ಸುದ್ದಿಮೂಲ ವಾರ್ತೆ ಬೆಂಗಳೂರು, ನ.06:
ಸಚಿವರಾದ ಕೆ.ಎಚ್.ಮುನಿಯಪ್ಪ, ದಿನೇಶ್ ಗುಂಡೂರಾವ್ ಸೇರಿದಂತೆ ಐದು ಸಚಿವರು, 67 ಶಾಸಕರು ಹಾಗೂ 28 ವಿಧಾನ ಪರಿಷತ್ ಸದಸ್ಯರು ಆಸ್ತಿಿ ವಿವರ ಸಲ್ಲಿಸಿಲ್ಲ ಎಂಬುದು ಬಹಿರಂಗ ಗೊಂಡಿದೆ.
ಆಸ್ತಿಿ ವಿವರ ಸಲ್ಲಿಸದ ಸಚಿವರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಹೆಸರನ್ನು ಕರ್ನಾಟಕ ಲೋಕಾಯುಕ್ತ ಪ್ರಕಟಿಸಿದೆ.
ಸಚಿವರಾದ ಕೆ.ಎಚ್.ಮುನಿಯಪ್ಪ, ದಿನೇಶ್ ಗುಂಡೂರಾವ್, ಜರ್ಮೀ ಅಹ್ಮದ್ ಖಾನ್. ಬಿ. ವೆಂಕಟೇಶ್ ಹಾಗೂ ರಹೀಂ ಖಾನ್ ಆಸ್ತಿಿ ವಿವರ ಸಲ್ಲಿಸಿಲ್ಲ.
ಲೋಕಾಯುಕ್ತ ಕಾಯ್ದೆೆ ಪ್ರಕಾರ ಪ್ರತಿ ವರ್ಷ ಜೂನ್ 30ರ ಮೊದಲು ಜನಪ್ರತಿನಿಧಿಗಳು ತಮ್ಮ ಆಸ್ತಿಿ ವಿವರವನ್ನುಸಲ್ಲಿಸಬೇಕು.
ನಿಗದಿತ ಕಾಲವಾವಧಿ ಮುಗಿದ ಬಳಿಕ ಯೋಜನೆ ಮತ್ತು ಸಾಂಖ್ಯಿಿಕ ಸಚಿವ ಡಿ.ಸುಧಾಕರ್, ಶಾಸಕರಾದ ಬಿ.ಎಂ.ನಾಗರಾಜು, ಎಂ.ಟಿ.ಕೃಷ್ಣಪ್ಪ, ಪಠಾಣ್ ಯಾಸೀರ್ ಅಹ್ಮದ್ ಖಾನ್ ಹಾಗೂ ಚಿದಾನಂದ್ ಎಂ ಗೌಡ ಸಲ್ಲಿಸಿದ್ದಾರೆ ಎಂದು ಲೋಕಾಯುಕ್ತ ನಿಬಂಧಕರು ಮಾಹಿತಿ ನೀಡಿದ್ದಾರೆ.
ಆಸ್ತಿಿ ವಿವರ ಸಲ್ಲಿಸದ ಶಾಸಕರು :
ಲಕ್ಷ್ಮಣ ಸವದಿ, ಅಶೋಕ ಮಹಾದೇವಮ್ಮ ಪಟ್ಟಣ್, ಮೇಟಿ ಹುಲ್ಲಪ್ಪ ಯಮನಪ್ಪ, ವಿಜಯಾನಂದ ಕಾಶಪ್ಪನವರ್, ಅಲ್ಲಮಪ್ರಭು ಪಾಟೀಲ್, ಸಿದ್ದು ಪಾಟೀಲ್, ಬಸನಗೌಡ ತುರುವಿಹಾಳ, ಜಿ.ಜನಾರ್ದನರೆಡ್ಡಿಿ, ಬಸವರಾಜ ರಾಯರೆಡ್ಡಿಿ, ಕೆ.ರಾಘವೇಂದ್ರ ಬಸವರಾಜ ಹಿಟ್ನಾಾಳ್, ಎನ್.ಎಚ್.ಕೋನರೆಡ್ಡಿಿ, ವಿನಯ್ ಕುಲಕರ್ಣಿ, ಸತೀಶ್ ಕೃಷ್ಣ ಸೈಲ್, ಲತಾ ಮಲ್ಲಿಕಾರ್ಜುನ, ನಯನ ಮೋಟಮ್ಮ, ಡಾ.ಎಚ್.ಡಿ. ರಂಗನಾಥ್, ಕೆ.ಎಂ.ಉದಯ್ ಸೇರಿದಂತೆ 67 ಶಾಸಕರು ಆಸ್ತಿಿ ವಿವರ ಸಲ್ಲಿಸಿಲ್ಲ.
ಆಸ್ತಿಿ ವಿವರ ಸಲ್ಲಿಸದ ವಿಧಾನ ಪರಿಷತ್ ಸದಸ್ಯರು
ಸಲೀಂ ಅಹಮದ್, ಆಡಗೂರು ಎಚ್.ವಿಶ್ವನಾಥ್, ಕೆ.ಅಬ್ದುಲ್ ಜಬ್ಬಾಾರ್, ಎಂ.ಎಲ್.ಅನಿಲ್ ಕುಮಾರ್, ಬಸನಗೌಡ ಬಾದರ್ಲಿ, ಗೋವಿಂದರಾಜು, ಐವನ್ ಡಿಸೋಜಾ, ಟಿ.ಎನ್.ಜವರಾಯಿಗೌಡ, ಸಿ.ಎನ್.ಮಂಜೇಗೌಡ, ಎಂಟಿಬಿ ನಾಗರಾಜ, ನಸೀರ್ ಅಹ್ಮದ್, ಕೆ.ಎಸ್.ನವೀನ್, ಪ್ರದೀಪ್ ಶೆರ್ಟ್ಟ, ಟಿ.ಎ.ಶರವಣ, ಸೂರಜ್ ರೇವಣ್ಣ ಸೇರಿದಂತೆ 28 ವಿಧಾನ ಪರಿಷತ್ ಸದಸ್ಯರು ಆಸ್ತಿಿ ವಿವರ ಸಲ್ಲಿಸಿಲ್ಲ.

