ಸುದ್ದಿಮೂಲ ವಾರ್ತೆ ಕೊಪ್ಪಳ, ಅ.15:
ಬೆಳೆಗೆ ಸೂಕ್ತ ಮಾರುಕಟ್ಟೆೆ ಕಲ್ಪಿಿಸಬೇಕು. ಬೆಳೆಯನ್ನು ಮೌಲ್ಯವರ್ಧನೆಗೊಳಿಸಿ ಕಲ್ಯಾಾಣ ಕರ್ನಾಟಕ ಭಾಗದ ರೈತರಿಗೆ ಕೇಂದ್ರ ಸರ್ಕಾರ ಕೊಡುಗೆ ನೀಡುತ್ತಿಿದೆ ಎಂದು ಕೇಂದ್ರ ವಿತ್ತ ಹಾಗು ಕಾರ್ಪೋರೇಟ್ ಸಚಿವೆ ನಿರ್ಮಲ ಸೀತಾರಾಮನ್ ತಿಳಿಸಿದ್ದಾಾರೆ.
ಅವರು ಇಂದು ಕೊಪ್ಪಳ ತಾಲೂಕಿನ ಮೆತಗಲ್ ಗ್ರಾಾಮದಲ್ಲಿ ದಲ್ಲಿ ಕೃಷಿ ಸಂಸ್ಕರಣಾ ಘಟಕ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರದ ಉದ್ಘಾಾಟಿಸಿ ಮಾತನಾಡಿದರು. ಕೊಪ್ಪಳದಲ್ಲಿ ಒಂದು ಸುವರ್ಣ ಅವಕಾಶ ಸಿಕ್ಕಿಿದೆ. ಕೃಷಿ ಸಂಸ್ಕರಣಾ ಘಟಕ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರ ಇಲ್ಲಿ ಉದ್ಘಾಾಟನೆ ಆಗುತ್ತಿಿದೆ ಹಾಗಾಗಿ ನಾನು ಇಂದು ಕೊಪ್ಪಳಕ್ಕೆೆ ಬಂದಿರುವೆ ಇದು ನನ್ನ ಅದೃಷ್ಟ. ಕಲ್ಯಾಾಣ ಕರ್ನಾಟಕದ 7 ಜಿಲ್ಲೆೆಗಳಿಗೆ ರೈತರ ತರಬೇತಿ ಕೇಂದ್ರ ನಿರ್ಮಾಣಕ್ಕೆೆ ಹಣ ನೀಡಲಾಗುತ್ತಿಿದೆ.ಈ ಭಾಗದ ಕೃಷಿಕರು ಗುಣಮಟ್ಟ ಬೆಳೆ, ಬೆಳೆಯ ವಿವಿಧ ಉತ್ಪಾಾದನೆಗಳು ಹಾಗೂ ಮಾರುಕಟ್ಟೆೆ ಒದಗಿಸಬೇಕಾಗಿದೆ. ಈ ಕೆಲಸಕ್ಕೆೆ ನಬಾರ್ಡ್ ಸಂಸ್ಥೆೆ ನಮ್ಮೊೊಂದಿಗೆ ಕೈಜೋಡಿಸಿದೆ. ನಮ್ಮ ಸರ್ಕಾರದಿಂದ ನಾವು ಹಣ ಕೊಡುತ್ತೇವೆ ಎಂದರು.
