ವೆಂಕಟೇಶ ಹೂಗಾರ ರಾಯಚೂರು, ಅ.18:
ಮಾರುಕಟ್ಟೆೆಯಲ್ಲಿ ಹತ್ತಿಿಗೆ ಬೆಲೆ ಇಲ್ಲಘಿ, ಇಳುವರಿಯ ನಿರೀಕ್ಷೆೆಯಿಲ್ಲ ಮೋಡದ ಮೇಲೆ ನಂಬಿಕೆ ಇಲ್ಲ , ಜಮೀನಲ್ಲಿ ಹತ್ತಿಿ ಕೀಳಲು ಕೂಲಿಕಾರರ ಕೊರತೆಯಂತೂ ನೀಗದೆ ರೈತ ಕಂಗಾಲಾಗುವಂತಾಗಿದೆ.
ರಾಯಚೂರು ಜಿಲ್ಲೆೆಯ ಎರಡೂ ನದಿಗಳ ಮಧ್ಯೆೆ ಉತ್ತಮ ಮಳೆಯಿಂದಾಗಿ ರೈತರು ಈ ಬಾರಿ ಹೆಚ್ಚಿಿನ ಪ್ರದೇಶದಲ್ಲಿ ಹತ್ತಿಿ ಬೆಳೆದಿದ್ದಾಾರೆ. ಆದರೆ, ಮಳೆಗಾಲ, ಚಳಿಗಾಲವಾದರೂ ಮಳೆಗಾಲದ ವಾತಾವರಣವೇ ಮನೆ ಮಾಡಿದ್ದರಿಂದ ಈ ಬಾರಿ ಹತ್ತಿಿಯ ಇಳುವರಿ ಕಡಿಮೆ ಆಗಲಿದೆ ಎಂಬ ಚಿಂತೆಯ ಮಧ್ಯೆೆ ಟಿಸಿಲು ಒಡೆದ ಹತ್ತಿಿಯ ಬಿಡಿಸಲು ಕೂಲಿಕಾರ್ಮಿಕರ ಕರೆದೊಯ್ಯಲು ರೈತರ ಮಧ್ಯೆೆಯೇ ಸ್ಪರ್ಧೆ ಏರ್ಪಟ್ಟಿಿದೆ. ನಿರಂತರ ಮಳೆ ಸುರಿದ ಪರಿಣಾಮ ಹತ್ತಿಿ ಗಿಡದ ಕೆಳ ಕೊಂಬೆಗಳಲ್ಲಿನ ಕಾಯಿ ಕೊಳೆತು ಹಾಳಾಗಿವೆ. ಕನಿಷ್ಠ ಎಕರೆಗೆ 2ರಿಂದ 3 ಕ್ವಿಿಂಟಾಲ್ ಹತ್ತಿಿ ಕೈ ತಪ್ಪಿಿದೆ ಎಂಬ ಬೇಸರ ರೈತರಲ್ಲಿದೆ.
ಸಿಗದ ಕೂಲಿಕಾರರು :
ಬಹುತೇಕ ಹತ್ತಿಿ ಬೆಳೆದ ಕಪ್ಪುು ಜಮೀನಿನಲ್ಲಿ ಬಿಳಿ ಬಂಗಾರದಂತೆ ಹತ್ತಿಿ ತೊಳೆ ಎದ್ದು ಕಾಣುತ್ತಿಿದೆ. ಅದನ್ನು ಬಿಡಿಸಬೇಕೆಂಬ ಒತ್ತಾಾಸೆ ರೈತರಲ್ಲಿದ್ದರೂ ಕೂಲಿಕಾರ್ಮಿಕರ ತೀವ್ರ ಅಭಾವ ತಲೆದೋರಿದೆ.
ತಮ್ಮದೇ ಊರುಗಳಲ್ಲಿ ಹತ್ತಿಿ ಬಿಡಿಸಲು ಸದ್ಯಕ್ಕೆೆ ಕೂಲಿಕಾರ್ಮಿಕರಂತೂ ಸಿಗುತ್ತಲೇ ಇಲ್ಲಘಿ. ಹೀಗಾಗಿ ಪಕ್ಕದ ಊರಿನವರನ್ನು ಬಾಡಿಗೆಯ ಟಂಟಂ, ಟಾಟಾಏಸ್ ವಾಹನದಲ್ಲಿ ಹೊಲಕ್ಕೆೆ ಕರೆದು ತಂದರೂ ಕೂಲಿಕಾರರ ಷರತ್ತುಗಳಿಗೆ ಹೂಂ ಗುಟ್ಟದೆ ಬೇರೆ ದಾರಿಯೇ ಇಲ್ಲ ಎಂಬಂತಾಗಿದೆ.
