ಸುದ್ದಿಮೂಲವಾರ್ತೆ
ಲಿಂಗಸಗೂರು ಅ,12:
ಬೀದರ ಶ್ರೀರಂಗ ಪಟ್ಟಣ ರಾಷ್ಟ್ರೀಯ ಹೆದ್ದಾಾರಿ 150(ಎ) ರಸ್ತೆೆಯಲ್ಲಿ ಸಂಚರಿಸುತ್ತಿಿದ್ದ ದೇವದುರ್ಗ ಶಾಸಕಿ ಕರಿಯಮ್ಮ ಅವರ ಕಾರು ಅಪಘಾತವಾಗಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ರವಿವಾರ ಬೆಳಿಗ್ಗೆೆ ತಾಲೂಕಿನ ಗೋಲಪಲ್ಲಿ ಬಳಿ ನಡೆದಿದೆ.
ದೇವದರ್ಗುದಿಂದ ಹುಬ್ಬಳ್ಳಿಿಗೆ ಮದುವೆ ಕಾರ್ಯಕ್ರಮಕ್ಕಾಾಗಿ ತೆರುಳುತ್ತಿಿದ್ದ ಶಾಸಕರ ಕಾರಿಗೆ ನಾಯಿಯೊಂದು ಅಡ್ಡ ಬಂದಿದ್ದರಿಂದ ನಾಯಿಯ ಪ್ರಾಾಣ ಉಳಿಸಲು ಹೋದ ಚಾಲಕ ಬ್ರೇೇಕ್ ಹಾಕಿದ್ದರ ಪರಿಣಾಮವಾಗಿ ಈ ಘಟನೆ ನಡೆದಿದೆ.
ಶಾಸಕ ಕರಿಯಮ್ಮ ತೆರಳುತ್ತಿಿದ್ದ ಕಾರಿನ ಹಿಂಭಾಗ ಶಾಸಕರ ಮಗಳ ಕಾರು ಬರುತ್ತಿಿದ್ದು ಶಾಸಕರ ಕಾರು ನಾಯಿ ಉಳಿಸಲು ಬ್ರೇೇಕ್ ಹಾಕಿದಾಗ ಶಾಸಕಿಯ ಕಾರಿಗೆ ಅವರ ಮಗಳು ಕುಳಿತಿದ್ದ ಕಾರು ಗುದ್ದಿದ ಪರಿಣಾಮ ಶಾಸಕರ ತಲೆಗೆ ಹಾಗೂ ಎಡ ಭುಜಕ್ಕೆೆ ಒಳಪೆಟ್ಟುಗಳಾಗಿವೆ. ತಕ್ಷಣವೇ ಅವರನ್ನು ಲಿಂಗಸುಗೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆೆಗೆ ಕರೆತಂದು ಪ್ರಾಾಥಮಿಕ ಹಂತದ ಚಿಕಿತ್ಸೆೆ ನೀಡಿ ಸ್ಕಾಾನಿಂಗ್ ಮಾಡಲಾಗಿದೆ. ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದು ಹೆಚ್ಚಿಿನ ಚಿಕಿತ್ಸೆೆಗಾಗಿ ಅವರು ಬೆಂಗಳೂರಿಗೆ ತೆರಳಿದರು.
ಲಿಂಗಸಗೂರು ಆಸ್ಪತ್ರೆೆಗೆ ದಾಖಲಾದ ವಿಷಯ ತಿಳಿದ ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ್ ಆಸ್ಪತ್ರೆೆಗೆ ಭೇಟಿ ನೀಡಿ ಶಾಸಕಿ ಕರಿಯಮ್ಮ ಅವರ ಯೋಗಕ್ಷೇಮ ವಿಚಾರಿಸಿದರು. ಈ ವೇಳೆ ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್, ಅಯ್ಯಪ್ಪ ಮಾಳೂರು ವಕೀಲರು, ಆಸ್ಪತ್ರೆೆ ಮುಖ್ಯ ವೈದ್ಯಾಾಧಿಕಾರಿ ಡಾ, ರುದ್ರಗೌಡ ಪಾಟೀಲ್ ಇದ್ದರು.
ಗೊಲಪಲ್ಲಿ ಬಳಿ ದೇವದುರ್ಗ ಶಾಸಕಿ ಕಾರು ಅಘಾತ : ಲಿಂಗಸಗೂರು ಆಸ್ಪತ್ರೆೆಯಲ್ಲಿ ಚಿಕಿತ್ಸೆೆ
