ಸುದ್ದಿಮೂಲ ವಾರ್ತೆ ಬೆಂಗಳೂರು, ಅ.17
ಕೊಡಗಿಗೆ ಮಾತ್ರ ಸಿಮೀತವಾಗಿರುವ ಕುರುಬ ಬುಡಕಟ್ಟು ಪ್ರದೇಶದ ನಿರ್ಬಂಧ ತೆರವು ಮಾಡಿ ಇಡೀ ರಾಜ್ಯಕ್ಕೆೆ ಕುರುಬ ಬಡಕಟ್ಟು ಮೀಸಲನ್ನು ವಿಸ್ತರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಗ್ರಹಿಸಿದರು.
ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಿಯಲ್ಲಿ ಅವರು ಮಾತನಾಡಿದರು.
ಸದ್ಯ ಕೊಡಗಿನಲ್ಲಿ ಮಾತ್ರ ಕುರುಬರಿಗೆ ಬುಡಕಟ್ಟು ಸ್ಥಾಾನಮಾನ ನೀಡಲಾಗಿದೆ. ಇದನ್ನು ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಇಡೀ ರಾಜ್ಯಕ್ಕೆೆ ವಿಸ್ತರಣೆ ಮಾಡಬೇಕು. ಅಂದರೆ ಎಸ್ಟಿ ಸಮುದಾಯದ ಪಟ್ಟಿಿಗೆ ಕುರುಬರನ್ನು ಸೇರಿಸಬೇಕು ಎಂದು ಒತ್ತಾಾಯಿಸಿದರು.
ಕುರುಬರು ಈ ದೇಶದ ಮೂಲ ನಿವಾಸಿಗಳು. ಅವರು ಬುಡಕಟ್ಟು ಸಮುದಾಯದವರು. ಕೊಡಗಿನಲ್ಲಿ ಮಾತ್ರ ಕುರುಬರನ್ನು ಎಸ್ಟಿ ಸಮುದಾಯದ ಪಟ್ಟಿಿಗೆ ಸೇರಿಸಲಾಗಿದೆ. ಇದನ್ನು ಇಡೀ ರಾಜ್ಯದ ಜಿಲ್ಲೆಗಳಿಗೆ ವಿಸ್ತರಣೆ ಮಾಡಬೇಕು. ಗೊಂಡ. ಜೇನು ಕುರುಬ, ಕಾಡು ಕುರುಬ, ಕುರುಮನ್ ಕಾಟ್ಟು ನಾಯಕನ್, ಕುರುಬ ಎಂದು ಗುರುತಿಸಲಾಗುತ್ತಿಿದೆ. ಇವರು ಎಲ್ಲರೂ ಕುರುಬರೇ. ಹೀಗಾಗಿ ಎಲ್ಲ ಸಮುದಾಯಗಳನ್ನು ಎಸ್ಟಿ ಪಟ್ಟಿಿಗೆ ಸೇರಿಸಬೇಕು ಎಂದು ಹೇಳಿದರು.
ಬಿಜೆಪಿ ಸರ್ಕಾರದಲ್ಲಿ ಬೊಮ್ಮಾಾಯಿ ಸಿಎಂ ಆಗಿದ್ದ ವೇಳೆ ಕುರುಬರನ್ನು ಎಸ್ಟಿಗೆ ಸೇರಿಸುವಂತೆ ಕೇಂದ್ರಕ್ಕೆೆ ಶಿಾರಸ್ಸು ಮಾಡಿದ್ದರು. ನಂತರ ಸರ್ಕಾರ ಬದಲಾಯಿತು. ಈಗ ಕಾಂಗ್ರೆೆಸ್ ಸರ್ಕಾರ ಅಧಿಕಾರಕ್ಕೆೆ ಬಂದಿದೆ. ಮತ್ತೆೆ ಕೇಂದ್ರ ಮೇಲೆ ಒತ್ತಡ ಹಾಕಿ ಕುರುಬರನ್ನು ಎಸ್ಟಿಗೆ ಸೇರಿಸಬೇಕು ಎಂದು ಅವರು ಆಗ್ರಹಿಸಿದರು.
ಮಾಜಿ ಸಚಿವ ಉಗ್ರಪ್ಪ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಕುರುಬರಿಗೆ ಎಸ್ಟಿ ಶಿಾರಸ್ಸು ಮಾಡಿ ವಾಲ್ಮೀಕಿ ಜನಾಂಗದ ತಟ್ಟೆೆಗೆ ಕೈ ಹಾಕಿ ಅನ್ನ ಕಿತ್ತುಕೊಳ್ಳುತ್ತಿಿದ್ದಾರೆ ಎಂದು ಹೇಳಿದರು. ಆಗ ಸಿದ್ದರಾಮಯ್ಯ ಅವರು ಉತ್ತರಿಸಿ ಇದನ್ನು ನಾನು ಮಾಡಿಲ್ಲ. ಕೆಎಸ್ ಈಶ್ವರಪ್ಪ ಅವರು ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು ಎಂದರು.
