ಸುದ್ದಿಮೂಲ ವಾರ್ತೆ ಬೆಂಗಳೂರು, ನ.06:
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ನೀಡಲಾಗುವ ಇಂದಿರಾ ಆಹಾರ ಕಿಟ್ ಅಲ್ಪ ಬದಲಾವಣೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಈ ಕುರಿತು ಮಾಹಿತಿ ನೀಡಿ, ಕಿಟ್ನಲ್ಲಿ ತೊಗರಿಬೇಳೆ ಜೊತೆಗೆ ಒಂದು ಕೆ.ಜಿ. ಹೆಸರು ಬೇಳೆ ನೀಡುವುದಾಗಿ ಹೇಳಲಾಗಿತ್ತು. ಹೆಸರುಬೇಳೆ ಬದಲಾಗಿ ತೊಗರಿ ಕಾಳನ್ನು ಕುಟುಂಬದ ಸದಸ್ಯರಿಗೆ ಅನುಗುಣವಾಗಿ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಪೌಷ್ಟಿಿಕ ಆಹಾರ ಕಿಟ್ನಲ್ಲಿ ಒಂದು ಕೆ.ಜಿ. ತಗರಿಗಬೇಳೆ, ತೊಗರಿಕಾಳು, ಒಂದು ಲೀಟರ್ ಅಡುಗೆ ಎಣ್ಣೆೆ ಮತ್ತು ತಲಾ ಒಂದು ಕೆ.ಜಿ. ಸಕ್ಕರೆ ಹಾಗೂ ಉಪ್ಪುು ಇರುತ್ತದೆ ಎಂದು ಸಚಿವ ಪಾಟೀಲ ವಿವರಿಸಿದರು.
ನವೋದ್ಯಮ ನೀತಿಗೆ ಅನುಮೋದನೆ:
ರಾಜ್ಯವನ್ನು ಜಾಗತಿಕ ನಾವೀನ್ಯತೆ ಕೇಂದ್ರವಾಗಿ ರೂಪಿಸುವ ನಿಟ್ಟಿಿನಲ್ಲಿ ಕರ್ನಾಟಕ ನವೋದ್ಯಮ ನೀತಿ, 2025-2030ಕ್ಕೆೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಈ ನೀತಿಯ ಮೂಲಕ ರಾಜ್ಯದಲ್ಲಿ 25000 ವರೆಗೆ ಹೆಚ್ಚುವರಿ ನವೋದ್ಯಮಗಳನ್ನು ಸ್ಥಾಾಪಿಸಲು ಮತ್ತು ಅದರಲ್ಲಿ 10000 ನವೋದ್ಯಮಗಳು ಬೆಂಗಳೂರು ನಗರದಿಂದ ಹೊರಗಡೆ ಸ್ಥಾಾಪಿಸುವ ಗುರಿ ಹೊಂದಲಾಗಿದೆ ಎಂದರು.
ಮೈಸೂರಿನಲ್ಲಿ ಕ್ಯಾಾನ್ಸರ್ ಕೇಂದ್ರ
ಬೆಂಗಳೂರಿನ ಕಿದ್ವಾಾಯಿ ಸ್ಮಾಾರಕ ಗ್ರಂಥಿ ಸಂಸ್ಥೆೆ ಸಹಯೋಗದೊಂದಿಗೆ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆೆ ಅಧೀನದಲ್ಲಿ ಬರುವ ಪಿಕೆಟಿಬಿ ಆಸ್ಪತ್ರೆೆಯ ಆವರಣದಲ್ಲಿ ಪೆರಿೆರಲ್ ಕ್ಯಾಾನ್ಸರ್ಕೇಂದ್ರವನ್ನು ನಿರ್ಮಿಸಲು ಮೊದಲನೇ ಹಂತದಲ್ಲಿ ಅವಶ್ಯವಿರುವ 36.50 ಕೋಟಿ ರೂ.ಗಳ ಮೊತ್ತದ ಉಪಕರಣಗಳು ಹಾಗೂ ಎರಡನೇ ಹಂತದಲ್ಲಿ ಅವಶ್ಯವಿರುವ 58 ಕೋಟಿ ರೂ.ಗಳ ಮೊತ್ತದ ಉಪಕರಣಗಳು ಸೇರಿದಂತೆ ಒಟ್ಟಾಾರೆ 94.50 ಕೋಟಿ ರೂ.ಗಳ ಮೊತ್ತದಲ್ಲಿ ಉಪಕರಣಗಳನ್ನು ಖರೀದಿಸಲು ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಸಚಿವರು ತಿಳಿಸಿದರು.
