ಸುದ್ದಿಮೂಲ ವಾರ್ತೆ ಬೆಂಗಳೂರು, ಅ.18:
ರಾಜ್ಯಕ್ಕೆೆ 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆೆ ಅನ್ವಯವಾಗುವಂತೆ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 422 ಪಿಜಿ ಸೀಟುಗಳ ಸಂಖ್ಯೆೆ ಹೆಚ್ಚಳವಾಗಿದೆ. ಹಲವಾರು ವರ್ಷಗಳ ಬೇಡಿಕೆ ಈಗ ದೀಪಾವಳಿ ಕೊಡುಗೆ ಎಂಬಂತೆ ಈಡೇರಿದೆ ಎಂದು ವೈದ್ಯಕೀಯ ಶಿಕ್ಷಣ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ ಅವರು, ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ ನೀಡುವುದೇ ನಮ್ಮ ಸರ್ಕಾರದ ಗುರಿ ಎಂದು ಸಚಿವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಪ್ರೀೀ ಕ್ಲಿಿನಿಕಲ್, ಪ್ಯಾಾರಾ ಕ್ಲೀನಿಕಲ್ ಮತ್ತು ಕ್ಲಿಿನಿಕಲ್ ವಿಭಾಗಕ್ಕೆೆ ಒಟ್ಟು 422 ಪಿಜಿ ಸೀಟುಗಳ ಹೆಚ್ಚಳ ಮಾಡಲಾಗಿದೆ. ಪೀಡಿಯಾಟ್ರಿಿಕ್ಸ್, ಅನಸ್ತೇಸಿಯಾ, ೆರೆನ್ಸಿಿಕ್ ಮೆಡಿಸಿನ್, ಮೈಕ್ರೊೊ ಬಯಲಾಜಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ವಿಭಾಗದಲ್ಲಿ ಪಿಜಿ ಸೀಟುಗಳನ್ನು ಮಂಜೂರು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಪ್ರತಿಬಾರಿಯಂತೆ ಈ ಬಾರಿಯೂ ಪಿಜಿ ಕೋರ್ಸ್ ಗೆ ಬೇಡಿಕೆ ಇತ್ತು. ಪಿಜಿಯಲ್ಲಿ 572 ಸೀಟುಗಳನ್ನು ಮಂಜೂರು ಮಾಡಲು ನಾವು ಮನವಿ ಮಾಡಿದ್ದೆವು. ಇದರಲ್ಲಿ ನಮಗೆ 422 ಸೀಟು ಲಭ್ಯವಾಗಿವೆ. ಕಳೆದ ವರ್ಷ 1694 ಪಿಜಿ ಸೀಟು ಇದ್ದರೆ, ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆೆ 422 ಸೀಟು ಹೆಚ್ಚಳ ಆಗಲಿದೆ. ಈ ವರ್ಷ ಒಟ್ಟು 2116 ಸೀಟು ವಿದ್ಯಾಾರ್ಥಿಗಳಿಗೆ ಸಿಗಲಿದೆ. ಇದು ವಿದ್ಯಾಾರ್ಥಿಗಳಿಗೆ ದೀಪಾವಳಿ ಕೊಡುಗೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.
ಈಗಾಗಲೇ ರಾಜ್ಯಕ್ಕೆೆ 450 ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡಿ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಆದೇಶ ನೀಡಿದೆ. ಇದರ ಜೊತೆಗೆ ಇದೇ ಮೊದಲ ಬಾರಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅನಿವಾಸಿ ಭಾರತೀಯರಿಗೆ ಶೇ.15ರಷ್ಟು ಕೋಟಾ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಚಟುವಟಿಕೆ ನಿಷೇಧ: ಬಿಜೆಪಿ ನಿರ್ಧಾರ ಈಗ ಅನುಷ್ಠಾಾನ
ಸರಕಾರಿ ಸ್ಥಳಗಳಲ್ಲಿ ಯಾವುದೇ ಸಂಘ ಸಂಸ್ಥೆೆಗಳು ಚಟುವಟಿಕೆ ನಡೆಸಬೇಕಾದರೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆೆಗಳ ಅನುಮತಿ ಪಡೆಯಬೇಕು ಎಂಬ ಸಚಿವ ಸಂಪುಟದ ತೀರ್ಮಾನ ಸಮರ್ಥನೀಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳೀದರು.