ಮಾಜಿ ಉಪ ಮುಖ್ಯಮಂತ್ರಿಿ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ, ಕುರುಬರನ್ನು ಎಸ್ಟಿಗೆ ಸೇರಿಸಿದರೆ ಈಗಾಗಲೇ ಎಸ್ಟಿ ಪಟ್ಟಿಿಯಲ್ಲಿರುವ ವಾಲ್ಮೀಕಿ ಸಮುದಾಯದ ಮೀಸಲಾತಿ ಕಡಿಮೆಯಾಗುತ್ತದೆ ಎಂಬ ಆತಂಕವನ್ನು ಉಗ್ರಪ್ಪ ಅವರು ವ್ಯಕ್ತಪಡಿಸಿದ್ದಾರೆ. ಆದರೆ ಕುರುಬರು ವಾಲ್ಮೀಕಿ ಸಮುದಾಯದ ಮೀಸಲಾತಿಯನ್ನು ಕಸಿಯುವುದಿಲ್ಲ. ಕುರುಬರಿಗೆ ಈಗ ಇರುವ ಶೇ.8ರಷ್ಟು ಮೀಸಲಾತಿಯನ್ನು ಎಸ್ಟಿಿ ವರ್ಗಾಯಿಸಿ ಇಲ್ಲಿ ಶೇ.20ರಷ್ಟು ಮೀಸಲಾತಿ ಕಲ್ಪಿಿಸಿದರೆ ವಾಲ್ಮೀಕಿ ಸಮುದಾಯದವರು ಪಡೆಯುತ್ತಿಿರುವ ಮೀಸಲಾತಿಗೆ ಯಾವುದೇ ಕುತ್ತು ಬರುವುದಿಲ್ಲ. ಕುರುಬರ ಕುಲಶಾಸೀಯ ಅಧ್ಯಯನದಲ್ಲಿ ಕುರುಬರು ಬಡವರು ಗುಡಿಸಲುಗಳಲ್ಲಿ ವಾಸ ಮಾಡುತ್ತಾಾರೆ. ಶಿಕ್ಷಣ ಹಾಗೂ ಉದ್ಯೋೋಗ ಇಲ್ಲದೆ ಹಿಂದುಳಿದಿದ್ದಾರೆ ಎಂಬ ವರದಿ ನೀಡಿದೆ. ಕೆಲವು ರಾಜ್ಯಗಳಲ್ಲಿ ಎಸ್ಟಿಗೆ ಶೇ.30 ರಿಂದ ಶೇ.40 ರಷ್ಟು ಮೀಸಲಾತಿಯನ್ನು ನೀಡಲಾಗಿದೆ ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಕುರುಬರನ್ನು ಎಸ್ಟಿಗೆ ಸೇರಿಸಿ ಶೇ.20 ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಿಯಲ್ಲಿ ಕುರುಬರ ಮುಕುಡಪ್ಪ, ಎನ್.ಮಂಜುನಾಥ್ ಹಾಗೂ ಟಿ.ಎನ್.ಮಾನೇಶ್ ಇದ್ದರು.
ಬಾಕ್ಸ್
ಕಾಡು ಸಿದ್ದೇಶ್ವರ ಸ್ವಾಾಮೀಜಿ ಅವರಿಗೆ ನಿರ್ಬಂಧ ಸರಿಯಲ್ಲ
ಸರ್ಕಾರವನ್ನು ಟೀಕೆ ಮಾಡಿದ ಹಿನ್ನೆೆಲೆಯಲ್ಲಿ ಕಾಡು ಸಿದ್ದೇಶ್ವರ ಸ್ವಾಾಮೀಜಿ ಅವರು ವಿಜಯಪುರ ಪ್ರವೇಶ ಮಾಡಲು ಜಿಲ್ಲಾಡಳಿತ ನಿರ್ಬಂಧ ಹೇರಿರುವುದು ಸರಿಯಲ್ಲ. ಕೂಡಲೇ ಇದನ್ನು ತೆರವು ಮಾಡಿ ಶ್ರೀಗಳಿಗೆ ಪ್ರವೇಶ ಕಲ್ಪಿಿಸಬೇಕು ಎಂದು ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.