ಸುದ್ದಿಮೂಲ ವಾರ್ತೆ ಬೀದರ್, ಅ.17
ತಾಲೂಕಿನ ಚಿಟ್ಟಾಾ ಶಿವಾರದಲ್ಲಿ ಜಮೀನಿಗೆ ಹೋಗುತ್ತಿಿದ್ದ ವ್ಯಕ್ತಿಿಗೆ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ಹಿನ್ನಲೆ ಜೆಸ್ಕಾಾಂ ಎಇಇ ಸೇರಿ ಮೂವರ ವಿರುದ್ಧ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಭು ಶಿಕಾರಿ (48) ಮೃತಪಟ್ಟ ದುರ್ದೈವಿ. ಘಟನೆ ಸಂಬಂಧಿಸಿದಂತೆ ಮೃತನ ಪತ್ನಿಿ ದೂರು ನೀಡಿದ್ದು, ಎಇಇ ಪುಂಡಲೀಕ ಗೋಖಲೆ, ಜೆಇ ಸಂಜುಕುಮಾರ್, ಲೈನ್ ಮ್ಯಾಾನ್ ಸಂಜುಕುಮಾರ್ ಕಲ್ಲೂರ್ ವಿರುದ್ಧ ನಿರ್ಲಕ್ಷ್ಯತನದ ಹಿನ್ನಲೆ ದೂರು ದಾಖಲಾಗಿದೆ.
ಜಮೀನಿಗೆ ತೆರಳುವ ಮಾರ್ಗದಲ್ಲಿ ವಿದ್ಯುತ್ ತಂತಿ ಜೋತು ಬಿದ್ದ ಬಗ್ಗೆೆ ಸದರಿ ಅಧಿಕಾರಿಗಳ ಗಮನಕ್ಕೆೆ ತಂದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.