ಸುದ್ದಿಮೂಲ ವಾರ್ತೆ ಬಸವಕಲ್ಯಾಾಣ, ಅ.21:
ಎರಡು ಕಾರುಗಳ ಮಧ್ಯೆೆ ಮುಖಾ-ಮುಖಿ ಡಿಕ್ಕಿಿಯಾಗಿ ಬೀದರ್ ಮೂಲದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಹಾರಾಷ್ಟ್ರದ ಮುರುಮ್ ತಾಲೂಕಿನ ದಾಳಿಂಬ ಗ್ರಾಾಮದ ಬಳಿ ಮಂಗಳವಾರ ಜರುಗಿದೆ.
ಬೀದರ್ ತಾಲೂಕಿನ ಖಾಶೆಂಪೂರ (ಪಿ) ಗ್ರಾಾಮದ ನಿವಾಸಿಗಳಾದ ರತಿಕಾಂತ ಮಾರುತಿ ಬಸಗೊಂಡ (30), ಶಿವಕುಮಾರ ಚಿತಾನಂದ ವಗ್ಗೆೆ (26), ಸಂತೋಷ ಬಜರಂಗ ಬಸಗೊಂಡ (20), ಸದಾನಂದ ಮಾರುತಿ ಬಸಗೊಂಡ (19) ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪ್ರಸಿದ್ಧ ಹುಲಜಂತಗಿಯ ಮಹಾಳಿಂಗರಾಯ ದೇವಸ್ಥಾಾನಕ್ಕೆೆ ತೆರಳಿ ದರ್ಶನ ಮುಗಿಸಿಕೊಂಡು ಮರಳಿ ಗ್ರಾಾಮಕ್ಕೆೆ ಬರುವಾಗ ದಾಳಿಂಬ ಬಳಿ ಎದುರಿನಿಂದ ಬಂದ ಮತ್ತೊೊಂದು ಕಾರು ಡಿಕ್ಕಿಿಯಾಗಿ ಘಟನೆ ಸಂಭವಿಸಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮತ್ತೊೊಬ್ಬ ಗಾಯಾಳುವಿಗೆ ಉಮ್ಮರ್ಗಾದ ಖಾಸಗಿ ಆಸ್ಪತ್ರೆೆಗೆ ದಾಖಲಿಸಿ, ಚಿಕಿತ್ಸೆೆ ಮುಂದುವರೆಸಲಾಗಿದೆ.
ಈ ಕುರಿತು ಮುರುಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.