ಸುದ್ದಿಮೂಲ ವಾರ್ತೆ ಪಾಟ್ನಾಾ, ಅ.20:
ಬಿಹಾರ ಚುನಾವಣೆ ಒಂದು ಕಡೆ ರಂಗು ಪಡೆದುಕೊಳ್ಳುತ್ತಿಿದ್ದರೆ ಮಹಾಘಟಬಂಧನ ಮೈತ್ರಿಿಕೂಟ ಆರ್ಜೆಡಿ ಮತ್ತು ಕಾಂಗ್ರೆೆಸ್ ಮಧ್ಯೆೆ ಸೀಟು ಹಂಚಿಕೆ ಒಪ್ಪಂದ ಒಮ್ಮತಕ್ಕೆೆ ಬಾರದೆ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿಿವೆ.
ದೇಶದ ರಾಜಕಾರಣದ ಮೇಲೆಯೇ ಪರಿಣಾಮ ಬೀರಬಹುದು ಎನ್ನುವ ಮಹತ್ವ ಪಡೆದ ಬಿಹಾರ ಚುನಾವಣೆಗೆ ನ.6 ಮತ್ತು 11ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ನ.14ರಂದು ಲಿತಾಂಶ ಹೊರಬೀಳುತ್ತದೆ. ಈ ಮಧ್ಯೆೆ ಪ್ರಮುಖ ವಿರೋಧ ಪಕ್ಷವಾದ ಆರ್ಜೆಡಿ ಮತ್ತು ಕಾಂಗ್ರೆೆಸ್ ಮೈತ್ರಿಿಕೂಟದ ಪಕ್ಷಗಳಲ್ಲಿ ಇನ್ನೂ ಸೀಟು ಒಪ್ಪಂದ ಆಗದಿರುವುದು ಕಾರ್ಯಕರ್ತರನ್ನು ಗೊಂದಲಕ್ಕೀಡು ಮಾಡಿದೆ.
ಕಾಂಗ್ರೆೆಸ್ ಮತ್ತು ಆರ್ಜೆಡಿ ಕಳೆದ ತಿಂಗಳು ನಡೆಸಿದ್ದ ‘ವೋಟರ್ ಅಧಿಕಾರ ಯಾತ್ರೆೆ’ ವೇಳೆ ಮೈತ್ರಿಿಕೂಟದಲ್ಲಿ ಕಂಡುಬಂದಿದ್ದ ಸೌಹಾರ್ದತೆ ಎರಡೂ ಪಕ್ಷಗಳಿಗೆ ಹೊಸ ಚೈತನ್ಯ ನೀಡಿದ್ದಂತೆ ಕಂಡಿತ್ತು. ಆದರೆ, ಟಿಕೆಟ್ ಹಂಚಿಕೆ ಮಾತುಕತೆ ಆರಂಭವಾದಾಗಿನಿಂದ ಈ ಸೌಹಾರ್ದತೆಯಲ್ಲಿ ಬಿರುಕು ಮೂಡುತ್ತಾಾ ಬಂದಿದೆ. ಮೊದಲ ಹಂತದ 121 ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆಯ ಕೊನೆಯ ದಿನವಾದ ಅ.17ರವರೆಗೂ ಸೀಟು ಹಂಚಿಕೆ ಒಪ್ಪಂದ ಆಗದ ಕಾರಣ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಟಿಕೆಟ್ ಹಂಚಿಕೆ ಮಾಡಿದ್ದವು.
ಈಗ ಎರಡನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇಂದು ಭಾನುವಾರ ಕೊನೆಯ ದಿನವಾಗಿತ್ತು. ನಾಮಪತ್ರ ಸಲ್ಲಿಕೆಯ ಅವಧಿ ಬಾಕಿ ಇರುವ ಕೆಲವೇ ಗಂಟೆಗಳ ಮೊದಲು ಆರ್ಜೆಡಿ ಬಾಕಿ ಇರುವ ಎಲ್ಲಾ 143 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದೆ. ಇದರಲ್ಲಿ 24 ಮಂದಿ ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. ಆರ್ಜೆಡಿ ನಾಯಕ ತೇಜಸ್ವಿಿ ಯಾದವ್ ವೈಶಾಲಿ ಜಿಲ್ಲೆಯ ರಾಘೋಪುರ ವಿಧಾನಸಭಾ ಸ್ಥಾಾನದಿಂದ ಸ್ಪರ್ಧಿಸಲಿದ್ದಾರೆ.
ಇಂದು ಆರ್ಜೆಡಿ ಪ್ರಕಟಿಸಿರುವ ಸೀಟುಗಳ ಪೈಕಿ ಕಾಂಗ್ರೆೆಸ್ ಈಗಾಗಲೇ ಪ್ರಕಟಿಸಿರುವ ಕೆಲವು ಕ್ಷೇತ್ರಗಳೂ ಸೇರಿವೆ. ಮುಖ್ಯವಾಗಿ ಬಿಹಾರ ಕಾಂಗ್ರೆೆಸ್ ಅಧ್ಯಕ್ಷ ರಾಜೇಶ್ಕುಮಾರ್ ರಾಮ್ ಸ್ಪರ್ಧಿಸುವ ಕುಟುಂಬ ವಿಧಾನಸಭಾ ಕ್ಷೇತ್ರದಲ್ಲಿಯೂ ಸಹ ಆರ್ಜೆಡಿ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿರುವುದರಿಂದ ಇದು ಮೈತ್ರಿಿ ಮೇಲೆ ಯಾವ ಪರಿಣಾಮ ಮೂಡಿಸಬಹುದು ಎಂದು ಕಾರ್ಯಕರ್ತರನ್ನು ಗೊಂದಲಕ್ಕೀಡು ಮಾಡಿದೆ.
