ಸುದ್ದಿಮೂಲ ವಾರ್ತೆ ಬೀದರ್, ಅ.14:
ಆದಾಯಕ್ಕಿಿಂತ ಹೆಚ್ಚು ಆಸ್ತಿಿ ಗಳಿಕೆ ಆರೋಪ ಹಿನ್ನೆೆಲೆಯಲ್ಲಿ ಕೃಷಿ ಇಲಾಖೆಯ ಔರಾದ್ ತಾಲೂಕಿನ ಸಹಾಯಕ ನಿರ್ದೇಶಕ ಧೂಳಪ್ಪ ಹೊಸಾಳೆ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದು, ಅಧಿಕಾರಿ ಮನೆಯಲ್ಲಿ ಪತ್ತೆೆಯಾದ ನಗನಾಣ್ಯ ಕಂಡು ಲೋಕಾಯುಕ್ತ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ತಾಲುಕು ಕೃಷಿ ಅಧಿಕಾರಿ ಬಳಿ ಅಂದಾಜು 1.82 ಕೋಟಿ ಸ್ಥಿಿರಾಸ್ತಿಿ ಹಾಗೂ ಚರಾಸ್ಥಿಿ 1.52 ಕೋಟಿ ರೂ. ಪತ್ತೆೆ ಮಾಡಿದ್ದಾರೆ.
ದಾಳಿ ವೇಳೆ ಧೂಳಪ್ಪಾಾ ಮನೆಯಲ್ಲಿ ನಗದು 83 ಲಕ್ಷ ರೂ. ಇರುವುದನ್ನು ಪತ್ತೆೆ ಮಾಡಿದ್ದಾರೆ. ಒಟ್ಟು 33 ಎಕರೆ ಕೃಷಿ ಭೂಮಿ, 2 ನಿವೇಶನ, ದುಬಾರಿ ವಾಹನಗಳು, ಒಂದು ಮನೆ ಪತ್ತೆೆ ಮಾಡಿದ್ದು, ಒಟ್ಟು 3.39 ಕೋಟಿ ರೂ ಆಸ್ತಿಿ ಪತ್ತೆೆ ಮಾಡಿದ್ದಾರೆ. ಅಂದಾಜು 275 ಪ್ರತಿಶತಃ ಹೆಚ್ಚು ಆಸ್ತಿಿ ಇರುವುದನ್ನು ಪತ್ತೆೆ ಮಾಡಿದ್ದಾರೆ.
ಧೂಳಪ್ಪ ಅವರಿಗೆ ಸೇರಿದ ಇಲ್ಲಿನ ಗುರುನಗರದಲ್ಲಿನ ಮನೆ, ಸ್ವಗ್ರಾಾಮವಾದ ಭಾಲ್ಕಿಿ ತಾಲೂಕಿನ ಕರಡಾಳ, ಪತ್ನಿಿಯ ತವರುನೆಯಾದ ಕಮಲನಗರ ತಾಲೂಕಿನ ಮುಧೋಳ ಮನೆ ಹಾಗೂ ಔರಾದ್ ಪಟ್ಟಣದಲ್ಲಿನ ಸಹಾಯಕ ನಿರ್ದೇಶಕರ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ಪರಿಶೀಲಿಸಿದ್ದಾರೆ.
ಲೋಕಾಯುಕ್ತ ಎಸ್ಪಿಿ ಸಿದ್ದರಾಜು ಮಾರ್ಗದರ್ಶನದಲ್ಲಿ ಡಿವೈಎಸ್ಪಿಿ ಹನುಮಂತರಾಯ ನೇತೃತ್ವದಲ್ಲಿ ದಾಳಿ ನಡೆದಿದೆ. ಧೂಳಪ್ಪ ಅವರು ಅಕ್ರಮ ಆಸ್ತಿಿ ಗಳಿಸಿದ್ದಾರೆ ಎಂದು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ ಹಿನ್ನೆೆಲೆಯಲ್ಲಿ ಶೋಧ ಕಾರ್ಯ ನಡೆದಿದೆ ಎಂದು ತಿಳಿದುಬಂದಿದೆ.