ನಬಾರ್ಡ್ ಸಹ ನಮ್ಮೊೊಂದಿಗೆ ಕೈಜೋಡಿಸಿದೆ.ಜೊತೆಗೆ ರೈತರಿಗೆ ಸಲಹೆ ಹಾಗೂ ತಂತ್ರಜ್ಞಾಾನ ತರಬೇತಿ ನೀಡಲು ಮುಂದಾಗಿದೆ. ಕೊಪ್ಪಳ ಜಿಲ್ಲೆೆ ಅಕ್ಷಯಪಾತ್ರೆೆ ಎಂದು ಕರೆಸಿಕೊಳ್ಳುತ್ತೆೆ. ಇಲ್ಲಿ ಬೆಳೆಯುವ ಹಣ್ಣು-ತರಕಾರಿ-ದವಸ ಧಾನ್ಯಗಳು ದೇಶ ವಿದೇಶಗಳಿಗೆ ರ್ತು ಆಗುತ್ತಿಿದೆ. ದೇಶದ 100 ಯುನಿಟ್ ನಲ್ಲಿ 10 ಯುನಿಟ್ ಇಲ್ಲಿಂದ ರ್ತು ಆಗುತ್ತೆೆ. ವಿವಿಧ ಬಗೆಯ ಹಣ್ಣು-ತರಕಾರಿ- ದವಸಧಾನ್ಯಗಳನ್ನು ಇಲ್ಲಿ ಬೆಳೆಯಲಾಗುತ್ತೆೆ. ಈ ಭಾಗದ ರೈತರು ತಮ್ಮ ಪೂರ್ವಜರಿಂದ ಉತ್ತಮವಾಗಿ ಬೆಳೆಯುತ್ತಿಿದ್ದಾಾರೆ. ಇವುಗಳಿಗೆ ಮಾರುಕಟ್ಟೆೆಯಲ್ಲಿ ಸೂಕ್ತ ಬೆಲೆ ಸಿಗಬೇಕು. ಹಾಗಾಗಿ ಇದನ್ನು ಉತ್ತೇಜನ ಮಾಡಲು ನಮ್ಮ ಸರ್ಕಾರ ಮುಂದಾಗಿದೆ ಎಂದರು.
ಇಂತಹ ಮೌಲ್ಯವರ್ಧನೆಯಿಂದ ರೈತರಿಗೆ ಲಾಭ ಆಗುತ್ತೆೆ. ಮಳೆ ಆಗದಿದ್ದರೆ ಇಲ್ಲಿನ ಗ್ರಾಾಮದ ರೈತರು ಗುಳೆ ಹೋಗುತ್ತಾಾರೆ. ದೂರದ ಕರ್ನಾಟಕ, ಆಂಧ್ರ, ಮಹಾರಾಷ್ಟ್ರಕ್ಕೆೆ ಗುಳೆ ಹೋಗುತ್ತಾಾರೆ. ರೈತರು ಗ್ರಾಾಮಗಳು ತೊರೆಯದಂತೆ ಮೌಲ್ಯವರ್ಧನೆ ಯೋಜನೆ ರೂಪಿಸಲಾಗುತ್ತಿಿದೆ. ಈ ರೈತರ ತರಬೇತಿ ಕೇಂದ್ರ ಸಾವಿರಾರು ರೈತರಿಗೆ ಅನುಕೂಲ ಆಗುತ್ತೆೆ. ಮೌಲ್ಯ ವರ್ಧನೆ ಕೇಂದ್ರದಿಂದ ಹೆಚ್ಚಿಿನ ಲಾಭ ಸಿಗುತ್ತೆೆ. ಹಣ್ಣು, ತರಕಾರಿಗಳಿಂದ ವಿವಿಧ ಉತ್ಪಾಾದನೆಗಳನ್ನು ಮಾಡಬಹುದು.ಈ ಉತ್ಪಾಾದನೆಗಳಿಗೆ ಉತ್ತಮ ಮಾರುಕಟ್ಟೆೆ ಸಿಗುತ್ತೆೆ. ಎ್ಎಸ್ಎಸ್ಐ ನುಮತಿ ಕೂಡ ಈ ಉತ್ಪಾಾದನ ಕೇಂದ್ರಕ್ಕೆೆ ಸಿಕ್ಕಿಿದೆ. ಇದರಿಂದ ಗುಣಮಟ್ಟದ ಉತ್ಪಾಾದನೆಗಳನ್ನು ಇಲ್ಲಿಂದ ಉತ್ಪಾಾದನೆ ಮಾಡಬಹುದು ಎಂದು ತಿಳಿಸಿದರು.
