ಸುದ್ದಿಮೂಲ ವಾರ್ತೆ ಹಾಸನ, ಅ.21:
ವರ್ಷದಲ್ಲಿ ಒಂದು ಬಾರಿ ಬಾಗಿಲು ತೆರೆಯುವ ಹಾಸನಾಂಬೆಯ ಉತ್ಸವಕ್ಕೆೆ ಅ. 23 ರಂದು ಮುಂಜಾನೆ 7 ಕ್ಕೆೆ ತೆರೆ ಬೀಳಲಿದ್ದು, ಸಾರ್ವಜನಿಕರ ದರ್ಶನಕ್ಕೆೆ ಕೊನೇ ದಿನವಾಗಿದೆ.
ಹಾಸನಾಂಬೆಯ ದರ್ಶನಕ್ಕೆೆ ಸಾಗರೋಪಾದಿಯಲ್ಲಿ ಭಕ್ತರು ಹರಿದು ಬರುತ್ತಿಿದ್ದು ಕಳೆದ 12 ದಿನಗಳಲ್ಲಿ ಬರೊಬ್ಬರಿ 23 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಅಕ್ಟೋೋಬರ್ 10 ರಿಂದ ಆರಂಭವಾಗಿರುವ ಸಾರ್ವಜನಿಕ ದರ್ಶನ ಅಕ್ಟೋೋಬರ್ 23 ಕೊನೆಯಾಗಲಿದೆ.
ಕಳೆದ 12 ದಿನಗಳಿಂದ ದೇಶದ ಮೂಲೆ ಮೂಲೆಗಳಿಂದ ಹರಿದು ಬಂದ ಭಕ್ತ ಸಾಗರ ಹಾಸನಾಂಬೆಯ ಆಶೀರ್ವಾದ ಪಡೆಯುತ್ತಿಿದ್ದಾರೆ. ದೀಪಾವಳಿ ಹಬ್ಬ ಹಿನ್ನೆೆಲೆಯಲ್ಲಿ 12ನೇ ದಿನವಾದ ಮಂಗಳವಾರ ಬೆಳಿಗ್ಗೆೆ ಭಕ್ತರ ಸಂಖ್ಯೆೆಯಲ್ಲಿ ಕಡಿಮೆಯಾಗಿತ್ತು. ಬೆಳಿಗ್ಗೆೆ ಖಾಲಿ ಖಾಲಿಯಾಗಿದ್ದ ಸರತಿ ಸಾಲುಗಳು ಮಧ್ಯಾಾಹ್ನದ ಹೊತ್ತಿಿಗೆ ಭರ್ತಿಯಾಗಿತ್ತು.
ವರ್ಷದಲ್ಲಿ ಒಮ್ಮೆೆ ಮಾತ್ರ ದರ್ಶನ ನೀಡುವ ಹಾಸನಾಂಬೆಯನ್ನ ಕಣ್ತುಂಬಿಕೊಳ್ಳಲು ಕೇವಲ ಕರ್ನಾಟಕ ರಾಜ್ಯ ಮಾತ್ರವಲ್ಲ ದೇಶದ ಹಲವು ರಾಜ್ಯಗಳಿಂದ ಭಕ್ತರು ಆಗಮಿಸುತ್ತಿಿದ್ದಾರೆ.
ಈ ಬಾರಿ ಒಂದು ಸಾವಿರ ರೂಪಾಯಿ ಟಿಕೆಟ್, 300 ರೂ. ಟಿಕೆಟ್ ಸೇರಿ 12 ದಿನಗಳಲ್ಲಿ ಈ ಬಾರಿ 20 ಕೋಟಿ ರೂ.ಗೂ ಅಧಿಕ ದಾಖಲೆಯ ಆದಾಯ ಬಂದಿದೆ ಎಂದು ದೇವಸ್ಥಾಾನದ ಮೂಲಗಳು ಹೇಳಿವೆ.