ಸುದ್ದಿಮೂಲ ವಾರ್ತೆ ಕಲಬುರಗಿ, ಅ.21:
ಸಾರ್ವಜನಿಕ ಹಿತಾಸಕ್ತಿಿಯಡಿ ಕೋರುವ ಮಾಹಿತಿಯನ್ನು ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ಮಾಹಿತಿ ಒದಗಿಸುವುದೇ ತಮ್ಮ ಪ್ರಥಮಾದ್ಯತೆಯಾಗಿರಲಿದೆ ಎಂದು ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ಮಾಹಿತಿ ಆಯುಕ್ತ ಬಿ. ವೆಂಕಟಸಿಂಗ್ ಅವರು ಹೇಳಿದರು.
ಇಲ್ಲಿನ ಕರ್ನಾಟಕ ಮಾಹಿತಿ ಆಯೋಗದ ಕಚೇರಿಯಲ್ಲಿ ಕಲಬುರಗಿ ಪೀಠದ ಮಾಹಿತಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಹಿತಿ ಅಧಿಕಾರಿಗಳಿಗೆ ದಂಡ ವಿಧಿಸುವ ಬದಲು ಸಾರ್ವಜನಿಕರಿಗೆ ಮಾಹಿತಿ ನೀಡುವ ಮೂಲಕ ನ್ಯಾಾಯ ಒದಗಿಸುವ ಕೆಲಸ ಪೀಠ ಮಾಡಲಿದೆ ಎಂದರು.
ಉತ್ತರದಾಯಿತ್ವದ ಹಿನ್ನೆೆಲೆಯಲ್ಲಿ 2005ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಮಾಹಿತಿ ಹಕ್ಕು ಕಾಯ್ದೆೆಯನ್ನು ಅದೇ ವರ್ಷ ರಾಜ್ಯದಲ್ಲಿ ಅನುಷ್ಠಾಾನ ಮಾಡುವ ಮೂಲಕ ಕಾಯ್ದೆೆ ಅನುಷ್ಠಾಾನಕ್ಕೆೆ ತಂದ ಮೊದಲ ರಾಜ್ಯ ಕರ್ನಾಟಕವಾಗಿದೆ. ಕಲಬುರಗಿ ಪೀಠದಲ್ಲಿ ಸುಮಾರು 7 ಸಾವಿರ ಅರ್ಜಿಗಳು ವಿಚಾರಣೆಗೆ ಬಾಕಿ ಇದ್ದು, ಇದನ್ನು ಹಂತ ಹಂತವಾಗಿ ವಿಲೇವಾರಿ ಮಾಡಲಾಗುವುದು ಎಂದರು.
ದೇಶದ ವಿವಿಧ ರಾಜ್ಯಕ್ಕೆೆ ಹೋಲಿಸಿದಾಗ ಮಹಾರಾಷ್ಟ್ರದಲ್ಲಿ 60 ಸಾವಿರ, ತಮಿಳುನಾಡಿನಲ್ಲಿ 51 ಸಾವಿರ ಅರ್ಜಿ ವಿಚಾರಣೆಗೆ ಬಾಕಿ ಇದ್ದರೆ, ರಾಜ್ಯದ ಮಾಹಿತಿ ಹಕ್ಕು ಆಯೋಗದಲ್ಲಿ 38 ಸಾವಿರ ಅರ್ಜಿಗಳಿವೆ. ಇತ್ತೀಚೆಗೆ ರಾಜ್ಯದಲ್ಲಿ ಹೊಸ ಆಯುಕ್ತರ ನೇಮಕಾತಿ ಆಗಿರುವುದರಿಂದ ಇದೀಗ ಅರ್ಜಿಗಳ ವಿಲೇವಾರಿ ವೇಗ ಪಡೆಯಲಿದೆ. ಪಾರದರ್ಶಕವಾಗಿ ಮತ್ತು ನ್ಯಾಾಯಸಮ್ಮತವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಆಯೋಗ ಹಿಂದಿನಗಿಂತ ಹೆಚ್ಚು ಕಾರ್ಯೋನ್ಮುಖವಾಗಿರಲಿದೆ ಎಂದರು.