ಪಕ್ಕದ ತಾಲೂಕುಗಳ ಹಳ್ಳಿಿಯ ಜನರ, ತೆಲಂಗಾಣ, ಆಂಧ್ರ ಗಡಿ ಭಾಗದ ಗ್ರಾಾಮಗಳಲ್ಲಿನ ಕೂಲಿಕಾರ್ಮಿಕರ ಕರೆ ತರುವ ಹರಸಾಹಸಕ್ಕೆೆ ಇಳಿದಿದ್ದುಘಿ. ಕೂಲಿಕಾರರು ಕೇಳಿದಷ್ಟು ಕೂಲಿ ಕೊಡುವ ಅನಿವಾರ್ಯತೆಗೆ ರೈತರು ಸಿಲುಕಿದ್ದಾಾರೆ. ಕೂಲಿ ಕೊಡಲಾಗದು ಎಂದು ಕಾಯಬೇಕೆಂದರೆ ನೀರು ಹೊತ್ತ ಮೋಡದಿಂದ ಯಾವಾಗ ಮಳೆ ಭೂಮಿಗೆ ಇಳಿಯುತ್ತದೊ ಎನ್ನುವ ಆತಂಕಕ್ಕೆೆ ನಷ್ಟವಾದರೂ ದುಪ್ಪಟ್ಟು ಕೂಲಿ ನೀಡಿ ಹತ್ತಿಿ ಬಿಡಿಸಿ ಗುಡ್ಡೆೆ ಹಾಕಿಕೊಳ್ಳುವ ಸಂಕಟಕ್ಕೆೆ ಸಿಲುಕಿದ್ದಾಾರೆ.
ಹೆಚ್ಚಿಿದ ಡಿಮಾಂಡ್ :
ರಾಯಚೂರು ಜಿಲ್ಲೆೆಯಲ್ಲಿ ಹೆಚ್ಚಿಿನ ರೈತರು ಹತ್ತಿಿ ಬೆಳೆದಿದ್ದು ಸುಮಾರು 1 ಲ 50 ಸಾವಿರ ಎಕರೆಯಲ್ಲಿ ಹತ್ತಿಿಯದ್ದೆೆ ಸದ್ದು ಇದೆ.
ಕೂಲಿಕಾರರು ಸಿಗದ ಕಾರಣದಿಂದಾಗಿ ಕೂಲಿಕಾರರು ಮಾತ್ರ ದಿನದ ಕೂಲಿಹಣಕ್ಕೆೆ ಬರುತ್ತಿಿಲ್ಲಘಿ. ದಿನದ ಕೂಲಿ ಕೇವಲ 300-400 ರೂಗಳಿದೆ. ಆದರೆ, ಕೂಲಿಕಾರರು ತೂಕಕ್ಕೆೆ ಮಾತ್ರ ಹತ್ತಿಿ ಬಿಡಿಸುವ ಷರತ್ತು ಹಾಕುತ್ತಿಿದ್ದಾಾರೆ.ಇದರಿಂದಾಗಿ ಪ್ರತಿ ಕೆಜಿಗೆ 12 ರೂ ನಿಂದ 15 ರೂಗಳಂತೆ ಹತ್ತಿಿ ಬಿಡಿಸಲು ಒಪ್ಪುುತ್ತಿಿದ್ದಾಾರೆ. ಇದರಲ್ಲೂ ಎರಡು ದರ ಇರುವುದಾಗಿ ರೈತರು ಹೇಳುತ್ತಿಿದ್ದಾಾರೆ.
ಕೇವಲ ಹತ್ತಿಿ ಬಿಡಿಸಿ ಖಾಲಿ ಚೀಲ ರೈತರು ಅವರ ಬಳಿ ತೆಗೆದುಕೊಂಡು ಹೋದರೆ 12ರಿಂದ 13 ರೂ.ಕೆಜಿಯಂತೆ, ಕೂಲಿಕಾರರೆ ಹತ್ತಿಿ ಬಿಡಿಸಿ ಚೀಲ ತುಂಬಿ ಒಂದು ಕಡೆ ತಂದು ಇಡಬೇಕಾದರೆ 13 ರಿಂದ 15 ರೂಗೆ ಪ್ರತಿ ಕೆಜಿಯಂತೆ ಬಿಡಿಸಲು ಷರತ್ತು ಹಾಕುತ್ತಿಿದ್ದಾಾರಂತೆ.
