ದಯಾಶಂಕರ ಮೈಲಿ ಮೈಸೂರು, ನ.06:
ದಿನಗಳು ಉರುಳಿದಂತೆ ರೈತರ ಬದುಕು ಅರಳಬೇಕಿತ್ತು. ಅದಾಗದೇ ಅವರ ಬದುಕು ಕಮರಿ ಹೋಗುತ್ತಿಿದೆ. ಸಂಕಷ್ಟಗಳು ಹೆಚ್ಚಾಾಗುತ್ತಿಿವೆ ಎಂಬುದಕ್ಕೆೆ ರಾಜ್ಯದ ಕಬ್ಬು ಬೆಳೆದ ರೈತಾಪಿಗಳು ತಾವು ಬೆವರು ಸುರಿಸಿ ಬೆಳೆದ ಕಬ್ಬಿಿಗೆ ನ್ಯಾಾಯಸಮ್ಮತ ಮೌಲ್ಯಧಾರಿತ ಬೆಲೆ (ಎ್ಆರ್ಪಿ) ನೀಡಲು ಆಗ್ರಹಿಸಿ ಬೀದಿಗೆ ಧುಮುಕಿರುವುದೇ ಜೀವಂತ ನಿದರ್ಶನ.
ಈಗಲ್ಲ. ದೇಶಕ್ಕೆೆ ಸ್ವಾಾತಂತ್ರ್ಯ ಬಂದ ದಿನಗಳಿಂದಲೂ ರೈತರು ಒಂದಲ್ಲ, ಒಂದು ಸಮಸ್ಯೆೆಗೆ ತುತ್ತಾಾಗುತ್ತಲೇ ಬಂದಿದ್ದಾರೆ. ಅತಿವೃಷ್ಠಿಿ- ಅನಾವೃಷ್ಠಿಿ ಎಂಬ ಪ್ರಕೃತಿ ವಿಕೋಪಕ್ಕೆೆ ಮತ್ತು ಆಳುವವರ ರೈತ ಪರವಲ್ಲದ ನೀತಿಗಳು ರೈತರನ್ನು ಸಮಸ್ಯೆೆಗೆ ದೂಡುತ್ತಲೇ ಬಂದಿವೆ.
ಹಿಂದೆ ಸಹಕಾರಿ ಕ್ಷೇತ್ರದ ಮೂಲಕ ಸಕ್ಕರೆ ಕಾರ್ಖಾನೆಗಳನ್ನು ನಡೆಸಬೇಕೆಂಬ ಉತ್ತಮ ಪರಿಕಲ್ಪನೆಯೊಂದಿಗೆ ಸಹಕಾರ ತತ್ವದಡಿ ರಾಜ್ಯದ ಆನೇಕ ಕಡೆ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಲಾಯಿತು. ಅಂದರೆ ರೈತರೇ ನಿರ್ವಹಣೆ ಮಾಡುವ ವ್ಯವಸ್ಥೆೆ ತುಂಬ ಚೆನ್ನಾಾಗಿಯೇ ನಡೆಯುತ್ತಿಿತ್ತು.
ದುರಾದೃಷ್ಟವಶಾತ್ ಬರ ಬರುತ್ತಾಾ ರಾಜಕಾರಣಿಗಳು ನುಸುಳಿದರು. ಇದರ ಪರಿಣಾಮ ಸಹಕಾರ ಕ್ಷೇತ್ರದಲ್ಲಿ ನಡೆಯುತ್ತಿಿದ್ದ ಸಕ್ಕರೆ ಕಾರ್ಖಾನೆಗಳು ಮುಚ್ಚಿಿ, ಖಾಸಗಿಯವರಿಗೆ ಗುತ್ತಿಿಗೆ ಆಧಾರದ ಮೇಲೆ ನೀಡುವ ಪರಂಪರೆ ಮುಂದುವರಿಯಿತು. ಈಗ ರಾಜ್ಯದಲ್ಲಿ ಇದ್ದ 12 ಸಹಕಾರ ಸಕ್ಕರೆ ಕಾರ್ಖಾನೆಗಳ ಪೈಕಿ ಎರಡೋ, ಮೂರೋ ಸಹಕಾರಿ ಕ್ಷೇತ್ರದಲ್ಲಿ ನಡೆಯುತ್ತಿಿವೆ.
