ಸುದ್ದಿಮೂಲ ವಾರ್ತೆ ರಾಯಚೂರು, ನ.08:
ಇಂದಿನ ಮಕ್ಕಳಿಗೆ ಪಾಲಕರು ಮೊಬೈಲ್ ನೀಡದೆ ಅವರಿಗೆ ಕ್ರೀಡಾಸಕ್ತಿಿ ಬೆಳೆಸುವ ಮೂಲಕ ಸಾಧಕರನ್ನಾಾಗಿ ಮಾಡುವಂತೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್ ಬೋಸರಾಜ್ ಹೇಳಿದರು.
ನಗರದ ವಿಕ್ಟೋೋರಿ ಬ್ಯಾಾಡ್ಮಿಿಂಟನ್ ಅಕಾಡೆಮಿ ಹಾಗೂ ಎನ್ಎಸ್ ಬೋಸರಾಜು ೌಂಡೇಷನ್ ಸಹಯೋಗದೊಂದಿಗೆ ಯುನೆಕ್ಸ್ ಸನ್ ರೈಸ್ ಕರ್ನಾಟಕ ರಾಜ್ಯ ಬ್ಯಾಾಡ್ಮಿಿಂಟನ್ ಟೂರ್ನಮೆಂಟ್ ಕ್ರೀಡಾಕೂಟ ಉದ್ಘಾಾಟಿಸಿ ಮಾತನಾಡಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ 500 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವುದು ಮಕ್ಕಳಲ್ಲಿರುವ ಪ್ರತಿಭೆ ಪರಿಚಯವಾಗಲು ಅನುಕೂಲವಾಗಲಿದೆ ಎಂದರು.
ಇಂತಹ ಕ್ರೀೆಡಾಕೂಟಗಳ ಮೂಲಕ ನಮ್ಮ ಜಿಲ್ಲೆಯಲ್ಲಿರುವ ಪ್ರತಿಭೆಗಳಿಗೂ ಕಲಿಯಲು ಪ್ರೋೋತ್ಸಾಾಹ ಸಿಗಲು ಸಾಧ್ಯವಾಗಲಿದೆ. ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಕ್ರೀೆಡಾಂಗಣಕ್ಕೆೆ ಬೇಕಾದ ಮೂಲ ಸೌಲಭ್ಯ ಒದಗಿಸಲು ಮುಂದಿನ ದಿನಗಳಲ್ಲಿ ಕ್ರೀಡಾಂಗಣ ಅಭಿವೃದ್ಧಿಿಗೆ ಪ್ರಯತ್ನಿಿಸಲಾಗುವುದು ಎಂದರು.
ಮಕ್ಕಳಲ್ಲಿ ಕ್ರೀೆಡಾ ಮನೋಭಾವನೆ ತುಂಬುವ ಕೆಲಸ ಮಾಡಬೇಕು. ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಿಗಲಿದೆ. ಇಂತಹ ಕ್ರೀೆಡಾಕೂಟಗಳನ್ನು ಆಯೋಜಿಸುವ ಕ್ರೀೆಡಾ ಪ್ರೇೇಮಿಗಳ ಕಾರ್ಯಕ್ಕೆೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಮೇಯರ್ ನರಸಮ್ಮ ನರಸಿಂಹಲು ಮಾಡಗಿರಿ, ಉಪ ಮೇಯರ್ ಸಾಜಿದ್, ಸಮೀರ, ಕಾಂಗ್ರೆೆಸ್ ಮುಖಂಡರಾದ ಮೊಹಮ್ಮದ್ ಶಾಲಂ, ಜಯಣ್ಣ, ಕೆ ಶಾಂತಪ್ಪ, ಜಿ ಶಿವಮೂರ್ತಿ, ಅಮರೇಗೌಡ ಹಂಚಿನಾಳ, ನರಸಿಂಹಲು ಮಾಡಗಿರಿ, ವಿಕ್ಟೋೋರಿ ಬ್ಯಾಾಡ್ಮಿಿಂಟನ್ ಅಕಾಡೆಮಿ ಉಸ್ತುವಾರಿ ಅರವಿಂದ್, ಕಿರಣ್ ಬೆಲ್ಲಂ, ಯುವ ಮುಖಂಡರಾದ ಸುಮನ್, ವಿಶ್ವೇಶ್ವರರಾವ್, ನರೇಶ, ಕ್ರೀೆಡಾ ಮತ್ತು ಯುವ ಸಬಲೀಕರಣ ಇಲಾಖೆಯ ಅಧಿಕಾರಿ ವೀರೇಶ್ ನಾಯಕ ಸೇರಿದಂತೆ ಅನೇಕರು ಉಪಸ್ಥಿಿತರಿದ್ದರು.