ನಮ್ಮ ಪ್ರಧಾನಿ ಅವರು ವೋಕಲ್ ಾರ್ ಲೋಕಲ್ ಬಗ್ಗೆೆ ಹೇಳಿದ್ದಾಾರೆ. ಇದಕ್ಕೆೆ ಕೊಪ್ಪಳದ ಈ ಒಂದು ಕೇಂದ್ರ ಉತ್ತಮ ನಿದರ್ಶನವಾಗಿದೆ. ಕೊಪ್ಪಳಕ್ಕೆೆ ಲೋಕಲ್ ಉತ್ಪಾಾದನೆಗೆ ವೋಕಲ್ ಸಿಗುತ್ತೆೆ. ಕರ್ನಾಟಕದಲ್ಲಿ ಕಿಸಾನ್ ಸಮ್ಮಾಾನ್ ಯೋಜನೆಯಿಂದ 43 ಲಕ್ಷ ರೈತರು ಲಾಭ ಪಡೆಯುತ್ತಿಿದ್ದಾಾರೆ ಎಂದರು.
ಜಿಎಸ್ಟಿ ಕೌನ್ಸಿಿಲ್ ನಿಂದ ಹೊಸ ನೀತಿ ಜಾರಿಯಾಗಿದೆ. ಇದೀಗ ಜಿಎಸ್ಟಿ ದೇಶದಲ್ಲಿ ಸುಧಾರಣೆಯಾಗಿದೆ. ಬಹಳಷ್ಟು ಉತ್ಪಾಾದನೆಗಳ ಮೇಲೆ ಜಿಎಸ್ಟಿ ಕಡಿಮೆ ಆಗಿದೆ. ರೈತರ ಹಾಗೂ ಕೃಷಿ ಸಲಕರಣೆಗಳ ಮೇಲೆ ಜಿಎಸ್ ಟಿ ದರ ಕಡಿಮೆ ಆಗಿದೆ. ಕೇವಕ ಶೇಕಡ 5 ರಷ್ಟು ಜಿಎಸ್ ಟಿ ಕಡಿಮೆ ಆಗಿದೆ. ಬಯೋ ಉತ್ಪಾಾದನೆಗಳ ಮೇಲೂ ಜಿಎಸ್ ಟಿ ಕಡಿಮೆ ಆಗಿದೆ. ಕೇಂದ್ರದ ಎರಡು ಯೋಜನೆಗಳ ಕೇಂದ್ರದಲ್ಲಿ ಪ್ರಮುಖವಾಗಿವೆ. ಮೈಕ್ರೋೋ ಉತ್ಪಾಾದನಾ ಯುನಿಟ್ ಗಳಿಗೆ ಉತ್ತೇಜನ ನೀಡಲಾಗಿದೆ. ಹಣಕಾಸು ಹಾಗೂ ತಂತ್ರಜ್ಞಾಾನ ಸೌಲಭ್ಯ ಹಾಗೂ ಬ್ರ್ಯಾಾಂಡ್ ಮಾರುಕಟ್ಟೆೆಯನ್ನು ರೂಪಿಸಲಾಗಿದೆ. ಸಣ್ಣ ಸಣ್ಣ ಉದ್ಯಮಿಗಳಿಗೆ ಸಹಕಾರವಾಗಿದೆ ಎಂದರು.