ಹೀಗೆ ಸಹಕಾರಿ ಕಾರ್ಖಾನೆ ಮುಚ್ಚುತ್ತಲೇ ಖಾಸಗಿ ಒಡೆತನದ ಕಾರ್ಖಾನೆಗಳು ಹೆಚ್ಚಾಾದವು. ಇದು ಮೂಲ ಸಮಸ್ಯೆೆಯ ಬೇರು. ರಾಜ್ಯದಲ್ಲಿ ಇರುವ ಬಹುತೇಕ ಖಾಸಗಿ ಕಾರ್ಖಾನೆಗಳ ಮಾಲೀಕರು ರಾಜಕೀಯವಾಗಿ ಬಲಾಢ್ಯರಾಗಿ ಇರುವವರೇ ಆಗಿದ್ದಾರೆ. ಅವರ ಎಷ್ಟರ ಮಟ್ಟಿಿಗೆ ಪ್ರಬಲರು ಅಂದರೆ ಸರ್ಕಾರವನ್ನು ಅಲುಗಾಡಿಸಬಲ್ಲ ಶಕ್ತಿಿವಂತರಾಗಿದ್ದಾರೆ ಎಂದು ಮಂಡ್ಯ ಜಿಲ್ಲೆ ರೈತ ಮುಖಂಡ ರಮೇಶ್ ಕುಮಾರ್ ಹೇಳುವುದನ್ನು ಸುಲಭವಾಗಿ ತಳ್ಳಿಿ ಹಾಕುವಂತಿಲ್ಲ.
ಕಬ್ಬು ನಿಯಂತ್ರಣ ಕಾಯ್ದೆೆ ಏಕೆ ಕಟ್ಟುನಿಟ್ಟಾಾಗಿ ಜಾರಿಗೊಳಿಸಲ್ಲ ಏಕೆ ?
ಹಿಂದೆಯೇ ಕಬ್ಬಿಿಗೆ ಸೂಕ್ತ ಬೆಲೆ ದೊರಕಬೇಕೆಂದು ಕಬ್ಬು ನಿಯಂತ್ರಣ ಕಾಯ್ದೆೆ 1966 ಕಾಯ್ದೆೆಯನ್ನು ಜಾರಿಗೊಳಿಸಲಾಗಿದೆ. ಇದರ ಪ್ರಕಾರ ಕಬ್ಬು ಸರಬರಾಜು ಮಾಡಿದ ರೈತನಿಗೆ 14 ದಿನಗಳೊಳಗೆ ಹಣ ಪಾವತಿಸಬೇಕು, ಅಯಾ ಕಾಲಘಟ್ಟಕ್ಕೆೆ ಅನುಗುಣವಾಗಿ ಬೆಲೆ ನೀಡಬೇಕು, ಇಲ್ಲದಿದ್ದರೆ ಕಾನೂನಿನಡಿ ಕ್ರಮ ತೆಗೆದುಕೊಳ್ಳಲು ಅವಕಾಶ ಇದೆ. ಆದರೆ ಈ ಕಾಯ್ದೆೆಯನ್ನು ಕಟ್ಟುನಿಟ್ಟಾಾಗಿ ಜಾರಿಗೊಳಿಸಿದರೆ ರೈತರ ಸಮಸ್ಯೆೆಗೆ ಸಾಕಷ್ಟು ಪರಿಹಾರ ಸಿಗುತ್ತದೆ ಎನ್ನಲು ಅಡ್ಡಿಿ ಇಲ್ಲ.
