ಸುದ್ದಿಮೂಲ ವಾರ್ತೆ ಬೆಗೂಸರಾಯ್ (ಬಿಹಾರ), ನ.02:
ಬಿಹಾರ ವಿಧಾನಸಭೆ ಚುನಾವಣೆ ಸಮೀಪುಸುತ್ತಿಿದ್ದಂತೆ ರಣಕಣ ಸಿದ್ಧವಾಗಿದ್ದು ಬಿಜೆಪಿ ಹಾಗೂ ಕಾಂಗ್ರೆೆಸ್ ನಡುವೆ ವಾಗ್ದಾಾಳಿ ತೀವ್ರಗೊಂಡಿದೆ.
ಭಾನುವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆೆಸ್ ನಾಯಕ ರಾಹುಲ್ ಗಾಂಧಿ ಪ್ರಚಾರದಲ್ಲಿ ಪಾಲ್ಗೊೊಂಡು ಪರಸ್ವರ ವಾಗ್ದಾಾಳಿ ನಡೆಸಿದರು.
ಭೋಜಪುರ ಜಿಲ್ಲೆಯ ಅರಾದಲ್ಲಿ ನಡೆದ ಬಿಜೆಪಿ ಅಭ್ಯರ್ಥಿಗಳ ಪ್ರಚಾರದಲ್ಲಿ ಪಾಲ್ಗೊೊಂಡ ಪ್ರಧಾನಿ ಮೋದಿ ಅವರು, ಕಾಂಗ್ರೆೆಸ್ ಪಕ್ಷ ಆರ್ಜೆಡಿ ನಾಯಕ ತೇಜಸ್ವಿಿ ಯಾದವ್ ಅವರನ್ನು ಸಿಎಂ ಆಗಿ ಒಪ್ಪಿಿಕೊಂಡಿರಲಿಲ್ಲ. ಆದರೆ ಆರ್ಜೆಡಿ ಬೆದರಿಕೆಯಿಂದ ಕಾಂಗ್ರೆೆಸ್ ಒಪ್ಪಿಿಕೊಂಡಿದೆ ಎಂದು ದಾಳಿ ನಡೆಸಿದರು.
ಆರ್ಜೆಡಿ ಪಕ್ಷದವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಲು ಕಾಂಗ್ರೆೆಸ್ ಎಂದಿಗೂ ಬಯಸಿರಲಿಲ್ಲ. ಆದರೆ ಆರ್ಜೆಡಿಯು ಕಾಂಗ್ರೆೆಸ್ನ ತಲೆಗೆ ನಾಡ ಪಿಸೂಲ್ನಲ್ಲಿ ಗುರಿ ಇಟ್ಟು ಬೆದರಿಸುವ ಮೂಲಕ ಮುಖ್ಯಮಂತ್ರಿಿ ಅಭ್ಯರ್ಥಿ ಸ್ಥಾಾನವನ್ನು ತನ್ನದಾಗಿಸಿಕೊಂಡಿತು. ಚುನಾವಣೆ ನಂತರ ಎರಡು ಪಕ್ಷಗಳ ನಾಯಕರು ಪರಸ್ವರ ತಲೆ ಒಡೆಯಲಿದ್ದಾಾರೆ. ಇದರಿಂದ ಬಿಹಾರಕ್ಕೆೆ ಯಾವುದೇ ಒಳಿತು ಆಗುವುದಿಲ್ಲ ಎಂದು ಟೀಕಿಸಿದರು.
ಆರ್ಜೆಡಿಯ ಜಂಗಲ್ ರಾಜ್ ಆಡಳಿತವನ್ನು ಬಿಹಾರದ ಜನರು ಇನ್ನೂ ಮರೆತಿಲ್ಲ. ಜಂಗಲ್ ರಾಜ್ ವಾಲಾಗಳು ಈ ಚುನಾವಣೆಯಲ್ಲಿ ಹೀನಾಯ ಸೋಲು ಕಂಡು ಇತಿಹಾಸ ಸೇರಲಿದ್ದಾರೆ ಎಂದರು.
ಮತಗಳವು ಮಾಡಿದ ಬಿಜೆಪಿ, ಆರ್ಎಸ್ಎಸ್:
ಬೆಗೂಸರಾಯ್ನಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊೊಂಡ ಕಾಂಗ್ರೆೆಸ್ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕ, ಮಹಾರಾಷ್ಟ್ರ, ಹರಿಯಾಣದ ಮತ್ತು ಮಧ್ಯ ಪ್ರದೇಶ ಚುನಾವಣೆಗಳಲ್ಲಿ ಬಿಜೆಪಿ ಹಾಗೂ ಆರ್ಎಸ್ಎಸ್ ಮತಗಳು ಮಾಡಿವೆ ಎಂದು ಆರೋಪಿಸಿದರು.
ಬಿಹಾರದಲ್ಲಿ ಮಹಾಘಟ ಬಂಧನ ಮೈತ್ರಿಿಕೂಟದ ಬೆಂಬಲಿಗರ ಹೆಸರುಗಳನ್ನು ಮತದಾರರಪಟ್ಟಿಿಯಿಂದ ತೆಗೆದು ಹಾಕಲಾಗಿದೆ. ನಾವು ಈಗಾಗಲೇ ಪುರಾವೆಗಳನ್ನು ಒದಗಿಸಿದ್ದೇವೆ. ಮತ್ತೆೆ ಅದನ್ನು ಒದಗಿಸುತ್ತೇವೆ ಎಂದರು.
ಮತಗಳಿಕೆಗಾಗಿ ಮೋದಿ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ. ನೀವು ಅವರಿಗೆ ಯೋಗ ಮಾಡಲು ಹೇಳಿದರೆ ಅವರು ಕೆಲವು ಆಸನಗಳನ್ನು ಮಾಡುತ್ತಾಾರೆ. ಮತಕ್ಕಾಾಗಿ ವೇದಿಕೆ ಮೇಲೆ ನೃತ್ಯ ಮಾಡುತ್ತಾಾರೆ. ಮತದಾನ ನಡೆಯುವವರೆಗೆ ನೀವು ಏನ್ನೇ ಹೇಳಿದರೂ ಮೋದಿ ಅದನ್ನು ಮಾಡುತ್ತಾಾರೆ. ಏಕೆಂದರೆ ಚುನಾವಣೆ ನಂತರ ಅವರು ತಮ್ಮ ನೆಚ್ಚಿಿನ ಉದ್ಯಮಿಗಳ ಪರವಾಗಿ ಮಾತ್ರ ಕೆಲಸ ಮಾಡುತ್ತಾಾರೆ ಎಂದು ಹೇಳಿದರು.

