿಲ್ಲಾಡಳಿತಕ್ಕೆೆ ಸೂಚನೆ ನೀಡಿದರು.
ವಿಶೇಷ ಉಪನ್ಯಾಾಸ ನೀಡಿದ ಸುರಪುರದ ವಿಶ್ರಾಾಂತ ಪ್ರಾಾಂಶುಪಾಲ ಪ್ರೋೋ.ಜೆ.ವೇಣುಗೋಪಾಲ ನಾಯಕ, ಮಹರ್ಷಿ ವಾಲ್ಮೀಕಿ ಅವರನ್ನು ನಾವೇಲ್ಲರೂ ಸ್ವಾಾಭಿಮಾನದ ಪ್ರತೀಕವಾಗಿ ಸ್ವೀಕರಿಸಬೇಕು. ವಾಲ್ಮೀಕಿ ಇಡೀ ವಿಶ್ವಕ್ಕೆೆ ರಾಮಾಯಣ ಮಹಾಕಾವ್ಯ ನೀಡಿ, ಸರ್ವಧರ್ಮಿಯರಿಗೂ ಪೂಜ್ಯರಾಗಿದ್ದಾರೆ. ಮಹರ್ಷಿ ವಾಲ್ಮೀಕಿ ಅವರ ಜೀವನದ ಪಾಠವು ನಮ್ಮ ಬದುಕಿನ ಬದಲಾವಣೆಗೆ ನಾಂದಿ ಆಗಬೇಕು. ವಾಲ್ಮೀಕಿ ಸಮಾಜವು ರಾಜ್ಯದಲ್ಲಿ 3ನೇ ದೊಡ್ಡ ಸಮುದಾಯವಾಗಿದ್ದು ಮುಖಂಡರು ಒಗ್ಗಟ್ಟಾಾಗಿರಬೇಕು. ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ರಾಜಕೀಯವಾಗಿ ಎಲ್ಲರೂ ಸಂಘಟಿತರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ ಅವರು ಭಾರತ ಸಂವಿಧಾನದ ಪೀಠಿಕೆ ಬೋಧಿಸಿದರು. ಅಲ್ಲದೆ, ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಸಮಾಜದ ವಿದ್ಯಾಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಮುಖಂಡರಿಗೆ ಸನ್ಮಾಾನ ಮಾಡಲಾಯಿತು.
ಮೆರವಣಿಗೆ : ಇದಕ್ಕೂ ಮುನ್ನ ರಾಯಚೂರಿನ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದ ಬಳಿ ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಅಲ್ಲಿಂದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಭವ್ಯ ಮೆರವಣಿಗೆಗೆ ಶಾಸಕ ಡಾ.ಶಿವರಾಜ ಪಾಟೀಲ, ಸಂಸದ ಜಿ.ಕುಮಾರ ನಾಯಕ, ಪಾಲಿಕೆ ಮೇಯರ್ ನರಸಮ್ಮ ಮಾಡಗಿರಿ, ಜಿಲ್ಲಾಾಧಿಕಾರಿ ನಿತೀಶ್ ಕೆ ಅವರು ಪುಷ್ಪಾಾರ್ಚನೆ ಮಾಡಿ ಚಾಲನೆ ನೀಡಿದರು. ಅಲ್ಲಿಂದ ಬಸವೇಶ್ವರ ವೃತ್ತಘಿ, ಡಾ.ಬಿಆರ್ ಅಂಬೇಡ್ಕರ್ ಹಾಗೂ ಡಾ.ಬಾಬುಜೀ ವೃತ್ತದ ಮೂಲಕ ವಾಲ್ಮೀಕಿ ಭವನಕ್ಕೆೆ ಮೆರವಣಿಗೆ ಬಂದು ತಲುಪಿತು.
ಈ ಸಂದರ್ಭದಲ್ಲಿ ಎಸ್ಪಿ ಎಂ.ಪುಟ್ಟಮಾದಯ್ಯ, ಎಎಸ್ಪಿ ಕುಮಾರಸ್ವಾಾಮಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಾಣಾಧಿಕಾರಿ ಶಿವಮಾನಪ್ಪ, ವಿವಿ ಸಿಂಡಿಕೇಟ್ ಸದಸ್ಯ ಚನ್ನಬಸವ ನಾಯಕ, ಮುಖಂಡರಾದ ಕೆ.ಶಾಂತಪ್ಪಘಿ, ತಾಯಣ್ಣ ನಾಯಕ, ಮಾರಪ್ಪ ಬುದ್ದಿನ್ನಿಿ, ರಾಜಾ ಪಾಂಡುರಂಗ ನಾಯಕ, ಭೀಮರಾಯ ನಾಯಕ, ವೆಂಕಟೇಶ ನಾಯಕ, ರಘುವೀರ ನಾಯಕ, ನಾರಾಯಣ ನಾಯಕ, ಶಿವಪ್ಪ ನಾಯಕ, ಮಲ್ಲಿಕಾರ್ಜುನ ನಾಯಕ, ವೆಂಕಟೇಶ ಅಸ್ಕಿಿಹಾಳ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ಜಿಲ್ಲಾಡಳಿತದಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ವಾಲ್ಮೀಕಿ ಮಹರ್ಷಿಗಳ ತತ್ವ ಪಾಲಿಸಿದರೆ ಬದುಕು ಹಸನ-ಜಿ.ಕುಮಾರನಾಯಕ