300 ಕೋಟಿ ಬಾಕಿ
ಈಗ ರಾಜ್ಯದಲ್ಲಿ ಇರುವ 80 ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆದ ರೈತರಿಗೆ ಸರಿ ಸುಮಾರು 300 ಕೋಟಿ ರೂ. ಬಾಕಿ ಬರಬೇಕಿದೆ. ಇದನ್ನು ಕೂಡಲೇ ಸರ್ಕಾರ ಬಿಡುಗಡೆ ಮಾಡಿಸಲು ಕ್ರಮಕೈಗೊಂಡು ರೈತರ ಬೇಡಿಕೆಯಂತೆ ಪ್ರತಿ ಟನ್ಗೆ 3500 ರು . ಕೊಡಿಸಬೇಕಾದ ಅಗತ್ಯವಿದೆ.
ಗುಜರಾತ್ ಆಗೋದು ಇಲ್ಲೇಕೆ ಆಗಲ್ಲ?
ಗುಜರಾತ್ನಲ್ಲಿ ಸಹಕಾರಿ ಕ್ಷೇತ್ರದಲ್ಲಿ ನಡೆಯುತ್ತಿಿರುವ 17 ಸಕ್ಕರೆ ಕಾರ್ಖಾನೆಗಳು ಅತ್ಯಾಾದ್ಭುತವಾಗಿ ನಡೆಯುತ್ತಿಿವೆ. ಅಲ್ಲಿ ಪ್ರತಿ ಟನ್ ಕಬ್ಬಿಿಗೆ 4,500 ರೂ.ವರೆಗೆ ನೀಡಲಾಗುತ್ತಿಿದೆ. ಇಲ್ಲಿ 3,500 ನೀಡಲು ಬಿಲ್ಕುಲ್ ಒಪ್ಪುುತ್ತಿಿಲ್ಲ. ಗುಜರಾತ್ನಲ್ಲಿ ಸಾಧ್ಯವಾಗುವುದಾದರೆ ಇಲ್ಲೇಕೆ ಆಗಲ್ಲ? ಎಂಬ ಪ್ರಶ್ನೆೆಗೆ ಸರ್ಕಾರವೇ ಉತ್ತರಿಸಬೇಕಿದೆ.
ಸರ್ಕಾರಕ್ಕೆೆ 6 ರಿಂದ 8 ಸಾವಿರ ಕೋಟಿ ತೆರಿಗೆ
ರಾಜ್ಯದಲ್ಲಿ ವಾರ್ಷಿಕ 25 ಸಾವಿರ ಕೋಟಿ ರು. ಸಕ್ಕರೆ ವಹಿವಾಟು ನಡೆಯುತ್ತದೆ. ಅದರಲ್ಲಿ ಸರ್ಕಾರಕ್ಕೆೆ 5 ರಿಂದ 6 ಕೋಟಿ ರು. ತೆರಿಗೆ ಸಲ್ಲಿಕೆ ಆಗುತ್ತದೆ. ರಾಜ್ಯಾಾದ್ಯಂತ 6 ಲಕ್ಷ ಹೆಕ್ಟೇರ್ನಲ್ಲಿ ಕಬ್ಬು ಬೆಳೆಯಲಾಗುತ್ತದೆ.