ಹೀಗಾಗಿ, ಕೆಲವರು ಪುರುಷ ಕೂಲಿಕಾರರನ್ನಿಿರಿಸಿಕೊಂಡು ಪ್ರತಿ ಕೆಜಿಗೆ 12 ರಿಂದ 13 ರೂ ನೀಡುತ್ತಿಿದ್ದರೆ, ಆಳುಗಳು ಸಿಗದವರು ಅನಿವಾರ್ಯವಾಗಿ ಕೂಲಿಕಾರರ ಷರತ್ತಿಿಗೆ ಒಪ್ಪಿಿಕೊಳ್ಳುವಂತಾಗಿದೆಯಂತೆ.
ಪ್ರತಿಯೊಬ್ಬರು ಕನಿಷ್ಠ 40 ರಿಂದ 60 ಕೆಜಿ ಹತ್ತಿಿ ಬಿಡಿಸುತ್ತಿಿದ್ದು ಅಂದಿನ ಮೊತ್ತ ಅಂದೇ ಕೈಗಿಟ್ಟರೂ ಮರುದಿನ ಅಷ್ಟೇ ಕೂಲಿಕಾರರು ಬರುವ ನಂಬಿಕೆ ಇಲ್ಲದಂತಿದೆ. ಹೆಚ್ಚಿಿನ ಹತ್ತಿಿ ಜಮೀನಿನಲ್ಲಿ ಕಾಣದಿದ್ದರೆ ಮರು ದಿನ ಆ ಕೂಲಿಕಾರರು ಮತ್ತೊೊಬ್ಬರ ಜಮೀನಿಗೆ ಹೋಗುವ ಮೂಲಕ ಈ ರೈತನಿಗೆ ನಷ್ಟದ ಸಮಸ್ಯೆೆ ತಂದೊಡ್ಡುತ್ತಿಿದ್ದಾಾರೆ. ಹೀಗಾಗಿ, ಕೆಲ ರೈತರೂ ಸಹ ಜಾಗೃತರಾಗಿ ಇಂದಿನ ಹಣ ನಾಳೆಗೆ ಕೊಡುವುದನ್ನು ರೂಢಿಸಿಕೊಂಡಿದ್ದಾಾರೆನ್ನುವ ಮಾತು ಇದೆ.
ಮೋಡಗಳ ಹೋಯ್ದಾಾಟ :
ಕಳೆದೊಂದು ವಾರದಿಂದಲೂ ಬಿಸಿಲು-ನೆರಳಿನ ಆಟಕ್ಕೆೆ ಹತ್ತಿಿ ಬೆಳೆದ ರೈತರು ದುಗುಢಗೊಂಡಿದ್ದು ಯಾವಾಗ ಬಿಸಿಲು ಬೀಳುತ್ತದೊ, ಯಾವಾಗ ಮೋಡ ಕವಿದು ಮಳೆ ಬರುತ್ತದೊ ತಿಳಿಯದಂತಾಗಿ ಹೋಗಿದೆ.
ಈಗಾಗಲೇ ಹೆಚ್ಚಿಿನ ಮಳೆ ಸುರಿದ ಕಾರಣ ಇದ್ದ ಕಾಯಿ ಕೊಳೆತಿದ್ದು ಹತ್ತಿಿಯೂ ಕಂದು ಬಣ್ಣಕ್ಕೆೆ ತಿರುಗಿದೆ. ಇದ್ದ ಲ ಉದುರುವಂತಾಗಿದ್ದರೆ ಬಿಸಿಲು ಇಲ್ಲದೆ ಮಳೆಯ ಕಾರಣಕ್ಕೆೆ ಹತ್ತಿಿ ಸರಿಯಾಗಿ ಅರಳುತ್ತಿಿಲ್ಲ. ಇದರಿಂದಾಗಿ ಈ ಬಾರಿಯ ಉತ್ತಮ ಇಳುವರಿಯ ನಿರೀಕ್ಷೆೆ ಹುಸಿಯಾದಂತಾಗಿದೆ.
ಸಿಗದ ಬೆಲೆ :
ಜಮೀನಿನಲ್ಲಿ ಹತ್ತಿಿ ಬಿಡಿಸಿ ರಾಯಚೂರಿನ ಮಾರುಕಟ್ಟೆೆಗೆ ತಂದು ಮಾರಾಟ ಮಾಡುವ ರೈತರಿಗೆ ಬೆಲೆಯ ಚಿಂತೆ ಕಾಡುತ್ತಿಿದೆ. ಪ್ರತಿ ಕ್ವಿಿಂಟಾಲ್ ಹತ್ತಿಿಗೆ ಕಳೆದೊಂದು ತಿಂಗಳಿಂದಲೂ ಕನಿಷ್ಠ 6 ಸಾವಿರದಿಂದ 7900 ರೂಗಳವರೆಗೆ ನಿಗದಿಯಾಗಿದೆ. ಆದರೆ ಈ ಬೆಲೆ ಸ್ಥಿಿರವಾಗಿಲ್ಲ ಎನ್ನುವ ಅಸಮಾಧಾನ ರೈತರಲ್ಲಿದೆ.