ಪಿಎಮ್ ಧನ್ ಧಾನ್ಯ ಯೋಜನೆಯಿಂದ ಅನುಕೂಲವಾಗಿದೆ. ದೇಶದ 100 ಜಿಲ್ಲೆೆಗಳಲ್ಲಿ ಕೊಪ್ಪಳ ಜಿಲ್ಲೆೆ ಕೂಡ ಆಯ್ಕೆೆ ಆಗಿದೆ. ಈ ಯೋಜನೆಗೆ 25-26 ಸಾಲಿನ 24000 ಕೋಟಿ ಬಜೆಟ್ ನಲ್ಲಿ ನೀಡಲಾಗಿದೆ. ಗುಣಮಟ್ಟದ ಬೀಜ ಸಿಗುತ್ತೆೆ, ನೂತನ ತಂತ್ರಜ್ಞಾಾನ ರೈತರಿಗೆ ತಲುಪುತ್ತೆೆ. ಪರ್ ಡ್ರಾಾಪ್ ಮೋರ್ ಕ್ರಾಾಪ್ ಎನ್ನುವ ತಂತ್ರಜ್ಞಾಾನ ರೂಪಿಸಲಾಗಿದೆ. ನೀರಾವರಿ ಸೌಲಭ್ಯ ಸುಧಾರಣೆ ಆಗುತ್ತೆೆ. ಮಾರುಕಟ್ಟೆೆ ಸಂಪರ್ಕ ಸುಲಭ ಆಗುತ್ತೆೆ. 1.70 ಕೋಟಿ ರೈತರಿಗೆ ಈ ಸೌಲಭ್ಯ ಸಿಗಲಿದೆ. ಇಂತಹ ರೈತ ತರಬೇತಿ ಕೇಂದ್ರದಿಂದ ರೈತರಿಗೆ ಸಹಕಾರಿ ಆಗಲಿದೆ.ಇದನ್ನು ತಾವೆಲ್ಲ ಸದುಪಯೋಗ ಪಡೆಯಿರಿ, 11 ಸಾವಿರ ಕೋಟಿ ರೈತರಿಗೆ ಇದರ ಸೌಲಭ್ಯ ಸಿಕ್ಕಿಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಗಾಲಿ ಜನಾರ್ದನರಡ್ಡಿಿ ಅಂಜನಾದ್ರಿಿ ಅಭಿವೃದ್ದಿಗೆ 1350 ಕೋಟಿ ರೂಪಾಯಿ ಯೋಜನೆ ಸಿದ್ದವಾಗಿದೆ. ರಾಜ್ಯ ಹಾಗು ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಯಾಗಬೇಕು. ಈ ನಿಟ್ಟಿಿನಲ್ಲಿ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕೆಂದು ಸಚಿವರಿಗೆ ಮನವಿ ಮಾಡಿಕೊಂಡರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆಯ ಕಾರ್ಯದರ್ಶಿ ಡಾ. ವಿಶಾಲ ಆರ್., ನಬಾರ್ಡ್ ಡ್ಯೊಟಿ ಡೈರೆಕ್ಟರ್ ಎ.ಕೆ ಸೂದ್, ವನಬಳ್ಳಾಾರಿ ಗ್ರಾಾಮ ಪಂಚಾಯತಿ ಅಧ್ಯಕ್ಷರಾದ ಅಂಬಮ್ಮ ಶ್ರೀಕಂಠ ಹುಲಸನಹಟ್ಟಿಿ, ಕೊಪ್ಪಳ ಜಿಲ್ಲಾಾಧಿಕಾರಿ ಡಾ. ಸುರೇಶ ಬಿ. ಇಟ್ನಾಾಳ್, ಜಿಲ್ಲಾಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿ ಡಾ.ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಾಧಿಕಾರಿ ಸಿದ್ರಾಾಮೇಶ್ವರ ಸೇರಿದಂತೆ ಹಲವು ಜನಪ್ರತಿನಿಧಿಗಳು, ಕೃಷಿ ಗ್ರಾಾಮೀಣಾಭಿವೃದ್ಧಿಿ ರಾಷ್ಟ್ರೀಯ ಬ್ಯಾಾಂಕ್ (ನಬಾರ್ಡ್) ಬೆಂಗಳೂರಿನ ಅಧಿಕಾರಿಗಳು, ಇರಕಲ್ಲಗಡದ ಗವಿಸಿದ್ದೇಶ್ವರ ರೈತ ಉತ್ಪಾಾದಕರ ಕಂಪನಿ ಲಿಮಿಟೆಡ್ ಪದಾಧಿಕಾರಿಗಳು ಮತ್ತು ವಿವಿಧ ಇತರೆ ಇಲಾಖೆಗಳ ಅಧಿಕಾರಿಗಳು, ರೈತರು, ಮೆತಗಲ್ ಗ್ರಾಾಮಸ್ಥರು ಹಾಗೂ ಮತ್ತಿಿತರರಿದ್ದರು.