ಡಿಜಿಟಿಲ್ ಮಾಡುವ ಭರವಸೆ ಈಡೇರಿಲ್ಲ
ಕೆಲ ವರ್ಷಗಳ ಹಿಂದೆ ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲಿ ತೂಕದಲ್ಲಿ ಆಗುವ ಮೋಸ ತಡೆಯಲು ಡಿಜಿಟಲ್ ತೂಕದ ಯಂತ್ರ ಅಳವಡಿಸಲಾಗುವುದು ಎಂದು ನೀಡಿದ ಭರವಸೆ ಇಂದಿಗೂ ಈಡೇರಿಲ್ಲ. ಪ್ರತಿ ಟನ್ಗೆ 120 ಕೆಜಿ ಸಕ್ಕರೆ ಉತ್ಪಾಾದನೆ ಆಗುತ್ತದೆ. ಆದರೆ 110 ಕೆಜಿ ಎಂದು ಹೇಳಲಾಗುತ್ತದೆ. 20 ಟನ್ ಕಬ್ಬು ಇದ್ದರೆ ಅದರಲ್ಲಿ ಕನಿಷ್ಠ 2 ಟನ್ ಮನ್ನಾಾ ಮಾಡಲಾಗುತ್ತದೆ. ಹೀಗೆ ರೈತರಿಗೆ ಮೋಸ ಮಾಡಲಾಗುತ್ತಿಿದೆ ಎಂದು ಮಾಡುತ್ತಿಿರುವ ಆರೋಪ ತೆರೆದ ರಹಸ್ಯವೇ.
ರಾಜ್ಯದಲ್ಲಿ ಇರುವ 80 ಸಕ್ಕರೆ ಕಾರ್ಖಾನೆಗಳ ಪೈಕಿ 29 ಬೆಳಗಾವಿಯಲ್ಲಿ ಇದ್ದರೆ, ಬಾಗಲಕೋಟೆಯಲ್ಲಿ 16, ಬಿಜಾಪುರ ಮತ್ತು ಗುಲ್ಬರ್ಗದಲ್ಲಿ ತಲಾ 6 ಮತ್ತು ಮಂಡ್ಯ ಜಿಲ್ಲೆಯಲ್ಲಿ 4 ಇವೆ.
ಹೇಳಿಕೆ..
ಸಕ್ಕರೆ ಲಾಬಿಯಿಂದ ಸರ್ಕಾರ ನಿಯಂತ್ರಣ
ಹಿಂದೆ ಅಬಕಾರಿ ಲಾಬಿ ಸರ್ಕಾರಗಳನ್ನು ಅಲುಗಾಡಿಸುತ್ತಿಿದ್ದವು. ಈಗ ಶಿಕ್ಷಣ ಮತ್ತು ಸಕ್ಕರೆ ಲಾಬಿ ಸರ್ಕಾರಗಳನ್ನು ನಿಯಂತ್ರಿಿಸುತ್ತಿಿವೆ . ಕಬ್ಬು ನಿಯಂತ್ರಣ ಕಾಯ್ದೆೆ 1966 ಅನ್ನು ಕಟ್ಟುನಿಟ್ಟಾಾಗಿ ಜಾರಿಗೊಳಿಸಲು ಸಾಧ್ಯವಾದರೆ ರೈತರಿಗೆ ಸ್ವಲ್ಪಮಟ್ಟಿಿನ ಪರಿಹಾರ ಸಿಗುತ್ತದೆ. ಕಾನೂನುಗಳು ಬಡವರನ್ನು ಸಿಕ್ಕಿಿಸಿಕೊಳ್ಳುತ್ತವೆ. ಶ್ರೀಮಂತರನ್ನು ಕಂಡರೆ ಓಡಿ ಹೋಗುತ್ತವೆ. ಎಂಬ ಪರಿಸ್ಥಿಿತಿ ನಿರ್ಮಾಣ ಆಗಿದೆ ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ, ಕೇಂದ್ರ ಸರ್ಕಾರ ರಾಜ್ಯ ವಿರುದ್ಧ ಟೀಕೆ ಮಾಡುವುದೇ ಜನರನ್ನು ದಾರಿ ತಪ್ಪಿಿಸಲು ಎಂಬುದನ್ನು ಆರಿತು ರೈತರು ಪ್ರಾಾಮಾಣಿಕ ಹೋರಾಟ ಮಾಡಬೇಕಿದೆ ಅಷ್ಟೆೆ.
-ಕುರುಬೂರು ಶಾಂತಕುಮಾರ್ ,ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ .

