ಸುದ್ದಿಮೂಲ ವಾರ್ತೆ ಕೊಪ್ಪಳ, ನ.02:
ಈ ಬಾರಿ ಉತ್ತಮ ಮಳೆಯಾಗಿದೆ. ಈ ಅವಧಿಯಲ್ಲಿ ಜಲಾಶಯದಲ್ಲಿ 80 ಟಿಎಂಸಿ ನೀರು ಇರುವ ಹಿನ್ನೆೆಲೆಯಲ್ಲಿ ಈ ಭಾಗದ ರೈತರು ಎರಡನೆಯ ಬೆಳೆಗೆ ನೀರು ನೀಡಿ ಎಂದು ಕೇಳುತ್ತಿಿದ್ದಾಾರೆ. ಆದರೆ ಈಗಾಗಲೇ ತೀರ್ಮಾನಿಸಿದಂತೆ ಒಂದೇ ಬೆಳೆಗೆ ನೀರು ಎನ್ನಲಾಗುತ್ತಿಿದೆ. ಈ ಕುರಿತು ಕಾಂಗ್ರೆೆಸ್ ,ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ರಾಜಕೀಯ ಕೆಸರೆರಚಾಟ ನಡೆಯುತ್ತಿಿದೆ.
ತುಂಗಭದ್ರಾಾ ಜಲಾಶಯದಲ್ಲಿ ಈ ಬಾರಿ ಒಟ್ಟು 407 ಟಿಎಂಸಿ ನೀರು ಹರಿದು ಬಂದಿದೆ. ಜಲಾಶಯದಿಂದ ನೀರಾವರಿಗಾಗಿ 88.248 ಟಿಎಂಸಿ ನೀರು ಬಳಕೆಯಾಗಿದೆ. ಅದರಲ್ಲಿ ರಾಜ್ಯದ ರೈತರು ನೀರಾವರಿಗಾಗಿ 68.752 ಟಿಎಂಸಿ ನೀರು ಬಳಕೆ ಮಾಡಿಕೊಂಡಿದ್ದಾಾರೆ. ಒಟ್ಟು 238 ಟಿಎಂಸಿ ನೀರು ನದಿಯ ಮೂಲಕ ಆಂಧ್ರ ಪ್ರದೇಶಕ್ಕೆೆ ಹರಿದು ಹೋಗಿದೆ.
ಜಲಾಶಯದಲ್ಲಿ ಈಗ 80 ಟಿಎಂಸಿ ನೀರು ಇರುವ ಕಾರಣಕ್ಕೆೆ ಜಲಾಶಯದಿಂದ ಮುಂದಿನ ಬೆಳೆಗೂ ನೀರು ನೀಡಬಹುದು. ಗೇಟ್ ಅಳವಡಿಕೆಗೆ ಮೂರು ತಿಂಗಳು ಅವಧಿ ಸಾಕು. ಆದರೆ ರಾಜ್ಯ ಸರಕಾರ ಹಾಗು ಟಿಬಿ ಬೋರ್ಡ್ 8 ತಿಂಗಳು ಅವಧಿ ನಿಗದಿ ಮಾಡಿದೆ. ಈಗಾಗಲೇ ಸೆಪ್ಟಂಬರ್ ತಿಂಗಳಿನಿಂದ ಇಲ್ಲಿಯವರೆಗೂ 3 ಗೇಟ್ ಅಳವಡಿಸಬೇಕಿತ್ತು. ಆದರೆ ಆಗಿಲ್ಲ ಡಿಸೆಂಬರ್ ಮೊದಲ ವಾರದಿಂದ ಮೇ ಅಂತ್ಯದವರೆಗೂ ಎಲ್ಲಾಾ 33 ಗೇಟ್ ಅಳವಡಿಸಲು ಸಿದ್ದತೆ ನಡೆಸಿದೆ ಎನ್ನಲಾಗಿದೆ.
