ಸುದ್ದಿಮೂಲ ವಾರ್ತೆ ಬೆಂಗಳೂರು, ಅ.18:
ಬೆಳಕಿನ ಹಬ್ಬ ದೀಪಾವಳಿಗೆ ಮುನ್ನ ಬಹು ದಿನಗಳಿಂದ ನಿರೀಕ್ಷೆಯಲ್ಲಿದ್ದ ಶಿಕ್ಷಕರ ನೇಮಕಾತಿ ಪ್ರಕ್ರಿಿಯೆಗೆ ಇದೀಗ ಚಾಲನೆ ದೊರತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದ್ದಾರೆ.
ಈ ಪ್ರಕ್ರಿಿಯೆಯ ಭಾಗವಾಗಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಕುರಿತ ಅಧಿಸೂಚನೆ ಹೊರಡಿಸಲಾಗುತ್ತಿಿದ್ದು, ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ನಲ್ಲಿ ನವೆಂಬರ್ 9ರ ರವರೆಗೆ ಸಲ್ಲಿಸಬಹುದು. ಪರೀಕ್ಷೆಯನ್ನು ಡಿಸೆಂಬರ್ 7 ರಂದು ನಡೆಸಲಾಗುತ್ತದೆ. ಪರೀಕ್ಷಾ ಪ್ರಕ್ರಿಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಡಿಸೆಂಬರ್ 31 ರಂದು ಲಿತಾಂಶ ಪ್ರಕಟಿಸುವ ಉದ್ದೇಶವಿದೆ ಎಂದಿದ್ದಾರೆ.
ಕಲ್ಯಾಾಣ ಕರ್ನಾಟಕ ಪ್ರದೇಶದ ಮತ್ತು ಉಳಿದ ಶಿಕ್ಷಕರ ಹುದ್ದೆಗಳ ಭರ್ತಿಗೂ ಸಿಇಟಿ ಪರೀಕ್ಷೆಯ ಮೂಲಕ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಟಿಇಟಿ ಪರೀಕ್ಷೆಗೆ ಸಜ್ಜಾಾಗುತ್ತಿಿರುವ ಎಲ್ಲ ಅಭ್ಯರ್ಥಿಗಳಿಗೆ ಶುಭವಾಗಲಿ ಎಂದು ಹೇಳಿದ್ದಾರೆ.