ಸುದ್ದಿಮೂಲ ವಾರ್ತೆ ರಾಯಚೂರು, ಅ.20:
ಸರ್ಕಾರಿ ಬಸ್ ಹಾಗೂ ಟ್ರ್ಯಾಾಕ್ಟರ್ ಮಧ್ಯೆೆ ನಡೆದ ರಸ್ತೆೆ ಅಪಘಾತದಲ್ಲಿ ಇಬ್ಬರು ಮಹಿಳೆಯರ ಕಾಲು ಕಟ್ ಆಗಿ, ಉಳಿದವರಿಗೆ ಗಾಯಗಳಾಗಿರುವ ದುರ್ಘಟನೆ ರಾಯಚೂರು ತಾಲೂಕಿನ ಸಾತ್ಮೈಲ್ ಬಳಿ ಸೋಮವಾರ ರಾತ್ರಿಿ ನಡೆದಿದೆ.
ಜಮೀನಲ್ಲಿ ಕೆಲಸ ಮಾಡಿ ಟ್ರ್ಯಾಾಕ್ಟರ್ನಲ್ಲಿ ಹತ್ತಿಿ ತುಂಬಿಕೊಂಡು ಉಣಿಶ್ಯಾಾಲಹುಡಾಕ್ಕೆೆ ಮರಳುತ್ತಿಿದ್ದಾಾಗ ಸರ್ಕಾರಿ ಬಸ್ ಡಿಕ್ಕಿಿ ಹೊಡೆದಿದ್ದು ಟ್ರಾಾಕ್ಟರ್ನಲ್ಲಿದ್ದ ಇಬ್ಬರು ಮಹಿಳೆಯರಿಗೆ ಕಾಲು ಕಟ್ ಆಗಿರುವುದಾಗಿ ಗೊತ್ತಾಾಗಿದೆ. ಉಳಿದ ನಾಲ್ಕೈದು ಮಹಿಳೆಯರಿಗೂ ಗಂಭೀರ ಗಾಯಗಳಾಗಿವೆ.
ಎಲ್ಲರನ್ನೂ ರಿಮ್ಸ್ ಆಸ್ಪತ್ರೆೆಗೆ ಚಿಕಿತ್ಸೆೆಗಾಗಿ ದಾಖಲಿಸಲಾಗಿದೆ. ಇಬ್ಬರ ಸ್ಥಿಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿಿದೆ. ರಾತ್ರಿಿ ಹೊತ್ತು ಅಪಘಾತವಾಗಿದ್ದರಿಂದ ಬಸ್ ಚಾಲಕನಿಗೆ ಮುಂದೆ ಟ್ರ್ಯಾಾಕ್ಟರ್ ಇರುವುದು ಕಾಣದೆ ಈ ದುರ್ಘಟನೆಯಾಗಿದೆ ಎಂಬ ಮಾತು ಕೇಳಿ ಬಂದಿವೆ. ಈ ಬಗ್ಗೆೆ ಇನ್ನಷ್ಟೆೆ ಗ್ರಾಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಬೇಕಾಗಿದೆ.
ಬಸ್-ಟ್ರ್ಯಾಾಕ್ಟರ್ ಮಧ್ಯೆೆ ಅಪಘಾತ, ಇಬ್ಬರ ಕಾಲು ಕಟ್