ರಾಜ್ಯದ ಆ ನಾಲ್ಕು ಜಿಲ್ಲೆೆಯ ರೈತರ ಪಾಲಿಗೆ ಜೀವನಾಡಿ ಎನಿಸಿದ ತುಂಗಭದ್ರಾಾ ಜಲಾಶಯ, ಸದ್ಯ ಕ್ರಸ್ಟ್ಗೇಟ್ ಬದಲಾವಣೆ ವಿಚಾರ ಇದೀಗ ಹೊಸ ರಾಜಕೀಯ ತಿರುವನ್ನು ಪಡೆದುಕೊಂಡಿದೆ. ಸರ್ಕಾರದ ಈ ನಿರ್ಧಾರಕ್ಕೆೆ ರೈತರು ಆಕ್ರೋೋಶಗೊಂಡಿದ್ದಾಾರೋ ಇಲ್ಲವೋ ಗೊತ್ತಿಿಲ್ಲ, ಆದರೆ ಪ್ರತಿ ಪಕ್ಷದ ನಾಯಕರು ಮಾತ್ರ ಕೆಂಡಾಮಂಡಲವಾಗಿದ್ದಾಾರೆ. ಜಲಾಶಯದ ಗೇಟ್ ವಿಚಾರ ಇದೀಗ ಆಡಳಿತ ಮತ್ತು ವಿರೋಧ ಪಕ್ಷದ ನಡುವಿನ ಪ್ರತಿಷ್ಠೆೆಯ ಕಣವಾಗಿ ಮಾರ್ಪಟ್ಟಿಿದೆ. ಒಬ್ಬರು ’ಬುದ್ಧಿಿ ಇಲ್ಲ’ ಎಂದರೆ, ಇನ್ನೊೊಬ್ಬರು ‘ಹುಚ್ಚ’ ಎಂದು ಏಕವಚನದಲ್ಲಿ ನಿಂದಿಸಿದ್ದಾಾರೆ. ನೀರಿಗಾಗಿ ನಡೆದಿರುವ ಈ ವಾದ-ವಿವಾದ ಈಗ ವೈಯಕ್ತಿಿಕ ಕೆಸರೆರೆಚಾಟದ ಹಂತಕ್ಕೆೆ ತಲುಪಿದೆ.
ತುಂಗಭದ್ರಾಾ ಜಲಾಶಯ ಕೊಪ್ಪಳ, ರಾಯಚೂರು, ಬಳ್ಳಾಾರಿ ಮತ್ತು ವಿಜಯನಗರ ಜಿಲ್ಲೆೆಗಳ ರೈತರ ಜೀವನಾಡಿ. ಪ್ರಸ್ತುತ ಜಲಾಶಯದ ಹಿತದೃಷ್ಟಿಿಯಿಂದ ಒಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 1 ರಿಂದ ಡ್ಯಾಾಂನ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಕೈಗೊಳ್ಳಬೇಕಿದೆ. ಈ ಹಿನ್ನಲೆಯಲ್ಲಿ, ಎರಡನೇ ಬೆಳೆಗೆ ನೀರು ಬಿಡದಿರಲು ಸರ್ಕಾರ ತೀರ್ಮಾನಿಸಿದೆ.
ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಮತ್ತು ಜಿಲ್ಲಾಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದು, ಜಲಾಶಯದ ಸುರಕ್ಷತೆಯ ದೃಷ್ಟಿಿಯಿಂದ ಈ ಹೆಜ್ಜೆೆ ಇಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾಾರೆ. ಆದರೆ, ಇದೀಗ ಇದನ್ನೇ ಅಸವಾಗಿಸಿಕೊಂಡಿರುವ ಪ್ರತಿಪಕ್ಷ ಬಿಜೆಪಿ ಈ ನಿರ್ಧಾರದ ವಿರುದ್ಧ ಧ್ವನಿ ಎತ್ತಿಿದೆ.
ನೀರು ಬಿಡದಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಕೊಪ್ಪಳ, ರಾಯಚೂರು, ಬಳ್ಳಾಾರಿ ಮತ್ತು ವಿಜಯನಗರ ಜಿಲ್ಲೆೆಗಳ ಬಿಜೆಪಿ ಜನಪ್ರತಿನಿಧಿಗಳು ನ 3 ರಂದು ಮುಖ್ಯಮಂತ್ರಿಿ ಮತ್ತು ಉಪಮುಖ್ಯಮಂತ್ರಿಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದಾಾರೆ. ಜಲಾಶಯದ ಕಾರ್ಯದ ಬಗ್ಗೆೆ ಮನವರಿಕೆ ಮಾಡುವ ಜೊತೆಗೆ, ರೈತರ ಬೇಡಿಕೆಗೆ ಮಣಿದು ನೀರು ಬಿಡಲು ಮನವಿ ಮಾಡಲು ಬಿಜೆಪಿ ನಾಯಕರು ಮುಂದಾಗಿದ್ದಾಾರೆ.
ಜಲಾಶಯದ ನೀರಿನ ವಿಚಾರದಲ್ಲಿ ರಾಜಕೀಯ ಜಟಾಪಟಿ ಆರಂಭವಾಗಿದೆ. ಅದರಲ್ಲೂ, ಹಾಲಿ ಸಚಿವ ಶಿವರಾಜ್ ತಂಗಡಗಿ ಮತ್ತು ಮಾಜಿ ಶಾಸಕ ಬಸವರಾಜ್ ದಡೇಸಗೂರು ಅವರ ನಡುವೆ ಏಕವಚನದಲ್ಲಿ ವಾಗ್ದಾಾಳಿ ನಡೆದಿದೆ.
