ಸುದ್ದಿಮೂಲ ವಾರ್ತೆ ಸಿಂಧನೂರು, ಅ.09:
2025-26 ನೇ ಸಾಲಿನಲ್ಲಿ ತುಂಗಭದ್ರಾಾ ಎಡದಂಡೆ ಮುಖ್ಯ ಕಾಲುವೆಯ ಕಿ.ಮೀ 29 ರಲ್ಲಿ ಬರುವ ಪಾಪಯ್ಯ ಸುರಂಗ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗುತ್ತಿಿದ್ದು, ಸುರಂಗ ಅಗಲೀಕರಣ ಮಾಡಲು ಜಲಸಂಪನ್ಮೂಲ ಇಲಾಖೆಗೆ ಶಿಾರಸ್ಸು ಮಾಡುವಂತೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಜಿಲ್ಲಾಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರಿಗೆ ಪತ್ರ ಬರೆದಿದ್ದಾಾರೆ.
ತುಂಗಭದ್ರಾಾ ಎಡದಂಡೆ ನಾಲೆಯು 225 ಕಿ.ಮೀ ಉದ್ದವಿದ್ದು, 6.31 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶವಿದೆ. ಮುಖ್ಯ ಕಾಲುವೆಯಲ್ಲಿ 4200 ಕ್ಯೂಸೆಕ್ ನೀರು ಹರಿದು ಬಿಡಲಾಗುತ್ತಿಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಮೇಲ್ಭಾಾಗದಲ್ಲಿ ರೈತರು ಶೇ.90 ರಷ್ಟು ನೀರು ಬಳಕೆ ಮಾಡಿಕೊಳ್ಳುತ್ತಿಿರುವದರಿಂದ ಸಿಂಧನೂರು, ಮಾನ್ವಿಿ, ಸಿರಿವಾರ ಹಾಗೂ ರಾಯಚೂರು ಕೆಳಭಾಗದ ರೈತರಿಗೆ ಸಮರ್ಪಕ ನೀರು ತಲುಪುತ್ತಿಿಲ್ಲ.
ಜಲಾಶಯದಿಂದ 4200 ಕ್ಯೂಸೆಕ್ ನೀರು ಬಿಟ್ಟರೂ ಪಾಪಯ್ಯ ಸುರಂಗದಲ್ಲಿ ಪ್ರಸ್ತುತ 3600 ಕ್ಯೂಸೆಕ್ ನೀರು ಮಾತ್ರ ಹರಿಯುವ ಸಾಮರ್ಥ್ಯವಿದೆ. ಸುರಂಗದ ಕೆಳಭಾಗದಲ್ಲಿ 5 ಲಕ್ಷದವರೆಗೆ ಭೂಮಿಯಿದ್ದು, ನೀರಿನ ಕೊರತೆಯಾಗುತ್ತಿಿದೆ. ಇದರಿಂದಾಗಿ ಕೆಳ ಭಾಗದ ರೈತರು ರಾಷ್ಟ್ರೀಯ, ರಾಜ್ಯ ಹೆದ್ದಾಾರಿ ಬಂದ್ ಮಾಡುವ ಮೂಲಕ ಹೋರಾಟ ಮಾಡುತ್ತಾಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವ ಜೊತೆಗೆ ಕಾನೂನು ಸುವ್ಯವಸ್ಥೆೆ ಹದಗೆಡುತ್ತದೆ ಎಂದಿದ್ದಾಾರೆ.
ಎಐಬಿಪಿ ಯೋಜನೆಯಡಿಯಲ್ಲಿ 2026 ರ ಜನೆವರಿಯಲ್ಲಿ ಪಾಪಯ್ಯ ಸುರಂಗ ಅಭಿವೃದ್ದಿ ಕೈಗೊಳ್ಳಲು ಈಗಾಗಲೇ ರೂಪುರೇಷೆ ಸಿದ್ದವಾಗಿದೆ. ಜಲಾಶಯದ ಕ್ರಸ್ಟ್ಗಳ ಹೊಸದಾಗಿ ಅಳವಡಿಸುತ್ತಿಿರುದವರಿಂದ ಈ ಬಾರಿ ಒಂದೇ ಬೆಳೆಗೆ ನೀರು ಕೊಡಲು ನಿರ್ಧರಿಸಲಾಗಿದೆ. ಈ ಅವಧಿಯಲ್ಲಿ ಪಾಪಯ್ಯ ಸುರಂಗ ಅಭಿವೃದ್ದಿ ಮಾಡುವ ಜೊತೆಗೆ ಸುರಂಗ ಅಗಲೀಕರಣ ಮಾಡುವದು ಅಗತ್ಯವಿದೆ. ಅಭಿವೃದ್ದಿ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸುರಂಗ ಅಗಲೀಕರಣ ಮಾಡುವ ಮೂಲಕ ಕೆಳಭಾಗದ ರೈತರಿಗೆ ಸಮರ್ಪಕ ನೀರು ಒದಗಿಸಬಹುದು. ಸುರಂಗ ಅಗಲೀಕರಣ ಮಾಡುವ ಆಯ್ಕೆೆ ಮಾಡಿಕೊಳ್ಳಲು ಜಲಸಂಪನ್ಮೂಲ ಇಲಾಖೆಗೆ ಶಿಾರಸ್ಸು ಮಾಡುವಂತೆ ಸಚಿವರಿಗೆ ಶಾಸಕ ಬಾದರ್ಲಿ ಕೋರಿದ್ದಾಾರೆ.
ಶಾಸಕ ಹಂಪನಗೌಡ ಬಾದರ್ಲಿ ಪತ್ರಕ್ಕೆೆ ಸ್ಪಂದಿಸಿರುವ ಸಚಿವ ಶರಣಪ್ರಕಾಶ ಪಾಟೀಲ್, ಶಾಸಕರ ಕೋರಿಕೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗಳಿಗೆ ಶಿಾರಸ್ಸು ಮಾಡಿದ್ದಾಾರೆ.