ನಮ್ಮ ಸರ್ಕಾರ ಜಾರಿಗೆ ಈ ನಿಷೇಧ ಹೇರಿಲ್ಲ. ಮಾಜಿ ಮುಖ್ಯಮಂತ್ರಿಿ ಜಗದೀಶ್ ಶೆಟ್ಟರ್ ಅವರ ಅಧಿಕಾರಾವಧಿಯಲ್ಲಿ ಜಾರಿಗೆ ತರಲಾಗಿತ್ತು. ಇದನ್ನು ನಮ್ಮ ಸರ್ಕಾರ ಅನುಷ್ಠಾಾನ ಮಾಡಿದೆಯಷ್ಟೇ. ಮಾಡಲು ಕೆಲಸವಿಲ್ಲದ ಬಿಜೆಪಿಯವರು ಜನರಲ್ಲಿ ಗೊಂದಲ ಸೃಷ್ಟಿಿಸಲು ಯತ್ನಿಿಸುತ್ತಿಿದ್ದಾರೆ ಎಂದು ತಿರುಗೇಟು ನೀಡಿದರು.
ನಿಷೇಧದ ಬಗ್ಗೆೆ ಎಲ್ಲಿಯೂ ಹೇಳಿಲ್ಲ
ಗ್ರಾಾಮೀಣಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಿಯಾಂಕ್ ಖರ್ಗೆ ಅವರು ಆರೆಸ್ಸೆೆಸ್ ನಿಷೇಧ ಮಾಡಬೇಕು ಎಂದು ಎಲ್ಲಿಯೂ ಹೇಳಿಲ್ಲ.ಎಲ್ಲರೂ ಅವರ ಮಾತನ್ನ ತಪ್ಪಾಾಗಿ ಅರ್ಥೈಸಿಕೊಂಡಿದ್ದಾರೆ. ಸರ್ಕಾರಿ ಅಧೀನದ ಸ್ಥಳಗಳಲ್ಲಿ, ಶಾಲಾ-ಕಾಲೇಜು ಆವರಣದಲ್ಲಿ ಅನುಮತಿ ಪಡೆಯಬೇಕು ಎಂದು ಅವರು ಹೇಳಿದ್ದಾರೆ. ಇದಲ್ಲಿ ತಪ್ಪೇನೂ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಸಾರ್ವಜನಿಕ ಸ್ಥಳದಲ್ಲಿ ನಮಾಜ್ಗೆ ಅವಕಾಶ ಕೊಡಬಾರದು ಎಂಬ ಶಾಸಕ ಯತ್ನಾಾಳ್ ಪತ್ರದ ವಿಚಾರವಾಗಿ ಪ್ರತಿಕ್ರಿಿಯೆ ನೀಡಿದ ಸಚಿವರು, ಯತ್ನಾಾಳ್, ಅವರ ಕ್ಷೇತ್ರಕ್ಕೆೆ ಸೀಮಿತವಾಗಿ ಮಾತನಾಡುತ್ತಾಾರೆ. ಅವರ ಕ್ಷೇತ್ರ ಹೇಗಿದೆ ಎಂದು ನಿಮಗೆ ಗೊತ್ತಿಿದೆ. ಈ ಹಿಂದೆ ಯತ್ನಾಾಳ್ ಅವರ ವರ್ತನೆ ಹೇಗಿತ್ತು?ಈಗ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿಿದೆ. ರಾಜಕೀಯಕ್ಕೆೆ ಮಾಡಲು ಮಾತ್ರ ಹೇಳಿಕೆ ನೀಡುತ್ತಾಾರೆ. ಅವರ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಡಾ. ಶರಣಪ್ರಕಾಶ ಪಾಟೀಲ್ ನಯವಾಗಿ ಚಾಟಿ ಬೀಸಿದರು.