ಸುದ್ದಿಮೂಲ ವಾರ್ತೆ ಕಾಬೂಲ್ (ಅ್ಘಾನಿಸ್ತಾಾನ), ಅ.12:
ಕಾಬೂಲ್ ಮೇಲೆ ಪಾಕಿಸ್ತಾಾನ ನಡೆಸಿದ ವೈಮಾನಿಕ ದಾಳಿಗೆ ಪ್ರತಿಯಾಗಿ ಅ್ಘಾನಿಸ್ತಾಾನದ ತಾಲಿಬಾನ್ ಪಡೆಗಳು ಶನಿವಾರ ರಾತ್ರಿಿಯಿಡೀ ಗಡಿಯಲ್ಲಿ ಪಾಕಿಸ್ತಾಾನಿ ಸೈನಿಕರ ವಿರುದ್ಧ ಸಶಸ ದಾಳಿ ನಡೆಸಿದೆ. ಕಾರ್ಯಾಚರಣೆಯಲ್ಲಿ ತನ್ನ ಪಡೆಗಳು 58 ಪಾಕಿಸ್ತಾಾನಿ ಸೈನಿಕರನ್ನು ಹತ್ಯೆೆ ಮಾಡಿವೆ ಎಂದು ತಾಲಿಬಾನ್ ನೇತೃತ್ವದ ಅ್ಘಾನ್ ಸರ್ಕಾರ ಹೇಳಿದೆ.
ತಾಲಿಬಾನ್ ಸರ್ಕಾರದ ಮುಖ್ಯ ವಕ್ತಾಾರ ಜಬಿವುಲ್ಲಾ ಮುಜಾಹಿದ್ ಭಾನುವಾರ ಕಾಬೂಲ್ನಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಅ್ಘಾನ್ ಪಡೆಗಳು 25 ಪಾಕಿಸ್ತಾಾನಿ ಸೇನಾ ನೆಲೆ ವಶಪಡಿಸಿಕೊಂಡಿವೆ. 58 ಸೈನಿಕರು ಸಾವನ್ನಪ್ಪಿಿದ್ದಾರೆ ಮತ್ತು 30 ಜನರು ಗಾಯಗೊಂಡಿದ್ದಾರೆ. ಅ್ಘಾನಿಸ್ತಾಾನದ ಎಲ್ಲಾ ಅಧಿಕೃತ ಗಡಿಗಳು ಮತ್ತು ವಾಸ್ತವಿಕ ರೇಖೆಗಳಲ್ಲಿನ ಪರಿಸ್ಥಿಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಮತ್ತು ಕಾನೂನುಬಾಹಿರ ಚಟುವಟಿಕೆ ಹೆಚ್ಚಾಾಗಿ ತಡೆಯಲಾಗಿದೆ ಎಂದು ತಿಳಿಸಿದರು.
ಪಾಕಿಸ್ತಾಾನವು ಕಾಬೂಲ್ ಮತ್ತು ದೇಶದ ಪೂರ್ವದಲ್ಲಿರುವ ಮಾರುಕಟ್ಟೆೆಯ ಮೇಲೆ ಬಾಂಬ್ ದಾಳಿ ನಡೆಸಿದೆ ಎಂದು ತಾಲಿಬಾನ್ ಆರೋಪಿಸಿತ್ತು. ಇದಾದ ನಂತರ, ಶನಿವಾರ ತಡರಾತ್ರಿಿ ಅ್ಘಾನ್ ಭದ್ರತಾ ಪಡೆಗಳು ಪಾಕಿಸ್ತಾಾನದ ಗಡಿ ನೆಲೆಗಳ ಮೇಲೆ ದಾಳಿ ನಡೆಸಿದ್ದವು.
ಗುರುವಾರ, ಅ್ಘಾನ್ ರಾಜಧಾನಿ ಕಾಬೂಲ್ ಹಾಗೂ ದೇಶದ ಆಗ್ನೇಯ ಭಾಗದಲ್ಲಿ ಎರಡು ಸ್ಫೋೋಟಗಳು ಸಂಭವಿಸಿದ್ದವು. ಮರುದಿನ, ತಾಲಿಬಾನ್ ನಡೆಸುತ್ತಿಿರುವ ರಕ್ಷಣಾ ಸಚಿವಾಲಯವು ದಾಳಿಗಳಿಗೆ ಪಾಕಿಸ್ತಾಾನವನ್ನು ದೂಷಿಸಿದ್ದು, ತನ್ನ ನೆರೆಹೊರೆಯವರು ತನ್ನ ಸಾರ್ವಭೌಮತ್ವವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿತ್ತು. ಆದರೆ ಈ ದಾಳಿಯ ಜವಾಬ್ದಾಾರಿಯನ್ನು ಪಾಕಿಸ್ತಾಾನ ಹೊತ್ತುಕೊಂಡಿಲ್ಲ.
