ಸುದ್ದಿಮೂಲ ವಾರ್ತೆ ಯಾದಗಿರಿ, ನ.08:
ಕನಕದಾಸರು ಅಂದಿಗೂ, ಇಂದಿಗೂ ಎಂದೆಂದಿಗೂ ಸಲ್ಲುವುದು ಅವರೊಳಗಿನ ಪರಿಶುದ್ಧ ಭಕ್ತಿಿ ಮತ್ತು ಸಾಮಾಜಿಕ ಕಳಕಳಿಯಿಂದ ಎಂದು ಅವರು ಶಾಸಕ ಚನ್ನಾಾರೆಡ್ಡಿಿ ಪಾಟೀಲ್ ಹೇಳಿದರು.
ಜಿಲ್ಲಾಡಳಿತ, ಜಿಪಂ,ನಗರಸಭೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತಾಾಶ್ರಯದಲ್ಲಿ ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಾಲಯ ಸಭಾಂಗಣದಲ್ಲಿ ಶನಿವಾರ ಹಮ್ಮಿಿಕೊಂಡಿದ್ದ ಸಂತ ಕವಿ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು.
ಸಾಮಾಜಿಕ ಚಿಂತನೆಗಳ ಹಾದಿಯಲ್ಲಿ ಕನಕದಾಸರು ಕ್ರಮಿಸಿದ ದೂರ, ಮಾಡಿದ ಮಹತ್ವ ಸಾಧನೆ ಆದರಣೀಯವಾದದ್ದು ಎಂದು ಬಣ್ಣಿಿಸಿದರು.
ಹರಿದಾಸ ಸಂಕೀರ್ತನೆಗಳನ್ನು ಕೈಗೊಳ್ಳುತ್ತಾಾ,ಊರು ಕೇರಿಗಳಲ್ಲಿ ಸಂಚರಿಸಿದ ಕನಕದಾಸರು, ಇದೇ ವೇಳೆ ಜೀವನದ ಸಾರ, ಅನುಭವ ದ್ರವ್ಯಗಳ ಮುಖೇನ ಸಮಾಜದ ಸ್ವಾಾಸ್ಥ್ಯಕ್ಕೆೆ ಅಗತ್ಯವಾದ ನೀತಿ ಬೋಧನೆಗಳನ್ನು, ಭಕ್ತಿಿ ರಸಪಾಕದಲ್ಲಿ ಸಂಗೀತ ಮಾಧುರ್ಯದಲ್ಲಿ ಹರಿಸಿದರೆಂದು ಶಾಸಕರು ಮಾರ್ಮಿಕವಾಗಿ ಹೇಳಿದರು.
ಜಾತಿ ವ್ಯವಸ್ಥೆೆಯನ್ನು ಸಾರಸಗಟ ವಿರೋಧಿಸುತ್ತಿಿದ್ದ ಕನಕದಾಸರು, ಕುಲ,ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲಯನೇನಾದರು ಬಲ್ಲಿರಾ ಎಂದು ಪ್ರಶ್ನಿಿಸುವ ಮೂಲಕ ಶತ. ಶತಮಾನಗಳ ಹಿಂದೆಯೇ ಜಾತಿರಹಿತ ಸಂತನಾಗಿದ್ದವರು ಕನಕದಾಸರೆಂದು ಶಾಸಕರು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಶ್ರಮ ಸಂಸ್ಕ್ರತಿಯ ವಿವೇಕ, ಚಿಂತನೆಯ ಪ್ರತೀಕದಂತೆಯೇ ಇದ್ದು, ಸಮ ಸಮಾಜವನ್ನು ಕಟ್ಟಿಿದ ಮಹಾನ್ ದಾರ್ಶನಿಕರಾಗಿದ್ದರು.
ವಚನ, ಹಾಡುಗಳ ಮೂಲಕ ಮೂಢನಂಬಿಕೆಗಳನ್ನು ಹೋಗಲಾಡಿಸಿದರೆಂದು ಹೇಳಿದರು.
ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸದಲಾಪುರ ಮಾತನಾಡಿ, ಸಮಾಜದ ಮಕ್ಕಳು ವಿದ್ಯಾಾವಂತರಾಗಬೇಕು. ವಿದ್ಯೆೆಯಿಂದಲೇ ಸಮಾಜದಲ್ಲಿ ಮನ್ನಣೆಯಿದೆ. ಕನಕದಾಸರು ಆಗಿನ ಕಾಲದಲ್ಲಿಯೇ ಜ್ಞಾನಿಗಳಾಗಿದ್ದರು. ಅವರ ಬದುಕಿನ ಆರ್ದಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದರು.
ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಉಪನ್ಯಾಾಸಕ ಸಾಬಣ್ಣ ಜುಬೇರಿ ಅವರು ಕನಕದಾಸರ ಬಗ್ಗೆೆ ವಿಶೇಷ ಉಪನ್ಯಾಾಸ ನೀಡಿದರು.
ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ್, ಸಂತ ಕವಿ ಕನಕದಾಸರ ಜಯಂತಿ ಸಮಿತಿ ಅಧ್ಯಕ್ಷ ಮಲ್ಲಣ್ಣ ಐಕೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಾಜದ ಹಿರಿಯ ಮುಖಂಡರಾದ ಚಂದ್ರಶೇಖರ ಕಾಡಂನೊರ, ಡಾ. ಭೀಮಣ್ಣಾಾ ಮೇಟಿ, ವಿವಿಧ ಗ್ರಾಾಮಗಳಿಂದ ಆಗಮಿಸಿದ್ದ ಅಪಾರ ಜನರು, ಕಾಲೇಜಿನ ವಿದ್ಯಾಾರ್ಥಿಗಳು ಸೇರಿದಂತೆಯೇ ಇತರರಿದ್ದರು.
ಭೀಮರಾಯ ಕೊಟ್ಟರಕಿ ನಿರೂಪಿಸಿದರು.
ಬಸವರಾಜ ಭಂಟನೂರ ಸಂಗಡಿಗರಿಂದ ಪ್ರಾಾರ್ಥನೆ, ನಾಡಗೀತೆ ನಡೆಯಿತು
ಬಾಕ್ಸ
ಕನಕ ಭವನ ನಿರ್ಮಾಣ, ವೃತ್ತದ ಅಭಿವೃದ್ಧಿಿಗೆ ಬದ್ದ.
ನಗರದಲ್ಲಿ ಕನಕ ಭವನ ನಿರ್ಮಾಣಕ್ಕೆೆ ತಾವು ಬದ್ದ. ಆದರೇ ನಗರಸಭೆಯಿಂದ ಸಮಾಜದ ಮುಖಂಡರು ಸ್ಥಳ ಪಡೆದುಕೊಳ್ಳಬೇಕು. ಕನಕ ವೃತ್ತದ ಅಭಿವೃದ್ಧಿಿಗೆ ಬೇಕಾದ ಅನುದಾನ ನೀಡುವುದಾಗಿ ಶಾಸಕ ಚನ್ನಾಾರೆಡ್ಡಿಿ ಪಾಟೀಲ್ ಭರವಸೆ ನೀಡಿದರು.
ಈ ವೇಳೆ ಕುರುಬ ಸಮಾಜದ ಮುಖಂಡರು ಸಲ್ಲಿಸಿದ ಬೇಡಿಕೆಗಳ ಮನವಿಗೆ ಸ್ಪಂದಿಸಿದ ಅವರು ಸಮಾಜದೊಂದಿಗೆ ಯಾವತ್ತು ಇರುವುದಾಗಿ ಹೇಳಿದರು.

