ಸುದ್ದಿಮೂಲ ವಾರ್ತೆ ಬೆಂಗಳೂರು, ಅ.09:
ಸಿದ್ದರಾಮಯ್ಯ ಸರ್ಕಾರಕ್ಕೆೆ ನವೆಂಬರ್ನಲ್ಲಿ ಮೇಜರ್ ಸರ್ಜರಿ ನಡೆಯಲಿದೆ ಎಂಬ ಚರ್ಚೆಯ ಹಿನ್ನೆೆಲೆಯಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರು ಸಂಪುಟ ಸದಸ್ಯರನ್ನು ವಿಶ್ವಾಾಸಕ್ಕೆೆ ಪಡೆಯಲು ಇದೇ ಅ.13ರಂದು ರಾತ್ರಿಿ ಎಲ್ಲಾ ಸಚಿವರನ್ನು ಔತಣ ಕೂಟಕ್ಕೆೆ ಕರೆದಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆೆಸ್ ಸರ್ಕಾರ ರಚನೆಯಾಗಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಿಯಾಗಿ ನವೆಂಬರ್ಗೆ ಎರಡೂವರೆ ವರ್ಷವಾಗುತ್ತದೆ. ಈ ಹಿನ್ನೆೆಲೆಯಲ್ಲಿ ಅಧಿಕಾರ ಹಸ್ತಾಾಂತರದ ಕೂಗು ಕೇಳುತ್ತಿಿರುವುದರ ಜೊತೆಗೆ ಸಂಪುಟದಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗುವ ಸೂಚನೆಗಳು ಕಂಡುಬರುತ್ತಿಿವೆ. ಈ ಹಿನ್ನೆೆಲೆಯಲ್ಲಿ ಸಿಎಂ ನಿವಾಸ ಕಾವೇರಿಯಲ್ಲಿ ಸಚಿವರಿಗೆ ಔತಣ ಕೂಟ ಕರೆಯಲಾಗಿದೆ.
ಈ ಮಧ್ಯೆೆ ಸಂಪುಟದಿಂದ 15 ಮಂದಿ ಸಚಿವರಿಗೆ ಕೊಕ್ ನೀಡಿ ಅವರನ್ನು ಪಕ್ಷದ ಚಟುವಟಿಕೆಗಳಿಗೆ ನಿಯೋಜಿಸಲಾಗುತ್ತದೆ. ಅಷ್ಟೇ ಸಂಖ್ಯೆೆಯಲ್ಲಿ ಈಗ ಹಿರಿಯ ಶಾಸಕರಾದವರಿಗೆ ಸಂಪುಟದಲ್ಲಿ ಸ್ಥಾಾನ ನೀಡಲಾಗುತ್ತಿಿದೆ ಎಂಬ ಚರ್ಚೆಗಳು ಕೇಳಿಬರುತ್ತಿಿವೆ. ನವೆಂಬರ್ 14ರವೇಳೆಗೆ ಬಿಹಾರ ಚುನಾವಣೆ ಪೂರ್ಣಗೊಳ್ಳಲಿದ್ದು, ಅದಾದ ತಕ್ಷಣವೇ ರಾಜ್ಯದ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿಿವೆ.
ಔತಣಕೂಟಕ್ಕೆೆ ಸಚಿವರ ಸಮರ್ಥನೆ
ಸಿದ್ದರಾಮಯ್ಯ ಅವರು ತಮ್ಮ ಸಂಪುಟದ ಸಚಿವರಿಗೆ ಆಯೋಜಿಸಿರುವ ಔತಣಕೂಟವನ್ನು ಉಪ ಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರು ಸಮರ್ಥಿಸಿಕೊಂಡಿದ್ದಾರೆ. ಆದರೆ ಸಚಿವ ಸಂಪುಟ ವಿಸ್ತರಣೆ ಬಗ್ಗೆೆ ಪ್ರತಿಕ್ರಿಿಯೆ ನೀಡಲು ನಿರಾಕರಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ಈ ಬಗ್ಗೆೆ ಪ್ರತಿಕ್ರಿಿಯಿಸಿ, ಊಟ ಮಾಡುವುದರಲ್ಲಿ ತಪ್ಪೇನಿದೆ. ಆ ವೇಳೆ ಚರ್ಚೆ ನಡೆಸುವುದು ಅಪರಾಧವೇನಲ್ಲ ಎಂದಿದ್ದಾರೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮುಖ್ಯಮಂತ್ರಿಿ ಅವರು, ಸಾಮಾನ್ಯವಾಗಿ ಸಚಿವರನ್ನು ಪದೇ ಪದೆ ಊಟಕ್ಕೆೆ ಕರೆಯುತ್ತಾಾರೆ. ಶಾಸಕರನ್ನೂ ಔತಣ ಕೂಟಕ್ಕೆೆ ಕೆಲವು ಬಾರಿ ಆಹ್ವಾಾನಿಸಿರುವ ಉದಾಹರಣೆಗಳಿವೆ. ಸಚಿವರ ಜೊತೆ ಎರಡು ಮೂರು ಬಾರಿ ಔತಣಕೂಟಗಳಾಗಿವೆ ಎಂದರು.ಎಲ್ಲರಿಗೂ ಊಟ ಹಾಕಿಯೇ ವಿಶ್ವಾಾಸಕ್ಕೆೆ ತೆಗೆದುಕೊಳ್ಳಬೇಕೆಂದೇನಿಲ್ಲ, ಮುಖ್ಯಮಂತ್ರಿಿಯವರ ಮೇಲೆ ಎಲ್ಲರಿಗೂ ವಿಶ್ವಾಾಸ ಇದ್ದೇ ಇದೆ ಎಂದು ಹೇಳಿದ್ದಾರೆ.
