ಸುದ್ದಿಮೂಲ ವಾರ್ತೆ ಬೀದರ್, ಅ.08:
ನಗರದ ಪ್ರತಿಷ್ಠಿಿತ ಬ್ರಿಿಮ್ಸ್ ಆಸ್ಪತ್ರೆೆಯಲ್ಲಿ ಬಾಣಂತನದ ವೇಳೆ ಹೆಣ್ಣು ಮಗು ಮೃತಪಟ್ಟಿಿದ್ದು, ಆಸ್ಪತ್ರೆೆ ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಸತ್ತಿಿದೆ ಎಂಬ ಸಂತ್ರಸ್ಥರ ಗಂಭೀರ ಆರೋಪ ಹಿನ್ನೆೆಲೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಜಿಲ್ಲಾಾಧಿಕಾರಿಗಳಿಗೆ ಪತ್ರ ಬರೆದು ವಾರದೊಳಗೆ ವರದಿ ಸಲ್ಲಿಸಲು ಸೂಚಿಸಿದ್ದು, ಈವರೆಗೂ ವರದಿ ಸಲ್ಲಿಸಿಲ್ಲ ಎಂದು ಆಯೋಗದ ಮೂಲಗಳು ತಿಳಿಸಿವೆ.
ಸುದ್ದಿಮೂಲದಲ್ಲಿ ಸೆ.30ರಂದು ವೈದ್ಯರ ನಿರ್ಲಕ್ಷ್ಯಕ್ಕೆೆ ಮಗು ಸಾವು, ಬ್ರಿಿಮ್ಸ್ನಲ್ಲಿ ದರ್ದ್ನಾಕ್ ಕಹಾನಿ ತಲೆಬರಹದಡಿ ಸುದ್ದಿ ಪ್ರಕಟಗೊಂಡಿತ್ತು. ಬಳಿಕ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರು ವರದಿ ಗಮನಿಸಿ ಜಿಲ್ಲಾಾಧಿಕಾರಿಗಳಿಗೆ ಪತ್ರ ಬರೆದು ಘಟನೆಗೆ ಸಂಬಂಧಿಸಿದ ವೈದ್ಯರ ವಿರುದ್ಧ ಕ್ರಮ ಕೈಗೊಂಡು ವಾರದೊಳಗೆ ವರದಿ ಸಲ್ಲಿಸಲು ಸೂಚಿಸಿತು. ಆದರೆ, ಈವರೆಗೂ ವರದಿ ಕೈ ಸೇರಿಲ್ಲ ಎಂದು ಆಯೋಗದ ನಿರ್ದೇಶಕರೊಬ್ಬರು ಸುದ್ದಿಮೂಲಕ್ಕೆೆ ಖಚಿತಪಡಿಸಿದ್ದಾಾರೆ.
ಈ ಸಂಬಂಧ ಬುಧವಾರ ಜಿಲ್ಲಾಾಧಿಕಾರಿ ಶಿಲ್ಪಾಾ ಶರ್ಮಾ ಅವರಿಗೆ ಸುದ್ದಿಮೂಲ ಸಂಪರ್ಕಿಸಿ ಘಟನೆ ಕುರಿತು ಮಾಹಿತಿ ಕೇಳಿದ್ದು, ಡಿಸಿ ಹೇಳಿದ್ದು : ಬಾಣಂತಿ ಮಹಿಳೆಗೆ ಂಗಲ್ ಇನ್ಫೆೆಕ್ಷನ್ ಆಗಿರುವ ಬಗ್ಗೆೆ ವೈದ್ಯರಿಂದ ಮಾಹಿತಿ ದೊರೆತಿದೆ. ತಡವಾಗಿ ಆಸ್ಪತ್ರೆೆಗೆ ದಾಖಲಾಗಿರುವುದು ಕೂಡ ಘಟನೆಗೆ ಕಾರಣ ಎಂಬುದು ವೈದ್ಯರಿಂದ ತಿಳಿದು ಬಂದಿದೆ. ಸದರಿ ವರದಿ ಇನ್ನೂ ಮೂರು-ನಾಲ್ಕುಗಳಲ್ಲಿ ಬ್ರಿಿಮ್ಸ್ ವೈದ್ಯರಿಂದ ಬರಲಿದ್ದು, ಬಳಿಕ ವರದಿ ತಯ್ಯಾಾರಿಸಿ ಮಕ್ಕಳ ಆಯೋಗಕ್ಕೆೆ ಸಲ್ಲಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾಾರೆ.
ಘಟನೆ ವಿವರ : ಔರಾದ್ ತಾಲೂಕಿನ ಬೆಳಕುಣಿ ಚೌಧರಿ ಗ್ರಾಾಮದಿಂದ ಬಾಣಂತನಕ್ಕೆೆ ಬಂದಿದ್ದ ಜ್ಯೋೋತಿ ಎಂಬ ಮಹಿಳೆಯ ಬಾಣಂತನದ ವೇಳೆ ಮಗು ಸಾವನ್ನಪ್ಪಿಿತ್ತು. ಪರಿಣಿತ ವೈದ್ಯರು, ಸಿಬ್ಬಂದಿಗಳು, ಅತ್ಯಾಾಧುನಿಕ ಸೌಲಭ್ಯಗಳ ಮಧ್ಯೆೆಯೇ ನೋಡನೋಡುತ್ತಿಿದ್ದಂತೆ ಸತ್ತ ಮಗುವಿನ ಹೆಣ ಕೊಟ್ಟಿಿದ್ದಾಾರೆ ಬ್ರಿಿಮ್ಸ್ ಸಿಬ್ಬಂದಿಗಳು ಎಂದು ಬಾಣಂತಿ ಜ್ಯೋೋತಿ ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದು, ಈ ಬಗ್ಗೆೆ ಸುದ್ದಿಮೂಲದಲ್ಲಿ ಸವಿಸ್ತಾಾರವಾಗಿ ವರದಿ ಪ್ರಕಟಿಸಲಾಗಿತ್ತು.