ಮಾಡಿದ ಖರ್ಚಿಗೂ, ಸಿಗುವ ಬೆಲೆಗೂ ಅಜಗಜಾಂತರ ವ್ಯತ್ಯಾಾಸವಿದ್ದು ಬೆಳೆ ಬೆಳೆದೆ ನಾನೊಬ್ಬ ರೈತ ಎಂದು ಹೇಳಿಕೊಳ್ಳಲು ಮಾತ್ರ ಎನ್ನುವಂತಾಗಿದೆ ರೈತರ ದುಸ್ಥಿಿತಿ. ಮಾರುಕಟ್ಟೆೆಯಲ್ಲಿ ಕನಿಷ್ಠ ಕ್ವಿಿಂಟಾಲ್ಗೆ 10 ಸಾವಿರದಷ್ಟಾಾದರೂ ದರ ಇದ್ದಿದ್ದರೆ ಈಗಿನ ಸ್ಥಿಿತಿಯಲ್ಲಿ ಮಾಡಿದ ಖರ್ಚಾದರೂ ಬರುತ್ತಿಿತ್ತು ಎಂಬುದು ರೈತರ ಮಾತು.
ಒಟ್ಟಾಾರೆ, ಹತ್ತಿಿ ಬೆಳೆದ ರೈತರ ಸ್ಥಿಿತಿ ಅತ್ತ ಧರಿ (ಸಾಲ) ಇತ್ತ ಪುಲಿ (ಬಡ್ಡಿಿ) ಎನ್ನುವಂತಾಗಿದ್ದಂತೂ ಸುಳ್ಳಲ್ಲಘಿ.
ಆರಂಭದಲ್ಲಿ ಆದ ಮಳೆ, ಬೆಳೆದ ಹತ್ತಿಿ ನೋಡಿ ಖುಷಿಯಾಗಿತ್ತುಘಿ. ಆದರೆ, ನಿರಂತರ ಮಳೆಯಿಂದಾಗಿ ಭ್ರಮನಿರಸನಗೊಳ್ಳುವಂತಾಗಿದೆ. ಕೂಲಿಕಾರರು ಸಿಗುತ್ತಿಿಲ್ಲಘಿ, ಸಿಕ್ಕರೂ ಅವರು ಕೇಳಿದಷ್ಟು ಕೂಲಿ ಕೊಡುವ ಅನಿವಾರ್ಯತೆಗೆ ಸಿಲುಕಿದ್ದೇವೆ. ಬರುತ್ತಿಿರುವ ಇಳುವರಿ ಚಿಂತೆಗೀಡು ಮಾಡಿದೆ. ಮಾರುಕಟ್ಟೆೆಯಲ್ಲಿ ಕ್ವಿಿಂಟಾಲ್ಗೆ ಕನಿಷ್ಟ 9 ರಿಂದ 10 ಸಾವಿರ ಇದ್ದರೂ ಮಾಡಿದ ಖರ್ಚು ಬಂದು ಪಾರಾಗುತ್ತಿಿದ್ದೆೆವು. ಈಗಿನ ದರ ಸಾಲದಿಂದ ಮೇಲೇಳುವುದೇ ಕಷ್ಟ ಇದೆ. ಸರ್ಕಾರ ಬೆಳೆ ವಿಮೆ ವಿತರಿಸಬೇಕು, ನಷ್ಟ ಪರಿಹಾರ ವಿತರಿಸಿ ಪಾರು ಮಾಡಬೇಕು.
— ಎಚ್.ವೀರೇಶ ಖಾನಾಪೂರು, ಕೆ.ತಿಮ್ಮಪ್ಪ ಮರ್ಚೆಟ್ಹಾಾಳ ಹಾಗೂ ರಮೇಶ ಮೂಡಲದಿನ್ನಿಿಘಿ. ಹತ್ತಿಿ ಬೆಳೆದ ರೈತರು
* ಮೋಡ ಹೋಯ್ದಾಾಟ ನಿಲ್ಲುತ್ತಿಿಲ್ಲ * ಕೆಜಿಗೆ 12ರಿಂದ 15 ರೂ ನಿಗದಿ ಹತ್ತಿಿಗೆ ಇಲ್ಲ ಬೆಲೆ, ಕೂಲಿಕಾರರಿಗೆ ದರದ ಸೆಲೆ..!
