ಸುದ್ದಿಮೂಲ ವಾರ್ತೆ
ರಾಯಚೂರು,ನ.08-
ಕನಕದಾಸರ ಕೀರ್ತನೆಗಳು ಸಮ ಸಮಾಜದ ಕನಸನ್ನು ಬಿತ್ತುವಂತಿದ್ದು ಅವರ ಜೀವನ ಬೋಧನೆಗಳು ಇಂದಿಗೂ ಲಕ್ಷಾಂತರ ಜನರಿಗೆ ಮಾರ್ಗದರ್ಶನ ಹಾಗೂ ಸ್ಪೂರ್ತಿಯಾಗಿವೆ ಎಂದು ಶಾಸಕ ಬಸನಗೌಡ ದದ್ದಲ್ ಹೇಳಿದರು.
ನಗರದ ಪಂ.ಸಿದ್ಧರಾಮ ಜಂಬಲದಿನ್ನಿಿ ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಾ, ತಾಲೂಕು ಕುರುಬರ ಸಂಘದಿಂದ ಹಮ್ಮಿಿಕೊಂಡಿದ್ದ ಸಂತಕವಿ ಶ್ರೀ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು.
ಕನಕದಾಸರು ಓರ್ವ ಮಹಾನ್ ಹರಿದಾಸ, ಸಂತ ಹಾಗೂ ತತ್ವ ಜ್ಞಾನಿಯಾಗಿದ್ದಾರೆ. ಕರ್ನಾಟಕದ ಭಕ್ತಿಿ ಚಳುವಳಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಾರೆ ಎಂದು ಸ್ಮರಿಸಿದ ಅವರು ಹಾಲುಮತ ಸಮಾಜದ ಕೊಡುಗೆಯು ನಾಡಿನ ಅಭಿವೃದ್ಧಿಿಯಲ್ಲಿ ಪ್ರಮುಖವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಗರ ಶಾಸಕ ಡಾ.ಶಿವರಾಜ ಎಸ್.ಪಾಟೀಲ್ ಮಾತನಾಡಿ, ಹಾಲುಮತ ಸಮಾಜ ನಾಡಿನಲ್ಲಿ ದೊಡ್ಡ ಸಮುದಾಯವಾಗಿದ್ದು ಈ ಸಮಾಜಕ್ಕೆೆ ದೊಡ್ಡ ಶಕ್ತಿಿಯಿದೆ ಎಂದರು. ನಗರದಲ್ಲಿ ಕನಕ ಭವನ ನಿರ್ಮಾಣಕ್ಕೆೆ ಒತ್ತು ಕೊಡಲಾಗಿದೆ. ಇದಕ್ಕಾಾಗಿ ಅಗತ್ಯ ಅನುದಾನ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಶಾಸಕ ಎ.ವಸಂತ ಕುಮಾರ ಮಾತನಾಡಿ, ಹಾಲುಮತ ಸಮಾಜದವರು ಜಾಗೃತರಾಗಬೇಕು. ಸಮಾಜವು ಒಗ್ಗಟ್ಟಾಾಗಿ ಮುಂದೆ ಬರಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ನಿತೀಶ್ ಕೆ. ಮಾತನಾಡಿ, ಕನಕದಾಸರ ಸಾಹಿತ್ಯ ಅಧ್ಯಯನ ಮಾಡಬೇಕು. ನಾವೆಲ್ಲರು ಒಂದು ಎನ್ನುವ ಅವರ ಜೀವನ ಸಂದೇಶ ಅರಿಯಬೇಕು ಎಂದರು.