ಮೈಸೂರಿನ ಪಿ.ಕೆ.ಟಿ.ಬಿ ಆಸ್ಪತ್ರೆೆಯ ಆವರಣದಲ್ಲಿ ಪೆರಿೆರಲ್ ಕ್ಯಾಾನ್ಸರ್ ಕೇಂದ್ರವನ್ನು ಸ್ಥಾಾಪಿಸುವುದರಿಂದ, ಮೈಸೂರಿನ ಹಾಗೂ ಇತರೆ ಸುತ್ತಮುತ್ತಲಿನ ಜಿಲ್ಲೆಗಳು ಹಾಗೂ ನೆರೆ ರಾಜ್ಯದ ಕ್ಯಾಾನ್ಸರ್ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆೆಯನ್ನು ಕೈಗೆಟಕುವ ದರದಲ್ಲಿ ಒದಗಿಸಲು ಅನುಕೂಲವಾಗುತ್ತದೆ ಮತ್ತು ರೋಗಿಗಳಿಗೆ ಚಿಕಿತ್ಸೆೆ ನೀಡುವಲ್ಲಿ ಉಂಟಾಗುವ ಒತ್ತಡವನ್ನು ಹಾಗೂ ವಿಳಂಬವನ್ನು ಕಡಿಮೆಗೊಳಿಸಬಹುದಾಗಿದೆ ಎಂದು ಸಚಿವರು ಹೇಳಿದರು.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಸಾರಕ್ಕಿಿಯ ಮಧ್ಯಂತರ ತ್ಯಾಾಜ್ಯ ನೀರಿನ ಯಂತ್ರಾಾಗಾರ ಮತ್ತು ಅಗರಂನ ಮಧ್ಯಂತರ ತ್ಯಾಾಜ್ಯ ನೀರಿನ ಯಂತ್ರಾಾಗಾರದಿಂದ ಕೆಸಿ ವ್ಯಾಾಲಿಗೆ ಇರುವ ರೈಸಿಂಗ್ ಮೇನ್ ಸೇರಿ ತ್ಯಾಾಜ್ಯ ನೀರಿನ ಯಂತ್ರಾಾಗಾರ ಘಟಕಗಳ ಸಮಗ್ರ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು 49.91 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನು ಹೊರಗುತ್ತಿಿಗೆ ನೀಡಲು ಅನುಮೋದಿಸಲಾಗಿದೆ.
ಸಂಪುಟ ಸಭೆಯ ಇತರೆ ನಿರ್ಣಯಗಳು:
* ಯಾದಗಿರಿ ಜಿಲ್ಲೆಯ ದೋರನಹಳ್ಳಿಿ ಗ್ರಾಾಮ ಪಂಚಾಯತಿಯಿಂದ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿಸಲು ಒಪ್ಪಿಿಗೆ
* ಬೀದರ್ ಜಿಲ್ಲೆಯ ರಾಜೇಶ್ವರ ಗ್ರಾಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿಸಲು ಒಪ್ಪಿಿಗೆ.
* ಹಿಂದುಳಿದ ವರ್ಗಗಳಿಗೆ ಮೀಸಲಿರಿಸಿರುವ ಆದರೆ ಅರ್ಹ ಅಭ್ಯರ್ಥಿಗಳು ಲಭ್ಯತೆಯಿಲ್ಲದ ಕಾರಣ ಭರ್ತಿಯಾಗದೆ ಉಳಿದಿರುವ 67 ಉರ್ದು ಮಾಧ್ಯಮ ಶಿಕ್ಷಕರ ಹುದ್ದೆಗಳನ್ನು ಸಾಮಾನ್ಯ ವರ್ಗಕ್ಕೆೆ ಪರಿವರ್ತಿಸಲು ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಂದ ಈ ಹುದ್ದೆಗಳನ್ನು ಭರ್ತಿ ಮಾಡಲು ಒಂದು ಬಾರಿ ಅವಕಾಶ.
* ವಿಜಯಪುರ ಮಹಾನಗರ ಪಾಲಿಕೆಯ ವ್ಯಾಾಪ್ತಿಿಗೆ ವಿವಿಧ ಕಂದಾಯ ಗ್ರಾಾಮ, ಗ್ರಾಾಮದ ಗ್ರಾಾಮಠಾಣಾ ಪ್ರದೇಶಗಳನ್ನು ಸೇರ್ಪಡೆಗೊಳಿಸಲು ಅನುಮೋದನೆ.

