ಸುದ್ದಿಮೂಲ ವಾರ್ತೆ ಬೆಂಗಳೂರು, ಅ.19:
ಕೈಯಲ್ಲಿ ದೊಣ್ಣೆೆ ಹಿಡಿದು ಜನರಲ್ಲಿ ಭಯ ಹುಟ್ಟಿಿಸಬಹುದೇ ಹೊರತು ಭರವಸೆ ಮೂಡಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆೆಸ್ನ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆೆ ಮಾಹಿತಿ ಹಂಚಿಕೊಂಡಿರುವ ಅವರು, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ತಿರುಗೇಟು ನೀಡಿದ್ದಾರೆ. ದೇಶದ ಜನರಲ್ಲಿ ಆತವಿಶ್ವಾಾಸ, ಧೈರ್ಯ, ಭರವಸೆ ಮೂಡಿಸಿರುವುದು ಬಾಬಾ ಸಾಹೇಬರು ನೀಡಿರುವ ಸಂವಿಧಾನದಿಂದ ಮಾತ್ರ. ಪಥ ಸಂಚಲನ ಸಾಗುವ ದ್ವೇಷದ ಬೀದಿಯಲ್ಲಿ ಪ್ರೀತಿ ಹುಟ್ಟುವುದಾದರೂ ಹೇಗೆ? ದೊಣ್ಣೆೆ, ಲಾಠಿ, ಬೂಟಿನ ಪಥ ಸಂಚಲನದಿಂದ ಸಮಾಜದಲ್ಲಿ ಭಯ, ದ್ವೇಷದ ವಾತಾವರಣ ಸೃಷ್ಟಿಿಸಲಾಗುತ್ತಿಿದೆ ಎಂದಿದ್ದಾರೆ.
ಪಥ ಸಂಚಲನದ ಉದ್ದೇಶವೇ ಭಯದ ವಾತಾವರಣದ ನಿರ್ಮಾಣ ಎನ್ನುವುದು ಸ್ಪಷ್ಟ. ಆರ್.ಎಸ್.ಎಸ್ ಪೇಯ್ಡ್ ಸಂಘಟನೆಯಲ್ಲ ಎಂದಾದರೆ ದೇಶ-ವಿದೇಶಿ ಮೂಲದಿಂದಲೂ ಹರಿದು ಬರುತ್ತಿಿರುವ ಹಣಕ್ಕೆೆ ಹೊಣೆ ಯಾರು? ಸಮಾಜ ಸೇವೆ ಮಾಡಲು ಆರ್.ಎಸ್.ಎಸ್ ಸರ್ಕಾರಿ ಸಂಸ್ಥೆೆಯೂ ಅಲ್ಲ, ಸರ್ಕಾರೇತರ ಸಂಸ್ಥೆೆಯೂ ಅಲ್ಲ, ಕನಿಷ್ಠ ಪಕ್ಷ ನೋಂದಾವಣಿಯೂ ಆಗಿಲ್ಲ. ಹಾಗಾದರೆ ಇದೊಂದು ಭೂಗತ ಸಂಘಟನೆ ಅಲ್ಲವೇ? ಎಂದು ಪ್ರಶ್ನಿಿಸಿದ್ದಾರೆ.
ವಿದೇಶದಿಂದ ಆರ್ಎಸ್ಎಸ್ಗೆ ಮಾತ್ರ ಹಣ ಬರಲಿ ಎಂಬ ಕಾರಣಕ್ಕಾಾಗಿಯೇ ಅಲ್ಲವೇ ಎನ್.ಜಿ.ಓ.ಗಳಿಗೆ ವಿದೇಶಿ ಂಡ್ ಬರುವುದನ್ನು ನಿಲ್ಲಿಸಿರುವುದು. ನೂರು ವರ್ಷದ ಇತಿಹಾಸದಲ್ಲಿ ದೊಣ್ಣೆೆ ಹಿಡಿದು ಸಾಗಿರುವ ಪಥ ಸಂಚಲನದಿಂದ ಸಮಾಜಕ್ಕೆೆ ಆಗಿರುವ ಲಾಭವೇನು? ಎಂದು ಕಿಡಿಕಾರಿದ್ದಾರೆ.
ಹಾದಿ ಬೀದಿಯಲ್ಲಿ ದೊಣ್ಣೆೆ ಹಿಡಿದು ಶಾಂತಿ-ಸುವ್ಯವಸ್ಥೆೆಯನ್ನು ಹಾಳು ಮಾಡಿದ್ದೇ ಸಾಧನೆಯೇ? ದೊಣ್ಣೆೆ ಜನರ ಕೈಗೆ ಸಿಕ್ಕಿಿ ಬಡಿಸಿಕೊಳ್ಳಬೇಡಿ, ಬೇಗ ಎಚ್ಚೆೆತ್ತುಕೊಳ್ಳದಿದ್ದರೆ ಸಂಘಕ್ಕೆೆ ಉಳಿಗಾಲವಿಲ್ಲ ಎಂದು ಅವರು ಹೇಳಿದ್ದಾರೆ.