ಸುದ್ದಿಮೂಲ ವಾರ್ತೆ ಸಿರವಾರ, ಅ.19:
ಕೇಂದ್ರ ಸರ್ಕಾರದ ಬುಡುಕಟ್ಟು ವ್ಯವಹಾರಗಳ ಸಚಿವಾಲಯ ನವದೆಹಲಿ ವತಿಯಿಂದ ಆದಿ ಕರ್ಮಯೋಗಿ ಅಭಿಯಾನದಡಿ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ರಾಯಚೂರು ಜಿಲ್ಲೆಗೆ ಉತ್ತಮ ಸ್ಪಂದನ ಕಾರ್ಯಕ್ಷಮತೆ ಪ್ರಶಸ್ತಿಿ ಪತ್ರ ಲಭ್ಯಸಿದೆ ಎಂದು ಪರಿಶಿಷ್ಟ ಪಂಗಡ ಕಲ್ಯಾಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಮಹಾಲಿಂಗಪ್ಪ ಇಂಗಳದಾಳ ತಿಳಿಸಿದರು.
ಅವರು ಶನಿವಾರ ಸುದ್ದಿಮೂಲ ಜೊತೆ ಮಾಹಿತಿ ಹಂಚಿಕೊಂಡಿದ್ದು, ಈ ಕಾರ್ಯ ಸಾಧನೆಗೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಮಾನ್ವಿಿ ಅಖಂಡ ತಾಲೂಕಿನ ಎಲ್ಲಾ ತಹಸೀಲ್ದಾಾರರು ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹಾಗೂ ಎಲ್ಲಾ ಏಳು ಇಲಾಖೆಗಳ , ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಿ ಇಲಾಖೆ, ಗ್ರಾಾಮೀಣ ಅಭಿವೃದ್ಧಿಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆ, ಅರಣ್ಯ ಇಲಾಖೆ, ಗ್ರಾಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗಳ ತಾಲೂಕ ಮಟ್ಟದ ಅಧಿಕಾರಗಳು ಹಾಗೂ ಕ್ಷೇತ್ರ ಮಟ್ಟದ ಸಿಬ್ಬಂದಿಗಳು ಹಾಗೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹರಿಸಿದ ಮಾನ್ವಿಿ ಅಖಂಡ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಸಹಕರಿಸಿದ್ದಾಾರೆ ಎಂದು ಅವರು ಅಭಿನಂದನೆಗಳು ತಿಳಿಸಿದರು.