ಸುದ್ದಿಮೂಲ ವಾರ್ತೆ ರಾಯಚೂರು, ಅ.19:
ಮಾನ್ವಿಿ ತಾಲೂಕಿನ ಕುರ್ಡಿ ಹಾಗೂ ಬುರ್ಹಾಾನಪೂರ ಗ್ರಾಾಮದ ಸರ್ಕಾರಿ ಭೂಮಿಗಳಲ್ಲಿ ಸಾಗುವಳಿ ಮಾಡುವವರಿಗೆ ಪಂಚನಾಮೆ ಮಾಡಬೇಕು, ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಮಾನ್ವಿಿ ತಾಲೂಕು ಅಖಿಲ ಭಾರತ ಕಿಸಾನ್ ಸಂಘಟನೆ ಒತ್ತಾಾಯಿಸಿದೆ.
ವಿಧಾನ ಪರಿಷತ್ ಶಾಸಕ ಎ.ವಸಂತಕುಮಾರ ಅವರಿಗೆ ಸಮಿತಿ ನೇತೃತ್ವದಲ್ಲಿ ಭೂಹೀನ, ನಿವೇಶನ ರಹಿತರು ಮನವಿ ಸಲ್ಲಿಸಿದರು. ಕುರ್ಡಿಯ ಸರ್ವೆ ನಂ 310/*/ರಲ್ಲಿರುವ 17 ಎ. 33 ಗುಂಟೆ ಹಾಗೂ 297/*/2ರ 7 ಎ 39 ಗು, ಸರ್ವೆ ನಂ. 955/*/* ರ 18 ಎಕರೆ 13 ಗುಂ., ಸರ್ವೆ ನಂ 306/*/*ರ 10 ಎ 29 ಗುಂಟೆ , ಸರ್ವೆ ನಂ. 83/*/* ರ ಒಟ್ಟು 8 ಎಕರೆ 37 ಗುಂಟೆ ಭೂಮಿಯಲ್ಲಿ ಬಡ ರೈತರು ಹಲವಾರು ವರ್ಷಗಳಿಂದ ಅಕ್ರಮ ಸಕ್ರಮ ಅಡಿಯಲ್ಲಿ ಸಾಗುವಳಿ ಮಾಡುತ್ತಿಿರುವ ಭೂಹೀನ 34 ಜನ ಬಡವರ ಸಾಗುವಳಿ ಭೂಮಿಯನ್ನು ಅನ್ಯಾಾಯವಾಗಿ ಕೆಲವರು ಕಸಿದುಕೊಳ್ಳಲು ಮುಂದಾಗಿದ್ದಾಾರೆ ಎಂದು ದೂರಿದರು. ಭೂಮಿ ಸಾಗುವಳಿಯಲ್ಲಿ ನಿಜವಾಗಿ ಯಾರಿದ್ದಾರೆ ಎಂಬುವುದನ್ನು ಗುರುತಿಸಲು ಪಂಚನಾಮೆ ನಡೆಸುವಂತೆ ಕೋರಿದರೂ ಯಾವುದೇ ಕ್ರಮ ಇಲ್ಲದಂತಾಗಿದೆ ಎಂದು ದೂರಿದರು. ಅಲ್ಲದೆ, ಬುರ್ಹಾಾನಪೂರು ಗ್ರಾಾಮದಲ್ಲಿನ ಸರ್ಕಾರಿ ಭೂಮಿಯಲ್ಲಿ ಅನೇಕ ವರ್ಷಗಳಿಂದ ವಾಸ ಇರುವವರ ತೆರವುಗೊಳಿಸುವ ಹುನ್ನಾಾರ ನಡೆಯುತ್ತಿಿದ್ದು ಅರ್ಹ ಬಡವರ ನಿವೇಶನ ರಹಿತ ಬಡವರ ಗುರುತಿಸಿ ಅವರಿಗೆ ಹಂಚಿಕೆ ಮಾಡಲು ಕೋರಿದರು.
ಮನವಿ ಆಲಿಸಿದ ಶಾಸಕ ವಸಂತಕುಮಾರ್ ಅವರು ಮಾನ್ವಿಿ ತಹಶೀಲ್ದಾಾರರಿಗೆ ಕರೆ ಮಾಡಿ ಮಾಹಿತಿ ಪಡೆದರು ಅಲ್ಲದೆ, ವಾಸ್ತವ ಸ್ಥಿಿತಿ ಪರಿಶೀಲಿಸಲು ಸೂಚಿಸಿದರು. ಬಡವರನ್ನು ಯಾವುದೆ ಕಾರಣಕ್ಕೂ ಒಕ್ಕಲೆಬ್ಬಿಿಸದಂತೆಯೂ ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಮುದುಕಪ್ಪಘಿ ಸೇರಿದಂತೆ ರೈತರು, ಮಹಿಳೆಯರಿದ್ದರು.
* ಎಂಎಲ್ಸಿ ವಸಂತಕುಮಾರ ಭೇಟಿಯಾದ ಕುರ್ಡಿ ರೈತರು ಸರ್ಕಾರಿ ಜಮೀನು ಉಳುವವರ ಒಕ್ಕಲೆಬ್ಬಿಿಸದಂತೆ ಒತ್ತಾಾಯ
