ಸುದ್ದಿಮೂಲ ವಾರ್ತೆ ಕೊಪ್ಪಳ, ನ.06:
ಇತ್ತೀಚಿಗೆ ಯುವಕರಲ್ಲಿ ದೈಹಿಕ ಸದೃಢತೆ, ಸ್ಲಿಿಮ್ ಬಾಡಿ ಇಟ್ಟುಕೊಳ್ಳಲು ಯತ್ನಿಿಸುತ್ತಿಿರುವುದು ಕಂಡು ಬರುತ್ತಿಿದೆ.ಈ ಮಧ್ಯೆೆ ದೈಹಿಕ ಕಸರತ್ತಿಿಗಾಗಿ ಖಾಸಗಿ ಜಿಮ್ಗಳಲ್ಲಿ ಪ್ರತಿ ತಿಂಗಳ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾಾರೆ. ಬಡ ಯುವಕರಿಗೂ ಜಿಮ್ ಸೌಲಭ್ಯ ಸಿಗಬೇಕು ಎನ್ನುವ ಉದ್ದೇಶದಿಂದ ಸರಕಾರದಿಂದ ಜಿಮ್ ಸಿದ್ದವಾಗಬೇಕು. ಆದರೆ, ಆರು ವರ್ಷವಾದರೂ ಜಿಮ್ ಕೇಂದ್ರ ಕಾಮಗಾರಿ ಪೂರ್ಣಗೊಂಡಿಲ್ಲ.
ಹಿಂದಿನ ಕಾಲದಲ್ಲಿ ಯುವಕರು ದೈಹಿಕ ಕಸರತ್ತಿಿಗಾಗಿ ಗರಡಿ ಮನೆಗೆ ಹೋಗುತ್ತಿಿದ್ದರು. ಈಗ ಗರಡಿ ಮನೆಗಳಿಲ್ಲ. ಈಗಲೂ ಸಹ ಯುವಕ ಹಾಗು ಯುವತಿಯರು ದೈಹಿಕ ಸಾಮಾರ್ಥ್ಯ ಹೆಚ್ಚಿಿಸಿಕೊಳ್ಳಲು. ದೇಹವನ್ನು ಸಪೂರವಾಗಿಟ್ಟುಕೊಳ್ಳಲು ಜಿಮ್ಗಳಿಗೆ ಹೋಗುವುದು ವಾಡಿಕೆ. ಜಿಮ್ ಗಳಲ್ಲಿ ಪ್ರತಿ ತಿಂಗಳ 2-3 ಸಾವಿರ ರೂಪಾಯಿ ನೀಡಬೇಕು. ಬಡವರಿಗೆ ಇಷ್ಟು ಹಣ ನೀಡುವದು ಕಷ್ಟ. ಇದೇ ಕಾರಣಕ್ಕಾಾಗಿ ಕೊಪ್ಪಳ ತಾಲೂಕಾ ಕ್ರೀೆಡಾಂಗಣದಲ್ಲಿ ಸರಕಾರದಿಂದ ಜಿಮ್ ನಿರ್ಮಿಸಲು ಹೊರಟಿದೆ.
ಕೊಪ್ಪಳ ನಗರದಲ್ಲಿರುವ ತಾಲೂಕಾ ಕ್ರೀೆಡಾಂಗಣದಲ್ಲಿ ಜಿಮ್ ನಿರ್ಮಿಸಲು ಆರು ವರ್ಷಗಳ ಹಿಂದೆ ಕಲ್ಯಾಾಣ ಕರ್ನಾಟಕ ಪ್ರದೇಶಾಭಿವೃದ್ಧಿಿ ಮಂಡಳಿಯಿಂದ 1.50 ಕೋಟಿ ರೂಪಾಯಿ ಮಂಜೂರಾಗಿದೆ.ಆಗಿನಿಂದ ಇಲ್ಲಿಯ ನಿರ್ಮಿತಿ ಕೇಂದ್ರದವರು ಗುತ್ತಿಿಗೆ ಪಡೆದು ಕಾಮಗಾರಿ ಮಾಡುತ್ತಿಿದ್ದಾಾರೆ. ಕೇವಲ ಕಟ್ಟಡ ಕಟ್ಟಿಿದ್ದಾಾರೆ. ಈ ಕಟ್ಟಡ ಈಗ ಅನೈತಿಕ ಚಟುವಟಿಕೆಯ ಕೇಂದ್ರವಾಗಿದೆ. ಯುವಕರಿಗೆ ಅವಶ್ಯವಾಗಿರುವ ಜಿಮ್ ಆರಂಭಿಸಬೇಕೆಂದು ಯುವಕರು ಆಗ್ರಹಿಸಿದ್ದಾಾರೆ.
ಈ ವಿಷಯವಾಗಿ ಪ್ರತಿಕ್ರಿಿಯಿಸಿದ ಶಾಸಕ ರಾಘವೇಂದ್ರ ಹಿಟ್ನಾಾಳ , ನೆನೆಗುದಿಗೆ ಬಿದ್ದಿರುವ ಕಾಮಗಾರಿ ಬೇಗನೆ ಪೂರ್ಣಗೊಳಿಸಿ ಯುವಕರಿಗೆ ಜಿಮ್ ಸೌಲಭ್ಯ ನೀಡಲಾಗುವುದು ಎಂದು ಭರವಸೆ ನೀಡಿದ್ದಾಾರೆ.
ನಿರ್ಮಿತಿ ಕೇಂದ್ರಕ್ಕೆೆ ಪೂರ್ಣ ಅನುದಾನ ನೀಡಲಾಗಿದೆ. ಆದರೆ ನಿರ್ಮಿತಿ ಕೇಂದ್ರದವರ ನಿರ್ಲಕ್ಷ್ಯದಿಂದಾಗಿ ಜಿಮ್ ಕಾಮಗಾರಿ ಪೂರ್ಣಗೊಳಿಸಿಲ್ಲ. ಈಗಲಾದರೂ ಕಾಮಗಾರಿ ಪೂರ್ಣಗೊಳಿಸಲಾಗುತ್ತಾಾ ಕಾದು ನೋಡಬೇಕು.

