ಸುದ್ದಿಮೂಲ ವಾರ್ತೆ ಕೊಪ್ಪಳ, ಅ.21:
ತೀವ್ರ ಸಂಚಲನ ಮೂಡಿಸಿದ್ದ ಕೊಪ್ಪಳ ಜಿಲ್ಲೆೆಯಲ್ಲಿ ಅಕ್ರಮ ಮರಳು ದಂಧೆ ಕುರಿತು ಸಿಎಂ ಆರ್ಥಿಿಕ ಸಲಹೆಗಾರ ಬಸವರಾಜ ರಾಯರಡ್ಡಿಿ ಪತ್ರಕ್ಕೆೆ ಅಧಿಕಾರಿಗಳ ಹೆಸರಿನಲ್ಲಿ ರಾಯರಡ್ಡಿಿಗೆ ಮನವಿ ಮಾಡಿರುವ ಪತ್ರದ ಆಧಾರದಲ್ಲಿ ಇಂದು ಗಣಿ ಭೂ ವಿಜ್ಞಾಾನ ಇಲಾಖೆ ಸಿಬ್ಬಂದಿ ಜೊತೆ ಹಿರಿಯ ಭೂ ವಿಜ್ಞಾಾನಿ ಪುಷ್ಪಲತಾ ಸಭೆ ನಡೆಸಿದ್ದಾಾರೆ.
ಜಿಲ್ಲೆೆಯಲ್ಲಿ ಅಕ್ರಮವಾಗಿ ಮರಳು ಸಾಗಾಟವಾಗುತ್ತಿಿದೆ. ಇದರಲ್ಲಿ ಗಣಿ ಭೂ ವಿಜ್ಞಾಾನ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾಾರೆ. ಈ ಹಿನ್ನೆೆಲೆಯಲ್ಲಿ ಇಲ್ಲಿಯ ಅಧಿಕಾರಿಗಳ ವರ್ಗಾವಣೆ ಮಾಡುವಂತೆ ಬಸವರಾಜ್ ರಾಯರೆಡ್ಡಿಿ ಮುಖ್ಯಮಂತ್ರಿಿಗಳಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆೆ ಅಧಿಕಾರಿಗಳ ಹೆಸರಿನಲ್ಲಿ ರಾಯರಡ್ಡಿಿಯವರಿಗೆ ಅಕ್ರಮದ ಬಗ್ಗೆೆ ಪತ್ರ ಬರೆದಿರುವುದು ಬಹಿರಂಗವಾಗಿತ್ತು. ಈ ಹಿನ್ನೆೆಲೆಯಲ್ಲಿ ಈ ಕುರಿತು ಇಂದು ಸಾಧಕ ಬಾಧಕಗಳ ಕುರಿತು ಅಧಿಕಾರಿಗಳ ಸಭೆ ನಡೆಸಲಾಯಿತು.
ಅಧಿಕಾರಿಗಳ ಹೆಸರಿನಲ್ಲಿ ಅನಾಮಧೇಯ ಪತ್ರದ ಕುರಿತು ವಿಚಾರವಾಗಿ ಸಿಬ್ಬಂದಿ ಜೊತೆ ಸಭೆ ಮಾಡಿದ ಪುಷ್ಪಲತಾರವರು ಗಣಿ ಇಲಾಖೆಯಿಂದಲೇ ಪತ್ರ ವೈರಲ್ ಆಗಿರೋ ಅನುಮಾನವಿದೆ. ಬಸವರಾಜ್ ರಾಯರೆಡ್ಡಿಿಗೆ ರಾಜಧನ,ಅಕ್ರಮದ ವಿಚಾರವಾಗಿ ಪ್ರಶ್ನೆೆ ಮಾಡಿದ್ದ ಅಧಿಕಾರಿಗಳ ತಂಡ ಅಧಿಕಾರಿಗಳ ಹೆಸರಲ್ಲಿ ವೈರಲ್ ಆಗಿರೋ ಪತ್ರವನ್ನು ಗಂಭೀರವಾಗಿ ತೆಗೆದುಕೊಂಡ ಗಣಿ ಇಲಾಖೆಯು ಈಗ ಸಭೆ ನಡೆಸಿದೆ.