ಕಾಬೂಲ್ ಮೇಲೆ ಪಾಕಿಸ್ತಾಾನಿ ಸೇನೆ ನಡೆಸಿದ ವಾಯು ದಾಳಿಗಳಿಗೆ ಪ್ರತೀಕಾರವಾಗಿ, ತಾಲಿಬಾನ್ ಪಡೆಗಳು ಗಡಿಯುದ್ದಕ್ಕೂ ವಿವಿಧ ಪ್ರದೇಶಗಳಲ್ಲಿ ಪಾಕಿಸ್ತಾಾನಿ ಭದ್ರತಾ ಪಡೆಗಳ ವಿರುದ್ಧ ಭಾರಿ ಸಶಸ ದಾಳಿಯಲ್ಲಿ ತೊಡಗಿವೆ ಎಂದು ಅ್ಘಾನ್ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
ತಾಲಿಬಾನ್ ರಕ್ಷಣಾ ಸಚಿವಾಲಯದ ವಕ್ತಾಾರ ಎನಾಯತ್ ಖೋವಾರಾಜ್ಮ್ ಮಾಧ್ಯಮಗಳ ಜೊತೆ ಮಾತನಾಡಿ, ಯಶಸ್ವಿಿ ಕಾರ್ಯಾಚರಣೆಗಳು ಮಧ್ಯರಾತ್ರಿಿ ಕೊನೆಗೊಂಡಿವೆ. ಅ್ಘಾನಿಸ್ತಾಾನದ ಭೂಪ್ರದೇಶವನ್ನು ಮತ್ತೊೊಮ್ಮೆೆ ಎದುರಾಳಿ ಪಾಕಿಸ್ತಾಾನ ಉಲ್ಲಂಘಿಸಿದರೆ, ನಮ್ಮ ಸಶಸ ಪಡೆಗಳು ನಮ್ಮ ಪ್ರದೇಶ ರಕ್ಷಿಸಲು ಸಿದ್ಧವಾಗಿವೆ ಮತ್ತು ದೃಢವಾಗಿ ಪ್ರತಿಕ್ರಿಿಯೆ ನೀಡಲಿವೆ ಎಂದು ಹೇಳಿದ್ದಾರೆ.
ಗುರುವಾರದ ದಾಳಿಯ ಹಿಂದೆ ಇಸ್ಲಾಾಮಾಬಾದ್ ಕೈವಾಡವಿದೆ ಎಂದು ದೃಢಪಡಿಸಲಿಲ್ಲ. ಆದರೆ ಕಾಬೂಲ್ಗೆೆ ತನ್ನ ನೆಲದಲ್ಲಿ ಪಾಕಿಸ್ತಾಾನಿ ತಾಲಿಬಾನ್ಗೆ (ಟಿಟಿಪಿ) ಆಶ್ರಯ ನೀಡುವುದನ್ನು ನಿಲ್ಲಿಸುವಂತೆ ಕರೆ ನೀಡಿದೆ.
ಅ್ಘಾನಿಸ್ತಾಾನದಲ್ಲಿ ಯುದ್ಧ ತರಬೇತಿ ಪಡೆದ ಮತ್ತು ಅ್ಘಾನ್ ತಾಲಿಬಾನ್ನಂತೆಯೇ ಅದೇ ಸಿದ್ಧಾಾಂತವನ್ನು ಹಂಚಿಕೊಳ್ಳುವುದಾಗಿ ಹೇಳಿಕೊಳ್ಳುವ ಟಿಟಿಪಿ, 2021 ರಿಂದ ತನ್ನ ನೂರಾರು ಸೈನಿಕರನ್ನು ಕೊಂದಿದೆ ಎಂದು ಇಸ್ಲಾಾಮಾಬಾದ್ ಆರೋಪಿಸಿದೆ. ಪಾಕಿಸ್ತಾಾನ ಮತ್ತು ಅ್ಘಾನಿಸ್ತಾಾನದ ನಡುವಿನ ಗಡಿಯಲ್ಲಿರುವ ಕುನಾರ್, ನಂಗಹಾರರ್, ಪಕ್ತಿಿಯಾ, ಖೋಸ್ಟ್ ಮತ್ತು ಹೆಲ್ಮಂಡ್ ಪ್ರಾಾಂತ್ಯಗಳ ತಾಲಿಬಾನ್ ಅಧಿಕಾರಿಗಳು ಘರ್ಷಣೆಗಳು ನಡೆಯುತ್ತಿಿವೆ ಎಂದು ದೃಢಪಡಿಸಿದರು.
ಶನಿವಾರ ಸಂಜೆ, ತಾಲಿಬಾನ್ ಪಡೆಗಳು ಶಸಾಸಗಳನ್ನು ಬಳಸಲು ಪ್ರಾಾರಂಭಿಸಿದವು. ನಾವು ಮೊದಲು ಗಡಿಯುದ್ದಕ್ಕೂ ನಾಲ್ಕು ಹಂತಗಳಲ್ಲಿ ಲಘು ಮತ್ತು ನಂತರ ಭಾರಿ ಫಿರಂಗಿಗಳನ್ನು ಹಾರಿಸಿದೆವು ಎಂದು ಅ್ಘಾನಿಸ್ತಾಾನದ ಗಡಿಯಲ್ಲಿರುವ ಪಾಕಿಸ್ತಾಾನದ ಖೈಬರ್-ಪಖ್ತುನ್ಖ್ವಾಾ ಪ್ರಾಾಂತ್ಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಪಾಕಿಸ್ತಾಾನ ಪಡೆಗಳು ಭಾರಿ ಗುಂಡಿನ ದಾಳಿ ನಡೆಸಿ, ಸ್ಫೋೋಟಕಗಳನ್ನು ಹೊತ್ತೊೊಯ್ಯುತ್ತಿಿದ್ದ ಮೂರು ಅ್ಘಾನ್ ಕ್ವಾಾಡ್ಕಾಾಪ್ಟರ್ಗಳನ್ನು ಹೊಡೆದುರುಳಿಸಿದವು. ತೀವ್ರ ಹೋರಾಟ ಮುಂದುವರೆದಿದೆ. ಆದರೆ ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದರು.
ಇರಾನಿನ ವಿದೇಶಾಂಗ ಸಚಿವ ಅಬ್ಬಾಾಸ್ ಅರಘ್ಚಿಿ ತಮ್ಮ ದೇಶದ ನೆರೆಹೊರೆಯವರಿಗೆ ಸಂಯಮವನ್ನು ಕಾಯ್ದುಕೊಳ್ಳಲು ಕರೆ ನೀಡಿದ್ದಾರೆ.