ಸುದ್ದಿಮೂಲ ವಾರ್ತೆ ಕೊಪ್ಪಳ, ಅ.12:
ನ್ಯಾಾಯಾಲಯದಲ್ಲಿ ವಾದ ಮಾಡಲು ವಕೀಲರು ಬೇಕು. ಕಾನೂನು, ಸೆಕ್ಷನ್ಗಳನ್ನು ಓದಿಕೊಂಡಿರುವವರು ಬೇಕು. ಈ ಜ್ಞಾಾನ ಹೊಂದಿದ್ದರೆ ಸಾರ್ವಜನಿಕರು ವಾದ ಮಾಡಬಹುದು. ಈ ರೀತಿ ವಾದ ಮಾಡಿ ಪರಿಹಾರವನ್ನು ಟೆಕ್ಕಿಿ ಒಬ್ಬರು ಪಡೆದಿದ್ದಾಾರೆ.
ನ್ಯಾಾಯಾಧೀಶರ ಮುಂದೆ ತಮ್ಮ ವಾದವನ್ನು ಮಾಡಲು ಕಾನೂನು ಪರಿಣಿತಿಯನ್ನು ಹೊಂದಿರಬೇಕು. ಕಾನೂನು ಮಾಹಿತಿ ಇದ್ದರೆ ಕೋರ್ಟಿನಲ್ಲಿ ವಾದ ಮಾಡಲು ವಕೀಲರೇ ಬೇಕೆಂದು ಇಲ್ಲ. ಆದರೆ ಸಾಮಾನ್ಯವಾಗಿ ಕಾನೂನು ಗೊತ್ತಿಿಲ್ಲದೆ ನ್ಯಾಾಯಾಲಯದಲ್ಲಿ ವಕೀಲರ ಸಹಾಯ ಪಡೆಯುವುದು ವಾಡಿಕೆ, ಆದರೆ ಕೊಪ್ಪಳ ತಾಲೂಕಿನ ಕಂಪಸಾಗರದ ಟೆಕ್ಕಿಿಯೊಬ್ಬರು ಗ್ರಾಾಹಕರ ನ್ಯಾಾಯಾಲಯದಲ್ಲಿ ತಮ್ಮ ಕೇಸ್ ನ ಬಗ್ಗೆೆ ಸಮರ್ಥವಾಗಿ ವಾದ ಮಾಡಿ ಡ್ರೋೋನ್ ಕಂಪನಿಯಿಂದ ಪರಿಹಾರ ಪಡೆದುಕೊಂಡಿದ್ದಾಾರೆ.
ಕೊಪ್ಪಳ ತಾಲೂಕಿನ ಕಂಪಸಾಗರದ ಹರೀಶ ಜೈನ್ ಎಂಬುವವರು ಸ್ಟಾವೇರ್ ಇಂಜನೀಯರ್, ಕ್ರಾಾಪ್ ಸೆಕ್ಯೂರ್ ಅಗ್ರೋೋ ಟೆಕ್ ಎಂಬ ಕಂಪನಿಯನ್ನು ಹುಲಿಗಿಯಲ್ಲಿ ಆರಂಭಿಸಿದ್ದಾಾರೆ. ಅವರು ರೋಬ್ಸೋೋ ಇನ್ ರೋಬೊಟಿಕ್ ಎಂಬ ಕಂಪನಿಯಿಂದ ಬೆಳೆಗಳಿಗೆ ಔಷಧಿ ಸಿಂಪಡಣೆ ಮಾಡುವ ಡ್ರೋೋನ್ನ್ನು ಮೂರು ವರ್ಷಗಳ ಹಿಂದೆ ಖರೀದಿಸಿದ್ದರು. ಈ ಡ್ರೋೋನ್ ಬಳಕೆ ಮಾಡುವಾಗ ತಾಂತ್ರಿಿಕ ತೊಂದರೆಯಾಗಿ 1.5 ಕಿಮೀ ದೂರದಲ್ಲಿ ಹೋಗಿ ಬಿದ್ದಿತ್ತು. ಈ ಕುರಿತು ಡ್ರೋೋನ್ ಕಂಪನಿಗೆ ಸಂಪರ್ಕಿಸಿ ಪರ್ಯಾಯ ಡ್ರೋೋನ್ ನೀಡಲು ಇಲ್ಲವೆ ಪರಿಹಾರ ನೀಡುವಂತೆ ಮನವಿ ಮಾಡಿಕೊಂಡರು. ಆದರೆ ರೋಬ್ಸೋೋ ಇನ್ ರೋಬೊಟಿಕ್ ಕಂಪನಿಯವರಿಂದ ಸರಿಯಾದ ಸ್ಪಂದನೆ ಸಿಗಲಿಲ್ಲ. ಇದೇ ಕಾರಣಕ್ಕೆೆ ಕೊಪ್ಪಳದ ಗ್ರಾಾಹಕರ ವ್ಯಾಾಜ್ಯ ಪರಿಹಾರ ವೇದಿಕೆಯಲ್ಲಿ ಪ್ರಕರಣ ದಾಖಲಿಸಿದರು. ಪ್ರಕರಣದ ವಿಚಾರಣೆಯು 21 ಬಾರಿ ನಡೆಯಿತು. ನ್ಯಾಾಯಲಯದಲ್ಲಿ ತಮಗೆ ಆಗಿರುವ ಹಾನಿಯ ಬಗ್ಗೆೆ ಕಾನೂನಾತ್ಮಕವಾಗಿ ಮಾತನಾಡಿದ್ದಾಾರೆ. ಇವರ ಸಮರ್ಥ ವಾದದಿಂದಾಗಿ ಗ್ರಾಾಹಕರ ನ್ಯಾಾಯಾಲಯವು ಹರೀಶ ಜೈನ್ ರಿಗೆ 3.75 ಲಕ್ಷ ರೂಪಾಯಿ ಹಾನಿ. 15 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಆದೇಶ ಹೊರಡಿಸಿದ್ದಾಾರೆ. ತಮ್ಮ ಕೇಸ್ಗೆ ಬೇಕಾಗುವಷ್ಟು ಕಾನೂನು ಜ್ಞಾಾನವನ್ನು ಪುಸ್ತಕ ಹಾಗು ಇಂಟರ್ನೆಟ್ ಮೂಲಕ ಪಡೆದು ವಾದ ಮಂಡಿಸಿದೆ ಎನ್ನುತ್ತಾಾರೆ ಹರೀಶ.
ಜ್ಞಾಾನ ಪಡೆಯಲು ಆಸಕ್ತಿಿಬೇಕು. ಇಂತಹ ಆಸಕ್ತಿಿ ಇದ್ದರೆ ಎಂತಹ ಪ್ರಕರಣವಾದರೂ ಗೆಲ್ಲಬಹುದು ಎಂಬುವುದಕ್ಕೆೆ ಹರೀಶ ಜೈನ್ ಸಾಕ್ಷಿಯಾಗಿದ್ದಾಾರೆ.
ನ್ಯಾಾಯಾಲಯದಲ್ಲಿ ತಾನೇ ವಾದ ಮಾಡಿ ಪರಿಹಾರ ಪಡೆದ ಟೆಕ್ಕಿಿ