ಮೊದಲು ಆರೋಗ್ಯ ಪರಿಸ್ಥಿಿತಿ ಸರಿಯಿಲ್ಲ ಎಂದು ಹೇಳಿದ ವೈದ್ಯರು ಸಾಮಾನ್ಯ ಹೆರಿಗೆ ಮಾಡುವುದಾಗಿ ಹೇಳಿದರು. ಆದರೆ, ಬಾಣಂತಿ ಜ್ಯೋೋತಿ ಹಾಗೂ ಕುಟುಂಬದವರು ಸಿಸೇರಿಯನ್ಗೆ ಒತ್ತಾಾಯಿಸಿದರು. ಆದರೆ, ವೈದ್ಯರು ಅದಕ್ಕೊೊಪ್ಪದೇ ಕಡೇ ಕ್ಷಣದಲ್ಲಿ ಕುಟುಂಬದವರಿಗೆ ಹೆದರಿಸಿ, ಬೆದರಿಸಿ ಒಪ್ಪಿಿಗೆ ಸಹಿ ಪಡೆದು ಶಸಚಿಕಿತ್ಸೆೆ ಮಾಡಿದ್ದು, ತಾಯಿ ಬದುಕಿದ್ದಾಾಳೆ, ಮಗು ಸಾವನ್ನಪ್ಪಿಿದೆ.
ಬಾಕ್ಸ್
ಮಗು ಸಾವು : ದಾಖಲೆಯಲ್ಲಿ ಜೀವಂತ
ಔರಾದ್ ತಾಲೂಕಿನ ಬೆಳಕುಣಿ ಚೌಧರಿ ಗ್ರಾಾಮದಿಂದ ಬಾಣಂತನದ ವೇಳೆ ಮಗು ಸಾವನ್ನಪ್ಪಿಿರುವ ಘಟನೆ ಸಂಬಂಧಿಸಿದಂತೆ ಬ್ರಿಿಮ್ಸ್ ವೈದ್ಯರ ದಾಖಲೆಗಳ ಪ್ರಕಾರ ಮಗು ಹಾಗೂ ತಾಯಿ ಜೀವಂತ ಎಂದು ವರದಿ ನೀಡಲಾಗಿದೆ. ಆದರೆ, ಬಾಣಂತನದ ವೇಳೆ ಮಗು ಸಾವನ್ನಪ್ಪಿಿದೆ ಎಂದು ಬಾಣಂತಿ ಜ್ಯೋೋತಿಗೆ ವೈದ್ಯರು ತಿಳಿಸಿದ್ದಾಾಗಿ ಆರೋಪಿಸಿದ್ದಾಾರೆ.
ಏಕೆ ವೈದ್ಯರು ಈ ವಿಷಯದಲ್ಲಿ ಗೊಂದಲ ಮೂಡಿಸಿದ್ದಾಾರೆ ಎಂಬುದು ನಿಗೂಢವಾಗಿದೆ. ಈ ಬಗ್ಗೆೆ ಜ್ಯೋೋತಿ ಸಂಬಂಧಿಕರು ಬ್ರಿಿಮ್ಸ್ ವೈದ್ಯರಿಗೆ ಈ ಬಗ್ಗೆೆ ಪ್ರಶ್ನಿಿಸಿದರೂ ಸರಿಯಾದ ಜವಾಬ್ ನೀಡಿಲ್ಲ ಎಂದು ಆರೋಪಿಸಿದ್ದಾಾರೆ.
ಬಾಕ್ಸ್
ಡಿಸಿ ವರದಿ ಮಹತ್ವ
ನಗರದ ಬ್ರಿಿಮ್ಸ್ ಆಸ್ಪತ್ರೆೆಯಲ್ಲಿ ಪದೇ ಪದೆ ಅವಘಡಗಳು ಸಂಭವಿಸುತ್ತಲೇ ಇವೆ. ಆದರೆ, ಜಿಲ್ಲಾಾಡಳಿತದಿಂದ ಕಟ್ಟುನಿಟ್ಟಿಿನ ಕ್ರಮ ಮಾತ್ರ ಆಗುತ್ತಿಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿಿವೆ. ಈಗ ಬಾಣಂತನದ ವೇಳೆ ಮಗು ಸಾವನ್ನಪ್ಪಿಿರುವ ಘಟನೆ ಬೆಳಕಿಗೆ ಬಂದಿದ್ದು, ರಾಜ್ಯ ಮಕ್ಕಳ ಆಯೋಗ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದೆ. ಜಿಲ್ಲಾಾಧಿಕಾರಿಗಳಿಗೆ ವೈದ್ಯರ ವಿರುದ್ಧ ಕ್ರಮಕ್ಕೆೆ ಶಿಾರಸ್ಸು ಮಾಡಿದೆ. ಹಾಗಾಗಿ, ಜಿಲ್ಲಾಾಧಿಕಾರಿ ಶಿಲ್ಪಾಾ ಶರ್ಮಾ ವೈದ್ಯರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಾಾರೆ ಹಾಗೂ ಆಯೋಗಕ್ಕೆೆ ಸಲ್ಲಿಸುವ ವರದಿಯಲ್ಲಿ ಏನೇನು ಅಂಶಗಳಿರುತ್ತವೆ ಎಂಬುದು ಮಹತ್ವ ಪಡೆದುಕೊಂಡಿದೆ.