ಸುದ್ದಿಮೂಲ ವಾರ್ತೆ ಬೆಂಗಳೂರು, ಅ.12:
ರಾಜ್ಯ ರಾಜಕಾರಣದಲ್ಲಿ ಅತ್ಯಂತ ಮಹತ್ವದ ವಿಚಾರಗಳ ಚರ್ಚೆಗೆ ನಾಳೆ ಮುಖ್ಯಮಂತ್ರಿಿ ಸಿದ್ದರಾಮಯ್ಯ ಸಚಿವರ ಸಭೆ ಕರೆದಿದ್ದು ಕುತೂಹಲ ಮೂಡಿಸಿದೆ.
ಕಳೆದ ಎರಡು ತಿಂಗಳಿಂದ ಅಧಿಕಾರ ಹಂಚಿಕೆ, ಸಂಪುಟ ಪುನಾರಚನೆ, ಆರ್ಥಿಕ ಶೈಕ್ಷಣಿಕ ಸಮೀಕ್ಷೆೆ, ಒಳ ಮೀಸಲಾತಿ ಗೊಂದಲ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ನಿಗಮ ಮಂಡಳಿಗಳಿಗೆ ನೇಮಕ ಕುರಿತಂತೆ ಸಾಕಷ್ಟು ವಿಷಯಗಳು ಕಾಂಗ್ರೆೆಸ್ನಲ್ಲಿ ಆಂತರೀಕ, ಬಹಿರಂಗವಾಗಿ ಚರ್ಚೆ ನಡೆದಿದೆ.
ಏತನ್ಮಧ್ಯೆೆ ನವೆಂಬರ್ನಲ್ಲಿ ಸಂಪುಟ ಪುನಾರಚಣೆ ಆಗುವುದು, ಅಧಿಕಾರ ಹಂಚಿಕೆಯಾಗುವುದು ಎಂಬ ಚರ್ಚೆ ತೀವ್ರಗೊಂಡಿದ್ದು ಈ ಬಗ್ಗೆೆ ಚರ್ಚಿಸಲು ನಾಳೆ ಸಿಎಂ ಸಿದ್ದರಾಮಯ್ಯ ಎಲ್ಲ ಸಚಿವರಿಗೆ ಔತಣಕೂಟ ಏರ್ಪಡಿಸಿದ್ದಾಾರೆ.
ಸಂಜೆ ನಡೆಯುವ ಈ ಸಚಿವರ ಔತಣಕೂಟಕ್ಕೆೆ ಕಡ್ಡಾಾಯವಾಗಿ ಭಾಗವಹಿಸುವಂತೆ ಮುಖ್ಯಮಂತ್ರಿಿ ಕಚೇರಿಯಿಂದಲೆ ಎಲ್ಲ ಸಚಿವರಿಗೆ ಕಟ್ಟು ನಿಟ್ಟಿಿನ ಸಂದೇಶ ನೀಡಿದ್ದು ಯಾರೂ ವಿದೇಶದಲ್ಲಿ ಅಥವಾ ರಾಜ್ಯದ ಇತರ ಕಡೆ ಇದ್ದರೂ ಈ ಔತಣಕೂಟಕ್ಕೆೆ ಆಗಮಿಸುವಂತೆ ಸಿದ್ದರಾಮಯ್ಯ ರ್ಮಾನು ಹೊರಡಿಸಿದ್ದಾಾರೆಂದು ಗೊತ್ತಾಾಗಿದೆ.