ವಿಶೇಷ ಉಪನ್ಯಾಾಸಕ ನೀಡಿದ ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಾಧ್ಯಾಾಪಕ ಡಾ.ಪ್ರಾಾಣೇಶ್ ಕುಲಕರ್ಣಿ ಮಾತನಾಡಿ, ಭಕ್ತ ಕನಕದಾಸರು ಕರ್ನಾಟಕದಲ್ಲಿ 15-16ನೇ ಶತಮಾನಗಳಲ್ಲಿ ಭಕ್ತಿಿ ಪಂಥದ ಮುಖ್ಯ ಹರಿದಾಸರಲ್ಲಿ ಪ್ರಮುಖರಾಗಿದ್ದರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರಾಗಿದ್ದರು. ಇವರು ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು ಆಗಿದ್ದರು. ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಾಂತಗಳಿಗೆ ಕಾಣಿಕೆಯನ್ನಿಿತ್ತ ಕನಕದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿಿನಿ ದೇವರೆಂದು ಬಣ್ಣಿಿಸಲಾಗಿದೆ ಎಂದರು. ಬಾಲ್ಯದ ಜೀವನ ಆನಂದದಿಂದ ಸಾಗಿಸಿ ಬೆಳೆದು ದೊಡ್ಡವರಾದರು. ಅನೇಕ ಅಧ್ಯಾಾತ್ಮಿಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಆಧ್ಯಾಾತ್ಮಿಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಸತ್ಯದ ಹಾದಿಯಲ್ಲಿ ನಡೆಯುವ ಪ್ರಯತ್ನ ಮಾಡಿದರು. ಜಾತಿ ವ್ಯವಸ್ಥೆೆಯ ಬಗ್ಗೆೆ ಸಮರ ಸಾರಿ, ಜಾತ್ಯತೀತತೆಯ ಭಾವನೆ ಸರ್ವರಲ್ಲಿಯೂ ಮೂಡಿಸಲು ಪ್ರಯತ್ನಿಿಸಿದರು ಎಂದರು.
ಇದೇ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಕೆ.ಕರಿಯಪ್ಪ ಸಿಂಧನೂರ ಅವರಿಗೆ ಕನಕರತ್ನ ಪ್ರಶಸ್ತಿಿಘಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪತ್ರಕರ್ತ ಶ್ರೀಕಾಂತಸಾವೂರು, ಲಿಂಗಪ್ಪ ಪೂಜಾರಿ, ಸೂಗೂರೇಶ ಅಸ್ಕಿಿಹಾಳ, ರಾಜಶ್ರೀಕಲ್ಲೂರಕರ್, ಸರಸ್ವತಿ ಕಿಲಕಲೆ ಸೇರಿ ಹಲವರಿಗೆ ಕನಕಶ್ರೀ ಪ್ರಶಸ್ತಿಿ ನೀಡಿ ಗೌರವಿಸಲಾಯಿತು.
ಇದಕ್ಕೂ ಮುನ್ನ ನಗರದ ಗಂಜ್ ವೃತ್ತದಿಂದ ಪಂ.ಸಿದ್ಧರಾಮ ಜಂಬಲದಿನ್ನಿಿ ರಂಗಮಂದಿರದವರೆಗೂ ಶ್ರೀ ಕನಕದಾಸರ ಭಾವಚಿತ್ರದ ಡೊಳ್ಳು ಭಾಜಿ ಭಜಂತ್ರಿಿಯೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು.
ಸಮಾರಂಭದಲ್ಲಿ ಮಟಮಾರಿ ಶಿವಾನಂದ ಮಠದ ಪರಮಪೂಜ್ಯ ಶ್ರೀ ಜ್ಞಾನಾನಂದ ಮಹಾರಾಜರು, ತುರ್ವಿಹಾಳ ಗುರು ಅಮೋಘಸಿದ್ದೇಶ್ವರ ಮಠದ ಪೂಜ್ಯ ಮಾದಯ್ಯಸ್ವಾಾಮಿ, ಲಕ್ಷ್ಮಣ ತಾತಾ, ರಾಯಚೂರು ಮಹಾನಗರ ಪಾಲಿಕೆಯ ಮೇಯರ್ ನರಸಮ್ಮ ಮಾಡಗಿರಿ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಎಸ್ಪಿ ಎಂ.ಪುಟ್ಟಮಾದಯ್ಯ, ಪಾಲಿಕೆಯ ಉಪ ಆಯುಕ್ತರಾದ ಸಂತೋಷ ರಾಣಿ, ಸಮಾಜದ ಅಧ್ಯಕ್ಷ ಕೆ.ಬಸವಂತಪ್ಪ, ಬಿ.ಬಸವರಾಜ, ಮುಖಂಡರಾದ ಮಹಾದೇವಪ್ಪ ಮಿರ್ಜಾಪುರ, ನೀಲಕಂಠ, ಕಸ್ತೂರಮ್ಮ ಬೀರಪ್ಪ, ನಾಗರಾಜ ಮಡ್ಡಿಿಪೇಟ್, ನಾಗವೇಣಿ , ನಾಗರತ್ನ, ಹನುಮಂತಪ್ಪ ಜಾಲಿಬೆಂಚಿ, ಶೇಖರ ವಾರದ ಸೇರಿದಂತೆ ಸಮಾಜದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು,
ವಿದ್ಯಾಾರ್ಥಿಗಳು ಮತ್ತು ಸಾರ್ವಜನಿಕರು ಇದ್ದರು.