ಬಿಡುಗಡೆ ಮಾಡಿರುವ ಪಟ್ಟಿಿ ಅನುಸಾರ ಮಾಜಿ ಉಪ ಮುಖ್ಯಮಂತ್ರಿಿ ತೇಜಸ್ವಿಿ ಯಾದವ್ ರಾಘೋಪುರ್ ವಿಧಾನಸಭೆಯಿಂದ ಕಣಕ್ಕೆೆ ಇಳಿಯುತ್ತಿಿದ್ದಾರೆ. ಇನ್ನುಳಿದಂತೆ, ಛಾಪ್ರಾಾದಿಂದ ಭೋಜ್ಪುರಿ ಗಾಯಕ ಖೇಸರಿ ಲಾಲ್ ಯಾದವ್, ದರ್ಭಾಂಗಾ ಗ್ರಾಾಮೀಣ ಭಾಗದಿಂದ ಲಲಿತ್ ಯಾದವ್, ಬರೌಲಿಯಿಂದ ದಿಲೀಪ್ ಸಿಂಗ್, ಪಿರ್ಪೈಂಟಿಯಲ್ಲಿ ರಾಮ್ ವಿಲಾಸ್ ಪಾಸ್ವಾಾನ್ (ಎಸ್ಸಿಿ) ಮತ್ತು ಚಕೈಯಲ್ಲಿ ಸಾವಿತ್ರಿಿ ದೇವಿ ಕಣದಲ್ಲಿದ್ದಾರೆ.
ಬಿಹಾರಿಗಂಜ್ನಿಿಂದ ರೇಣು ಕುಶ್ವಾಾಹ, ಪರಿಹಾರದಿಂದ ಸ್ಮಿಿತಾ ಪುರ್ವೆ ಗುಪ್ತಾಾ, ವಾರ್ಸಾಲಿಗಂಜ್ನಿಂದ ಅನಿತಾ ದೇವಿ ಮಹತೋ, ಹಸನ್ಪುರದಿಂದ ಮಾಲಾ ಪುಷ್ಪಮ್ ಮತ್ತು ಮಧುಬನ್ ಕ್ಷೇತ್ರದಿಂದ ಸಂಧ್ಯಾಾ ರಾಣಿ ಕುಶ್ವಾಾಹ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.
ಕಾಂಗ್ರೆೆಸ್ 61 ಕ್ಷೇತ್ರಗಳಲ್ಲಿ ಸ್ಪರ್ಧೆ
ಮಹಾಘಟಬಂಧನ್ ಮೈತ್ರಿಿಕೂಟದ ಮಧ್ಯೆೆಯೂ ಕಾಂಗ್ರೆೆಸ್ ಇಂದು 6 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಬಿಹಾರ ವಿಧಾನಸಭೆಗೆ ಒಟ್ಟಾಾರೆ 61 ಅಭ್ಯರ್ಥಿಗಳನ್ನು ಕಣಕ್ಕಿಿಳಿಸಲು ಮುಂದಾಗಿದೆ.
243 ವಿಧಾನಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತ ಹಾಗೂ ಎರಡನೇ ಹಂತ ಸೇರಿ ಒಟ್ಟಾಾರೆ 61 ಅಭ್ಯರ್ಥಿಗಳನ್ನು ಕಾಂಗ್ರೆೆಸ್ ಕಣಕ್ಕಿಿಳಿಸಿದೆ.
ಈ ಮಧ್ಯೆೆ ಮಹಾಘಟಬಂಧನ ಮೈತ್ರಿಿಯ ಭಾಗವಾದ ಜಾರ್ಖಂಡ್ ಮುಕ್ತಿಿ ಮೋರ್ಚಾ (ಜೆಎಂಎಂ) ಕಣದಿಂದ ದೂರ ಉಳಿದಿದೆ. ಬಿಹಾರದಲ್ಲಿ ಪ್ರಮುಖ ಮೈತ್ರಿಿಪಕ್ಷಗಳಾದ ಆರ್ಜೆಡಿ ಮತ್ತು ಕಾಂಗ್ರೆೆಸ್ ಮಧ್ಯೆೆಯೇ ಸೀಟು ಹಂಚಿಕೆ ಒಮ್ಮತಕ್ಕೆೆ ಬಾರದೆ ಪ್ರತ್ಯೇಕವಾಗಿ ಕಣಕ್ಕಿಿಳಿದಿರುವುದರಿಂದ ತಾನು ಸ್ಪರ್ಧಿಸುವುದಿಲ್ಲ ಎಂದು ಜೆಎಂಎಂ ಪಕ್ಷದ ಪ್ರಮುಖರು ತಿಳಿಸಿದ್ದಾರೆ.