ಸುದ್ದಿಮೂಲ ವಾರ್ತೆ ಸಿಂಧನೂರು, ನ.04:
ತುಂಗಭದ್ರಾಾ ಎಡದಂಡೆ ನಾಲೆಗೆ ಎರಡನೇ ಬೆಳೆಗೆ ನೀರು ಹರಿಸುವ ಸಂಬಂಧ ಬಿಜೆಪಿ, ಜೆಡಿಎಸ್ ಮುಖಂಡರು ರೈತರಲ್ಲಿ ಗೊಂದಲ ಸೃಷ್ಟಿಿಸುತ್ತಿಿದ್ದಾಾರೆ ಎಂದು ಮಸ್ಕಿಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಆರೋಪಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಿಯನ್ನುದ್ದೇಶಿಸಿ ಅವರು ಮಾತನಾಡಿದರು. ಎರಡನೇ ಬೆಳೆಗೆ ನೀರು ಹರಿಸುವ ಸಂಬಂಧ ಈಗಾಗಲೇ ಮುಖ್ಯಮಂತ್ರಿಿ, ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿಿಗಳ ಗಮನಕ್ಕೆೆ ತಂದು ಬುಧವಾರ ಬೆಂಗಳೂರಿನಲ್ಲಿ ಐಸಿಸಿ ಸಭೆ ಕರೆಯಲಾಗಿದೆ. ರಾಯಚೂರು, ಬಳ್ಳಾಾರಿ, ಕೊಪ್ಪಳ ವಿಜಯನಗರ ಜಿಲ್ಲೆೆಗಳ ಸಚಿವರು, ಶಾಸಕರು, ಸಂಸದರು, ಅಧಿಕಾರಿಗಳು, ರೈತ ಮುಖಂಡರು ಭಾಗವಹಿಸಲಿದ್ದಾಾರೆ. ಜಲಾಶಯಕ್ಕೆೆ ಹೊಸ ಗೇಟ್ಗಳ ಅಳವಡಿಕೆಗೆ ಸಂಬಂಧಿಸಿದಂತೆ ತುಂಗಭದ್ರಾಾ ಬೋರ್ಡ್ ನಿರ್ಧಾರ ತೆಗೆದುಕೊಂಡಿದೆ. ಕೇಂದ್ರ ಸರಕಾರ ಗೇಟ್ ಅಳವಡಿಕೆಗೆ ಟೆಂಡರ್ ಕರೆದಿದೆ. ನಾಳೆ ನಡೆಯುವ ಐಸಿಸಿ ಸಭೆಯಲ್ಲಿ ನೀರಿನ ಲಭ್ಯತೆ ಹಾಗೂ ತಜ್ಞರ ವರದಿ ಪಡೆದು ನೀರು ಹರಿಸುವ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆೆಸ್ ಸರಕಾರ ರೈತರ ಪರವಾಗಿದೆ. ರೈತರಿಗೆ ನೀರು ಕೊಡಬೇಕು ಎನ್ನುವದು ನಮ್ಮ ಉದ್ದೇಶವಾಗಿದೆ. ಸಭೆಯಲ್ಲಿ ತಜ್ಞರೊಂದಿಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ವಿಪಕ್ಷ ನಾಯಕರು ನೀರಿನ ವಿಚಾರದಲ್ಲಿ ಸರಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿಿದ್ದಾಾರೆ. ಸರಕಾರಕ್ಕೆೆ ಕೆಟ್ಟ ಹೆಸರು ತರುವ ಪ್ರಯತ್ನಗಳು ನಡೆದಿವೆ. ಪ್ರಸ್ತುತ ಜಲಾಶಯದಲ್ಲಿ ನೀರಿದೆ. ಆದರೆ ಮುಂದಿನ ನೂರು ವರ್ಷಗಳಿಗೆ ಅನುಕೂಲವಾಗುವಂತೆ ಗೇಟ್ಗಳನ್ನು ಅಳವಡಿಸಲಾಗುತ್ತಿಿದೆ. ಕಾಮಗಾರಿ ಎಷ್ಟು ತಿಂಗಳಲ್ಲಿ ಪೂರ್ಣಗೊಳ್ಳುತ್ತದೆ ಎನ್ನುವದರ ಆಧಾರ ಮೇಲೆ ನೀರು ಹರಿಸುವಿಕೆ ನಿರ್ಧಾರವಾಗುತ್ತದೆ ಎಂದರು.