ಏತನ್ಮಧ್ಯೆೆ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಕ್ವಾಾಂಟಮ್ ಸಮಾವೇಶದಲ್ಲಿ ಭಾಗಿಯಾಗಲು ಕಳೆದ ರಾತ್ರಿಿ ಮುಖ್ಯಮಂತ್ರಿಿ ಅನುಮತಿ ಪಡೆದು ಸ್ವಿಿಟ್ಜರ್ಲ್ಯಾಾಂಡ್ಗೆ ತೆರಳಿದ್ದಾಾರೆ. ಉಳಿದಂತೆ ಅಮೇರಿಕಾದಲ್ಲಿರುವ ಎಂ.ಬಿ.ಪಾಟೀಲ ಹಾಗೂ ರಾಜ್ಯದ ಇತರೆಡೆ ಇರುವ ಜಮೀರ ಅಹ್ಮದ್ ಖಾನ ಅವರಿಗೂ ಸಹ ಸಿಎಂ ಕಚೇರಿಯಿಂದ ಸೂಚನೆ ನೀಡಿ ಈ ಔತಣಕೂಟಕ್ಕೆೆ ಕಡ್ಡಾಾಯವಾಗಿ ಹಾಜರಾಗುವಂತೆ ಸೂಚನೆ ನೀಡಿದ್ದಾಾರೆನ್ನಲಾಗಿದೆ.
ನವೆಂಬರ್ 20ಕ್ಕೆೆ ರಾಜ್ಯ ಸರ್ಕಾರ ಅಧಿಕಾರಕ್ಕೆೆ ಬಂದು ಎರಡುವರೇ ವರ್ಷ ಪೂರ್ಣಗೊಳ್ಳುವ ಹಿನ್ನೆೆಲೆಯಲ್ಲಿ ರಾಜ್ಯದ ಕೆಲ ಸಚಿವರ ಬದಲಾವಣೆ ಮಾಡಿ ಹೊಸಬರಿಗೆ ಅವಕಾಶ ನೀಡಬೇಕೆಂಬ ಚರ್ಚೆ ಮುನ್ನೆೆಲೆಗೆ ಬಂದ ಮಧ್ಯೆೆಯೇ ಮುಖ್ಯಮಂತ್ರಿಿಗಳ ಔತಣಕೂಟ ಚರ್ಚೆಗೆ ಗ್ರಾಾಸವಾಗಿದೆ.
ಈ ಮಧ್ಯೆೆ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯುವುದರಿಂದ ರಾಜ್ಯದ ಕೆಲ ಸಚಿವರನ್ನೂ ಆ ರಾಜ್ಯಕ್ಕೆೆ ಉಸ್ತುವಾರಿಗಳನ್ನಾಾಗಿ ನೇಮಕ ಮಾಡುವ ಕುರಿತು ಎಐಸಿಸಿ ಸೂಚನೆ ನೀಡಿದ್ದು ಹೀಗಾಗಿ, ಕೆಲ ಅನುಭವಿ ಮತ್ತು ಪ್ರಬಲ ಸಚಿವರನ್ನು ಅಲ್ಲಿಗೆ ಉಸ್ತುವಾರಿಗಳಾಗಿ ನೇಮಿಸುವ ಚರ್ಚೆ ಸಹ ನಾಳಿನ ಸಭೆಯಲ್ಲಿ ನಡೆಯಲಿದೆ ಎಂದು ಗೊತ್ತಾಾಗಿದೆ.
ಈ ಎಲ್ಲ ಬೆಳವಣಿಗೆ ಮಧ್ಯೆೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆೆ ಇನ್ನೊೊಂದು ವಾರದಲ್ಲಿ ಪೂರ್ಣಗೊಳ್ಳಲಿದ್ದು ಅದರ ಸಾಧಕ ಬಾಧಕಗಳ ಕುರಿತು ಸಹ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿಿದೆ.
ಹೀಗಾಗಿ, ಮುಖ್ಯಮಂತ್ರಿಿಗಳು ಕರೆದ ಔತಣಕೂಟ ಹಲವು ಚರ್ಚೆಗೆ ವೇದಿಕೆ ಆಗಲಿದೆ ಎಂಬುದಂತೂ ಅಲ್ಲಗಳೆಯುವಂತಿಲ್ಲ.