ಕಳೆದ 2-3 ವರ್ಷಗಳಿಂದ ಕಲಬುರಗಿ ಪೀಠ ಶಾಶ್ವತವಾಗಿ ಕಲಬುರಗಿಯಲ್ಲಿ ಕಾರ್ಯನಿರ್ವಹಿಸುತ್ತಿಿದ್ದರೂ, ಪೀಠಕ್ಕೆೆ ಸ್ವಂತ ಕಟ್ಟಡ ಇಲ್ಲ. ಹೈಕೋರ್ಟ್ ಬಳಿ ಸಿ.ಎ. ಸೈಟ್ ಲಭ್ಯವಿರುವುದರಿಂದ ನಗರಾಭಿವೃದ್ಧಿಿ ಪ್ರಾಾಧಿಕಾರವನ್ನು ಸಂಪರ್ಕಿಸಿ ನಿವೇಶನ ಪಡೆದು ಸ್ವಂತ ಕಟ್ಟಡ ಹೊಂದಲು ಪ್ರಾಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಜಿಲ್ಲಾವಾರು ಕಾರ್ಯಾಗಾರ:
ಮಾಹಿತಿ ಹಕ್ಕು ಕಾಯ್ದೆೆ ಬಗ್ಗೆೆ ಹಲವು ಅಧಿಕಾರಿಗಳು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಹೀಗಾಗಿ ಅನಗತ್ಯ ಅರ್ಜಿ ವಿಲೇವಾರಿ ಮಾಡದೆ ಹಾಗೆ ಇಟ್ಟುಕೊಂಡಿದ್ದರಿಂದ ಮಲ್ಮನವಿಗಳ ಸಂಖ್ಯೆೆ ಹೆಚ್ಚುತ್ತಾಾ ಹೋಗುತ್ತದೆ. ಅರ್ಜಿ ಸಲ್ಲಿಸಿದ 30 ದಿನದೊಳಗೆ ಅರ್ಜಿದಾರನಿಗೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮಾಹಿತಿ ನೀಡದಿದ್ದಾಗ ಅರ್ಜಿದಾರ ಪ್ರಥಮ ಮೇಲ್ಮನವಿ ಪ್ರಾಾಧಿಕಾರದ ಮುಂದೆ ಹೋಗುತ್ತಾಾನೆ. ಅಲ್ಲಿಯೂ ಅವರಿಗೆ ಸಮರ್ಪಕ ಉತ್ತರ ಸಿಗದಿದ್ದಾಗ ಆಯೋಗದ ಕದ ತಟ್ಟುತ್ತಾಾರೆ. ಹೀಗಾಗಿ ಕಲಬುರಗಿ ಪೀಠಕ್ಕೆೆ ಒಳಪಡುವ ಕಲಬುರಗಿ ವಿಭಾಗದ ಏಳು ಜಿಲ್ಲೆಗಳ ಅಧಿಕಾರಿಗಳಿಗೆ ಕಾಯ್ದೆೆ ಬಗ್ಗೆೆ ಸಮರ್ಪಕ ಮಾಹಿತಿ ನೀಡಲು ಜಿಲ್ಲಾ ಮಟ್ಟದಲ್ಲಿ ಮಾಹಿತಿ ಹಕ್ಕು ಕಾಯ್ದೆೆ ಕುರಿತು ಕಾರ್ಯಾಗಾರ ಆಯೋಜಿಸಲಾಗುವುದು ಎಂದು ಆಯುಕ್ತ ಬಿ.ವೆಂಕಟಸಿಂಗ್ ತಿಳಿಸಿದರು.
ಧಿ ಸುದ್ದಿಮೂಲ ವಾರ್ತೆ ಕಲಬುರಗಿ, ಅ.21:
ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಕಲಬುರಗಿ ಪೀಠದ ನೂತನ ಆಯುಕ್ತರಾಗಿ ಬಿ.ವೆಂಕಟಸಿಂಗ್ ಅವರು ಮಂಗಳವಾರ ಕಲಬುರಗಿಯ ಆಯೋಗದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಕಲಬುರಗಿ ಪೀಠದ ಮಾಹಿತಿ ಆಯುಕ್ತರಾಗಿ ಬಿ.ವೆಂಕಟ ಸಿಂಗ್ ಅಧಿಕಾರ ಸ್ವೀಕಾರ ಸಾರ್ವಜನಿಕರಿಗೆ ಮಾಹಿತಿ ಒದಗಿಸುವುದೇ ತಮ್ಮ ಪ್ರಥಮಾದ್ಯತೆ-ಬಿ.ವೆಂಕಟ ಸಿಂಗ್