ಕಣ್ಣಲ್ಲಿ ನೀರು:
ಪ್ರಸಕ್ತ ವರ್ಷ ಅತಿವೃಷ್ಠಿಿಯಿಂದ ಎಲ್ಲಾಾ ಬೆಳೆಗಳು ಹಾನಿಯಾಗಿವೆ. ಹತ್ತಿಿ ಬೆಳೆ ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ರೈತರು ಸಂಕಷ್ಟದಲ್ಲಿದ್ದಾಾರೆ. ಬೆಳೆ ಹಾನಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಪರಿಹಾರ ಘೋಷಣೆ ಮಾಡಿದೆ. ಜೊತೆಗೆ ಈಗಾಗಲೇ ಸರ್ವೇ ಕೂಡ ಪೂರ್ಣಗೊಂಡಿದೆ. ಶೀಘ್ರವೇ ರೈತರ ಖಾತೆಗೆ ಪರಿಹಾರದ ಹಣ ಜಮಾ ಆಗಲಿದೆ ಎಂದರು.
ಕಾಂಗ್ರೆೆಸ್ ಮಸ್ಕಿಿ ನಗರ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಯದ್ದಲದಿನ್ನಿಿ, ಗ್ರಾಾಮೀಣ ಮಂಡಲ ಅಧ್ಯಕ್ಷ ಹನುಮಂತಪ್ಪ ಮುದ್ದಾಾಪುರ, ಕೆಪಿಸಿಸಿ ಸದಸ್ಯ ಸಿದ್ದನಗೌಡ ಮಾಟೂರು, ಗ್ಯಾಾರಂಟಿ ಯೋಜನೆಗಳ ಅನುಷ್ಠಾಾನ ಸಮಿತಿ ಅಧ್ಯಕ್ಷ ಮೈಬುಸಾಬ್ ಮುದ್ದಾಾಪುರ, ಜಿಲ್ಲಾಾ ಉಪಾಧ್ಯಕ್ಷ ನಿರುಪಾದೆಪ್ಪ ವಕೀಲ ಗುಡಿಹಾಳ, ಮುಖಂಡರಾದ ಬಸವರಾಜ ಕುರುಕುಂದಿ, ಹನುಮೇಶ ಬಾಗೋಡಿ ಹಾಗೂ ಇತರರು ಇದ್ದರು.
ಸಚಿವ ಸ್ಥಾಾನದ ಆಕಾಂಕ್ಷಿ
ನವೆಂಬರ್ ಕ್ರಾಾಂತಿ ಮಾಧ್ಯಮಗಳ ಸೃಷ್ಠಿಿ. ಮುಖ್ಯಮಂತ್ರಿಿಗಳ ಬದಲಾವಣೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಮಂತ್ರಿಿಮಂಡಲ ಪುನರ್ ರಚನೆ ಮಾಡಲಾಗುವುದು ಎಂದು ಸ್ವತಃ ಮುಖ್ಯಮಂತ್ರಿಿಗಳೇ ಹೇಳಿದ್ದಾಾರೆ. ಎಸ್ಟಿ ಕೋಟಾದಟಿ ಎರಡು ಸಚಿವ ಸ್ಥಾಾನಗಳು ಖಾಲಿ ಇವೆ. ಕ-ಕ ಭಾಗದಲ್ಲಿ ಮೂರು ಜನ ಎಸ್ಟಿ ಶಾಸಕರಿದ್ದೇವೆ. ಹೀಗಾಗಿ ನಾನೂ ಕೂಡ ಸಚಿವ ಸ್ಥಾಾನದ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಕೇಳುವದು ನಮ್ಮ ಹಕ್ಕು ಎಂದು ಇದೇ ಸಂದರ್ಭದಲ್ಲಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