ಸಂಪುಟ ಸಭೆಯ ಬಳಿಕ ಮಾತನಾಡಿದ ಎಚ್.ಕೆ. ಪಾಟೀಲ್, ಸಿಎಂ ಔತಣ ಕೂಟದ ಬಗ್ಗೆೆ ಇನ್ನೂ ಆಹ್ವಾಾನ ಬಂದಿಲ್ಲ. ಬಂದರೂ ಬರಬಹುದು. ಅದರಲ್ಲೇನೂ ವಿಶೇಷವಿಲ್ಲ ಎಂದರು. ಸಚಿವರಾದ ಶಿವರಾಜ ತಂಗಡಗಿ, ರಾಮಲಿಂಗಾರೆಡ್ಡಿಿ ಮತ್ತಿಿತರರು ಡಿನ್ನರ್ ಮೀಟಿಂಗ್ ಅನ್ನು ಸಮರ್ಥಿಸಿಕೊಂಡಿದ್ದರೆ, ಸಚಿವ ಚೆಲುವರಾಯಸ್ವಾಾಮಿ ತಮಗೆ ಮಾಹಿತಿ ಇಲ್ಲ ಎಂದಿದ್ದಾರೆ.
ಇತ್ತೀಚೆಗೆ ಸಚಿವರ ನಡುವೆ ಹೊಂದಾಣಿಕೆಯ ಕೊರತೆ ಕಂಡು ಬಂದಿದ್ದು, ಸಚಿವರಾದ ಎಂ.ಬಿ.ಪಾಟೀಲ್, ಈಶ್ವರ್ಖಂಡ್ರೆೆ ಪರಸ್ಪರ ಜಟಾಪಟಿಗೆ ಇಳಿದಿದ್ದಾರೆ. ಜೊತೆಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವಿಚಾರವಾಗಿಯೂ ಸಾಕಷ್ಟು ಆಕ್ಷೇಪಗಳು ಒಳಗೊಳಗೆ ಕುದಿಯುತ್ತಿಿವೆ. ಈ ಹಿನ್ನೆೆಲೆಯಲ್ಲಿ ಸಚಿವರ ನಡುವೆ ಹೊಂದಾಣಿಕೆ ತರುವ ನಿಟ್ಟಿಿನಲ್ಲಿ ಈ ಔತಣ ಕೂಟ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತಿಿದೆ.
ಜೊತೆಗೆ ಸಚಿವ ಸಂಪುಟ ವಿಸ್ತರಣೆಯ ಬಗ್ಗೆೆಯೂ ಇದೇ ವೇಳೆ ಚರ್ಚೆಯಾಗಲಿವೆ ಎಂದು ತಿಳಿದು ಬಂದಿದೆ. ಸಂಪುಟದಿಂದ ಸುಮಾರು 15 ಸಚಿವರಿಗೆ ಕೊಕ್ ನೀಡಬಹುದಾದ ಪ್ರಸಂಗ ಬರುವುದರಿಂದ ಸಂಪುಟದಿಂದ ನಿರ್ಗಮಿಸುವ ಸಚಿವರ ಮನವೊಲಿಸಲು ಸಭೆ ಮುಖ್ಯಮಂತ್ರಿಿ ಔತಣ ಕೂಟ ಆಯೋಜಿಸಿದ್ದಾರೆ ಎಂದು ಹೇಳಲಾಗುತ್ತಿಿದೆ.

