ಸುದ್ದಿಮೂಲ ವಾರ್ತೆ ಕಲಬುರಗಿ,ಅ.18:
ಮುಂದಿನ 15 ದಿನದಲ್ಲಿ ಕಲ್ಯಾಾಣ ಕರ್ನಾಟಕ ಭಾಗದಲ್ಲಿ ಕಡಿಮೆ ಅರಣ್ಯ ಪ್ರದೇಶದ 5 ಜಿಲ್ಲೆಗಳಲ್ಲಿ ಅರಣ್ಯ ಇಲಾಖೆ ಮತ್ತು ಕೆ.ಕೆ.ಆರ್.ಡಿ.ಬಿ ಮಂಡಳಿಯ 50-50 ಯೋಜನೆಯಡಿ 100 ಕೋಟಿ ರೂ. ಮೊತ್ತದ ಅರಣ್ಯ ಆವಿಷ್ಕಾಾರ ಕಾರ್ಯಕ್ರಮದ ಕ್ರಿಿಯಾ ಯೋಜನೆಗೆ ಅನುಮೋದನೆ ನೀಡಿ ಅರಣ್ಯೀಕರಣ ಕೆಲಸ ಪ್ರಾಾರಂಭಿಸಲಾಗುವುದು. ಇದರಲ್ಲಿ ಹೆಚ್ಚಿಿನ ಬಿಸಿಲಿಗೆ ಖ್ಯಾಾತಿಯಾಗಿರುವ ಕಲಬುರಗಿಯಲ್ಲಿಯೆ 25 ಕೋಟಿ ರೂ. ಖರ್ಚು ಮಾಡಿ ಸೂರ್ಯ ನಗರಿಗೆ ಹೆಚ್ಚಿಿನ ಆದ್ಯತೆ ನೀಡಲಾಗುವುದು ಎಂದು ಈಶ್ವರ ಖಂಡ್ರೆೆ ತಿಳಿಸಿದರು.
ನಗರದ ರಿಂಗ್ ರಸ್ತೆೆಯ ಕೆ.ಸಿ.ಟಿ. ಇಂಜನಿಯರಿಂಗ್ ಕಾಲೇಜು ಮೈದಾನದಲ್ಲಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇವುಗಳ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಾಪನೆಗೊಂಡು 50 ವರ್ಷಗಳಾದ ಹಿನ್ನೆೆಲೆಯಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದ ಅವರು, ಇಂದು ವಿಶ್ವಕ್ಕೆೆ ಪರಿಸರ ಸಮತೋಲನ ಕಾಪಾಡುವುದೇ ದೊಡ್ಡ ಸವಾಲಾಗಿದೆ. ಕೋವಿಡ್ ಮಹಾಮಾರಿಯಲ್ಲಿ ಆಮ್ಲಜನಕ ಕೊರತೆಯಿಂದ ಲಕ್ಷಾಂತರ ಜನ ಸಾವನ್ನಪ್ಪಿಿರುವ ಕರಾಳ ಘಟನೆ ಕಣ್ಮುಂದಿದೆ ಎಬುದನ್ನು ಯಾರು ಮರೆಯಬಾರದು. ಪರಿಸರ ಉಳಿದರೆ ಮಾತ್ರ ಭವಿಷ್ಯದ ಜೀವನ ಎಂಬುದನ್ನು ಅರಿಯಬೇಕು ಎಂದರು.
ಕಲಬರುಗಿಯಲ್ಲಿ ಈಗಾಗಲೇ ಲುಂಬಿನಿ ಉದ್ಯಾಾನವನ ಸ್ಥಾಾಪಿಸಲಾಗಿದೆ. 33 ಕೋಟಿ ರೂ. ವೆಚ್ಚದಲ್ಲಿ ಚಿತ್ತಾಾಪುರ ತಾಲೂಕಿನ ಮಾಡಬೂಳದಲ್ಲಿ ಪ್ರಾಾಣಿ ಸಂಗ್ರಹಾಲಯ ಸ್ಥಾಾಪಿಸಲಾಗುತ್ತಿಿದೆ. ಹುಲಿ, ಸಿಂಹ ಸೇರಿದಂತೆ ಅನೇಕ ವನ್ಯಜೀವಿಗಳನ್ನು ಇಲ್ಲಿ ಕಾಣಬಹುದಾಗಿದೆ. ಚಿಂಚೋಳಿಯ ಚಂದ್ರಂಪಳ್ಳಿಿಯಲ್ಲಿ ಟ್ರೆೆಕ್ಕಿಿಂಗ್ ಆರಂಭಿಸಲಾಗಿದೆ ಎಂದ ಅವರು, ಬೀದರ ಜಿಲ್ಲೆಯಲ್ಲಿ ಈ ವರ್ಷ ದಾಖಲೆ ಪ್ರಮಾಣದಲ್ಲಿ ಸಸಿ ನೆಡಲಾಗಿದೆ ಎಂದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಾಮಿ ಅವರು ಮಾತನಾಡಿ, ಪರಿಸರ ಉಳಿಸಿಕೊಳ್ಳಬೇಕಾದುದು ಅತ್ಯಂತ ಅಗತ್ಯ ಕೆಲಸವಾಗಿದೆ. ಗುಣಮಟ್ಟದ ವಾಯು ಮತ್ತು ಗುಣಮಟ್ಟದ ನೀರು ಇಲ್ಲದ ಭವಿಷ್ಯ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು. ಇಂದಿರಾ ಪ್ರಿಿಯದರ್ಶಿನಿ ಪರಿಸರ ಪ್ರಶಸ್ತಿಿ ಪ್ರದಾನ ಮಾಡಲಾಯಿತು.
ಇತರೆ ಚುನಾಯಿತ ಪ್ರತಿನಿಧಿಗಳು, ಸಾವಿರಾರು ಸಂಖ್ಯೆೆಯಲ್ಲಿ ಮಕ್ಕಳು, ಸಾರ್ವಜನಿಕರು ಭಾಗವಹಿಸಿದ್ದರು.