ಮೊದಲಿಗೆ, ಎರಡನೇ ಬೆಳೆಗೆ ನೀರು ಬಿಡುವುದು ಕಷ್ಟಸಾಧ್ಯ ಎಂದು ಸಚಿವರು ಹೇಳಿದ್ದರು. ಆದರೆ, ಪ್ರತಿಪಕ್ಷದ ನಾಯಕರ ನಡೆ ರಾಜಕೀಯದಿಂದ ಕೂಡಿದೆ ಎಂದ ಸಚಿವರು, ಬಸವರಾಜ್ ದಡೇಸಗೂರುಗೆ ಲೆಕ್ಕ ಪತ್ರ ಗೊತಿಲ್ಲ ಅವನಿಗೆ ಬುದ್ಧಿಿ ಇಲ್ಲ ಎಂದು ವ್ಯಂಗ್ಯವಾಡಿದ್ರು.ಇದಕ್ಕೆೆ ಪ್ರತ್ಯುತ್ತರ ನೀಡಿದ ಮಾಜಿ ಶಾಸಕ ಬಸವರಾಜ್ ದಡೇಸಗೂರು, ಸಚಿವ ಶಿವರಾಜ್ ತಂಗಡಗಿ ಅವರನ್ನೇ ಗುರಿಯಾಗಿಸಿ ಬುದ್ಧಿಿ ಇಲ್ಲ, ಹುಚ್ಚ ಎಂದು ಏಕವಚನದಲ್ಲಿ ವಾಗ್ದಾಾಳಿ ನಡೆಸಿದರು.ತಂಗಡಗಿ ಒಬ್ಬ ಹುಚ್ಚ ಇದ್ದಾಾನೆ, ಆತನಿಗೆ ಮಣ್ಣಿಿನ ಗುಣ ಗೊತ್ತಿಿಲ್ಲ ಎಂದು ಆಕ್ರೋೋಶ ವ್ಯಕ್ತಪಡಿಸಿದರು.ಇದರ ಜೊತೆಗೆ, ಜಲಾಶಯದಿಂದ ನೀರು ಬಿಡುವ ವಿಚಾರದಲ್ಲಿ ದಡೇಸೂಗೂರುಗೆ ಲೆಕ್ಕಪತ್ರ ಗೊತ್ತಿಿಲ್ಲ ಎಂದಿದ್ದ ಸಚಿವರ ಹೇಳಿಕೆಗೆ ಪ್ರತಿಕ್ರಿಿಯಿಸಿದ ದಡೇಸೂಗೂರು, ನಾನು ಲೆಕ್ಕ ಕೊಡ್ತೀನಿ ಬಾ ಎಂದು ನೇರ ಪಂಥಾಹ್ವಾಾನ ನೀಡಿದರು. ಡ್ಯಾಾಂಗೆ ಬನ್ನಿಿ, ನಾನು ಬರ್ತೀನಿ ಲೆಕ್ಕ ಕೊಡ್ತೀನಿ ಎಂದು ದಡೇಸಗೂರು ಹೇಳಿದ್ದಾಾರೆ. ಅಲ್ಲದೇ, ನೀರಾವರಿ ಸಲಹಾ ಸಮಿತಿ ಮೀಟಿಂಗ್ ಕರೆಯದೇ ಇರುವವರು ನನ್ನ ಬಗ್ಗೆೆ ಮಾತನಾಡ್ತೀರಾ ಎಂದು ಪ್ರಶ್ನಿಿಸಿದ್ದಾಾರೆ.
ಹೀಗೆ, ತುಂಗಭದ್ರಾಾ ಜಲಾಶಯದ ಗೇಟ್ಗಳನ್ನು ಸರಿಪಡಿಸುವ ಸರ್ಕಾರದ ತಾಂತ್ರಿಿಕ ನಿರ್ಧಾರ ಇದೀಗ ರಾಜಕೀಯ ಜಗಳಕ್ಕೆೆ ದಾರಿಯಾಗಿದೆ. ಒಂದು ಕಡೆ ಜಲಾಶಯದ ಭದ್ರತೆ ಮತ್ತು ಆಯುಷ್ಯದ ಪ್ರಶ್ನೆೆಯಿದ್ದರೆ, ಇನ್ನೊೊಂದು ಕಡೆ ಎರಡನೇ ಬೆಳೆಯನ್ನು ನಂಬಿರುವ ರೈತರ ಬದುಕು ಮತ್ತು ರಾಜಕೀಯ ಲಾಭದ ಲೆಕ್ಕಾಾಚಾರವಿದೆ. ನಾಳೆ ಬಿಜೆಪಿ ನಿಯೋಗ ಸಿಎಂ ಮತ್ತು ಡಿಸಿಎಂ ಅವರನ್ನು ಭೇಟಿ ಮಾಡಿದ ನಂತರ ರಾಜ್ಯ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

